ಜಗದೀಪ್ ಧನ್ ಕರ್  
ದೇಶ

ಜಗದೀಪ್ ಧನ್ಕರ್ ಅವರ ರಾಜೀನಾಮೆ ಹಿಂದೆ ಬಲವಾದ ಬೇರೆ ಕಾರಣಗಳಿವೆ: ಕಾಂಗ್ರೆಸ್

ಕೆಲವು ಚರ್ಚೆಯ ನಂತರ, ಬಿಎಸಿ ಸಂಜೆ 4:30 ಕ್ಕೆ ಮತ್ತೆ ಸಭೆ ಸೇರಲು ನಿರ್ಧರಿಸಿತ. ಸಂಜೆ 4:30 ಕ್ಕೆ, ಜಗದೀಪ್ ಧಂಖರ್ ಅವರ ಅಧ್ಯಕ್ಷತೆಯಲ್ಲಿ ಬಿಎಸಿ ಮತ್ತೆ ಸಭೆ ಸೇರಿತು ಎಂದು ಕಾಂಗ್ರೆಸ್ ಸಂವಹನಾ ವಿಬಾಗ ಉಸ್ತುವಾರಿ ಜೈರಾಂ ರಮೇಶ್ ಹೇಳಿದ್ದಾರೆ.

ನವದೆಹಲಿ: ಜಗದೀಪ್ ಧನ್ ಕರ್ ಅವರು ದೇಶದ ಅತ್ಯಂತ ಪ್ರಮುಖ ಸಾಂವಿಧಾನಿಕ ಹುದ್ದೆಯಾದ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರದಲ್ಲಿ ಅನಾರೋಗ್ಯ ಕಾರಣವನ್ನು ನೀಡಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷ ಕಾಂಗ್ರೆಸ್ ಜಗದೀಪ್ ಧನ್ ಕರ್ ಅವರ ರಾಜೀನಾಮೆ ಹಿಂದೆ ಹೆಚ್ಚು ಆಳವಾದ ಕಾರಣಗಳಿವೆ ಎಂದು ಹೇಳಿದೆ. ಜಗದೀಪ್ ಧನ್ ಕರ್ ಅವರ ರಾಜೀನಾಮೆ ಅವರ ಬಗ್ಗೆ ಉತ್ತಮ ಅಭಿಪ್ರಾಯವನ್ನುಂಟುಮಾಡಿದರೆ ಅವರನ್ನು ಆ ಹುದ್ದೆಗೆ ಆಯ್ಕೆ ಮಾಡಿದವರ ಆಯ್ಕೆ ಸರಿಯಾಗಿರಲಿಲ್ಲ ಎಂಬುದನ್ನು ತೋರಿಸುತ್ತದೆ ಎಂದರು.

ನಿನ್ನೆ ಸೋಮವಾರ ಮಧ್ಯಾಹ್ನ 12.30 ಕ್ಕೆ ಉಪ ರಾಷ್ಟ್ರಪತಿಗಳಾದ ಧನ್ ಕರ್ ಅವರು ರಾಜ್ಯಸಭೆಯ ವ್ಯವಹಾರ ಸಲಹಾ ಸಮಿತಿಯ ಅಧ್ಯಕ್ಷತೆ ವಹಿಸಿದ್ದರು. ಸದನದ ನಾಯಕ ಜೆ.ಪಿ. ನಡ್ಡಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಹೆಚ್ಚಿನ ಸದಸ್ಯರು ಇದರಲ್ಲಿ ಭಾಗವಹಿಸಿದ್ದರು.

ಕೆಲವು ಚರ್ಚೆಯ ನಂತರ, ಬಿಎಸಿ ಸಂಜೆ 4:30 ಕ್ಕೆ ಮತ್ತೆ ಸಭೆ ಸೇರಲು ನಿರ್ಧರಿಸಿತ. ಸಂಜೆ 4:30 ಕ್ಕೆ, ಜಗದೀಪ್ ಧಂಖರ್ ಅವರ ಅಧ್ಯಕ್ಷತೆಯಲ್ಲಿ ಬಿಎಸಿ ಮತ್ತೆ ಸಭೆ ಸೇರಿತು ಎಂದು ಕಾಂಗ್ರೆಸ್ ಸಂವಹನಾ ವಿಬಾಗ ಉಸ್ತುವಾರಿ ಜೈರಾಂ ರಮೇಶ್ ಹೇಳಿದ್ದಾರೆ.

ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಮತ್ತು ಕಿರಣ್ ರಿಜಿಜು ಬರುವವರೆಗೂ ಸಭೆ ಕಾಯುತ್ತಿತ್ತು. ಅವರು ಎಂದಿಗೂ ಬರಲಿಲ್ಲ. ಇಬ್ಬರು ಹಿರಿಯ ಸಚಿವರು ಹಾಜರಾಗುತ್ತಿಲ್ಲ ಎಂದು ಜಗದೀಪ್ ಧಂಖರ್‌ ಅವರಿಗೆ ವೈಯಕ್ತಿಕವಾಗಿ ತಿಳಿಸಲಾಗಿಲ್ಲ. ಅವರು ಕೋಪಗೊಂಡು ಇಂದು ಮಧ್ಯಾಹ್ನ 1 ಗಂಟೆಗೆ ಬಿಎಸಿಯನ್ನು ಮರು ನಿಗದಿಪಡಿಸಿದ್ದು ಅವರ ನಡೆ ಸರಿಯಾಗಿತ್ತು. ಅದಾದ ನಂತರ ನಿನ್ನೆ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4:30 ರವರೆಗೆ ತುಂಬಾ ಗಂಭೀರವಾದ ವಿಷಯ ಏನೋ ಸಂಭವಿಸಿದೆ ಎಂದು ಸಂದೇಹವನ್ನು ಜೈರಾಂ ರಮೇಶ್ ಪೋಸ್ಟ್ ನಲ್ಲಿ ಹೊರಹಾಕಿದ್ದಾರೆ.

ನಿಜವಾಗಿಯೂ ಅಭೂತಪೂರ್ವ ನಡೆಯಲ್ಲಿ, ಜಗದೀಪ್ ಧಂಖರ್ ರಾಜೀನಾಮೆ ನೀಡಿದ್ದಾರೆ. ಅವರು ಹಾಗೆ ಮಾಡಲು ಆರೋಗ್ಯ ಕಾರಣಗಳನ್ನು ನೀಡಿದ್ದಾರೆ. ಅವುಗಳನ್ನು ಗೌರವಿಸಬೇಕು. ಆದರೆ ಅವರ ರಾಜೀನಾಮೆಗೆ ಹೆಚ್ಚು ಆಳವಾದ ಕಾರಣಗಳಿವೆ ಎಂಬುದು ಸತ್ಯ" ಎಂದು ರಮೇಶ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್ ಅವರು, ಜಗದೀಪ್ ಧನ್ ಕರ್ ಅವರ ರಾಜೀನಾಮೆ ಬಗ್ಗೆ ಕೇಂದ್ರಕ್ಕೆ ಮೊದಲೇ ಮಾಹಿತಿ ಇತ್ತೇ ಎಂದು ಸ್ಪಷ್ಟಪಡಿಸುವಂತೆ ಕೇಳಿದ್ದಾರೆ.

ಉಪ ರಾಷ್ಟ್ರಪತಿ ಹುದ್ದೆ ಪರಿವರ್ತನೆ ಯೋಜನೆಯ ಬಗ್ಗೆ ಗೊಗೊಯ್ ಸರ್ಕಾರದಿಂದ ಸ್ಪಷ್ಟೀಕರಣವನ್ನು ಕೋರಿದ್ದಾರೆ. ಉಪ ರಾಷ್ಟ್ರಪತಿಯವರ ರಾಜೀನಾಮೆ ಆಘಾತಕಾರಿಯಾಗಿದೆ. ಧನ್ ಕರ್ ಅವರ ಆರೋಗ್ಯ ಸುಧಾರಿಸಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಧನ್ ಕರ್ ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವೊಲಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.

74 ವರ್ಷದ ಧನ್ ಕರ್ ಅವರು ಆಗಸ್ಟ್ 2022 ರಲ್ಲಿ ಅಧಿಕಾರ ವಹಿಸಿಕೊಂಡರು, ಅವರ ಅಧಿಕಾರಾವಧಿ 2027 ರವರೆಗೆ ಇರಬೇಕಿತ್ತು. ಅವರು ರಾಜ್ಯಸಭೆಯ ಅಧ್ಯಕ್ಷರೂ ಆಗಿದ್ದರು. ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನದಂದು ಅವರು ರಾಜೀನಾಮೆ ನೀಡಿದ್ದಾರೆ.

ಜಗದೀಪ್ ಧನ್ ಕರ್ ಅವರು ಇತ್ತೀಚೆಗೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (AIIMS) ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು. ರಾಜ್ಯಸಭೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರು ವಿರೋಧ ಪಕ್ಷಗಳೊಂದಿಗೆ ಹಲವಾರು ಬಾರಿ ವಿವಾದಕ್ಕೆ ಗುರಿಯಾಗಿದ್ದರು. ಅವರ ಮೇಲೆ ದೋಷಾರೋಪಣೆ ಮಾಡಲು ಪ್ರಸ್ತಾವನೆಯನ್ನು ಸಹ ಮಂಡಿಸಿತ್ತು. ಸ್ವತಂತ್ರ ಭಾರತದಲ್ಲಿ ಉಪ ರಾಷ್ಟ್ರಪತಿಗಳನ್ನು ಪದಚ್ಯುತಗೊಳಿಸಲು ಕೋರಿ ಸಲ್ಲಿಸಿದ ಮೊದಲ ನಿರ್ಣಯವನ್ನು ನಂತರ ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ತಿರಸ್ಕರಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Cash for query: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ; ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಲೋಕಪಾಲ ಅನುಮತಿ!

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಶಾಲಾ ಶಿಕ್ಷಕ, BJP ನಾಯಕ ಪದ್ಮರಾಜನ್ ಗೆ ಸಾಯೋವರೆಗೂ ಜೈಲು!

ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ 'ಮಹಾಘಟಬಂಧನ್' ಗೆ ತಿಲಾಂಜಲಿ; ಏಕಾಂಗಿ ಸ್ಪರ್ಧೆಗೆ ಕಾಂಗ್ರೆಸ್ 'ಮಹಾ' ನಿರ್ಧಾರ!

ಬಿಹಾರದಲ್ಲಿ ಟೈಗರ್‌ ಅಬಿ ಜಿಂದಾ ಹೈ (ನೇರ ನೋಟ)

ಬಿಹಾರ ಚುನಾವಣೆ: 3 ಲಕ್ಷ ಮತಗಳ ಏರಿಕೆ ಬಗ್ಗೆ ಕಾಂಗ್ರೆಸ್ ನಿಂದ ಮತ್ತೆ ಕಿರಿಕ್; ಚುನಾವಣಾ ಆಯೋಗ ಹೇಳಿದ್ದೇನು?

SCROLL FOR NEXT