ಬಂಡಿ ಸಂಜಯ್ ಕುಮಾರ್ 
ದೇಶ

2024 ರಲ್ಲಿ ಭಾರತೀಯರು ಆನ್‌ಲೈನ್ ವಂಚಕರಿಂದ 22,845 ಕೋಟಿ ರೂಪಾಯಿಗೂ ಹೆಚ್ಚು ಕಳೆದುಕೊಂಡಿದ್ದಾರೆ: ಕೇಂದ್ರ

ಇದು ಹಿಂದಿನ ವರ್ಷದಲ್ಲಿ 7,465.18 ಕೋಟಿ ರೂ.ಗಳಿಗೆ ಹೋಲಿಸಿದರೆ ಇದು ಶೇ. 206 ರಷ್ಟು ಹೆಚ್ಚಳವಾಗಿದೆ ಎಂದರು.

ನವದೆಹಲಿ: 2024 ರಲ್ಲಿ ಭಾರತೀಯರು ಸೈಬರ್ ವಂಚನೆ ಪ್ರಕರಣಗಳಲ್ಲಿ 22,845.73 ಕೋಟಿ ರೂ.ಗಳಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ(MHA) ಮಂಗಳವಾರ ಲೋಕಸಭೆಗೆ ತಿಳಿಸಿದೆ. ಇದು ಹಿಂದಿನ ವರ್ಷದ ಅಂಕಿಅಂಶಕ್ಕೆ ಹೋಲಿಸಿದರೆ ಸುಮಾರು ಶೇ. 206 ರಷ್ಚು ಭಾರಿ ಏರಿಕೆಯಾಗಿದೆ.

ಇಂದು ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ(MoS) ಬಂಡಿ ಸಂಜಯ್ ಕುಮಾರ್ ಅವರು, MHA ಅಡಿಯಲ್ಲಿ I4C ನಿರ್ವಹಿಸುವ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ (NCRP) ಮತ್ತು ನಾಗರಿಕ ಹಣಕಾಸು ಸೈಬರ್ ವಂಚನೆ ವರದಿ ಮತ್ತು ನಿರ್ವಹಣಾ ವ್ಯವಸ್ಥೆ (CFCFRMS) ಪ್ರಕಾರ, 2024 ರಲ್ಲಿ "ಇಡೀ ದೇಶದಲ್ಲಿ ಸೈಬರ್ ವಂಚನೆಗಳಿಂದಾಗಿ ನಾಗರಿಕರು ಒಟ್ಟು 22,845.73 ಕೋಟಿ ರೂ. ಕಳೆದುಕೊಂಡಿದ್ದಾರೆ. ಇದು ಹಿಂದಿನ ವರ್ಷದಲ್ಲಿ 7,465.18 ಕೋಟಿ ರೂ.ಗಳಿಗೆ ಹೋಲಿಸಿದರೆ ಇದು ಶೇ. 206 ರಷ್ಟು ಹೆಚ್ಚಳವಾಗಿದೆ ಎಂದರು.

2023 ರಲ್ಲಿ NCRP ಮತ್ತು CFCFRMSನಲ್ಲಿ 24,42,978 ವಂಚನೆ ಪ್ರಕರಣಗಳು ದಾಖಲಾಗಿದ್ದವು ಮತ್ತು 2024 ರಲ್ಲಿ 36,37,288 ಆನ್‌ಲೈನ್ ಹಣಕಾಸು ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ಸಚಿವರು ತಿಳಿಸಿದ್ದಾರೆ.

MoS ಹಂಚಿಕೊಂಡ ಮಾಹಿತಿಯ ಪ್ರಕಾರ, 2022 ರಲ್ಲಿ NCRP ನಲ್ಲಿ 10,29,026 ಸೈಬರ್ ಅಪರಾಧಗಳು ವರದಿಯಾಗಿವೆ, ಹಿಂದಿನ ವರ್ಷಕ್ಕಿಂತ ಶೇ. 127.44 ರಷ್ಟು ಹೆಚ್ಚಳವಾಗಿದೆ. 2023 ರಲ್ಲಿ 15,96,493 ಪ್ರಕರಣಗಳು ವರದಿಯಾಗಿವೆ. ಇದು ಶೇ. 55.15 ರಷ್ಟು ಹೆಚ್ಚಳ ಮತ್ತು 2024 ರಲ್ಲಿ 22,68,346 ಪ್ರಕರಣಗಳು ವರದಿಯಾಗಿವೆ. ಇದು ಶೇ. 42.08 ರಷ್ಟು ಹೆಚ್ಚಳವಾಗಿದೆ.

"ಹಣಕಾಸಿನ ವಂಚನೆಗಳನ್ನು ತಕ್ಷಣ ವರದಿ ಮಾಡಲು ಮತ್ತು ವಂಚನೆ ತಡೆಯಲು CFCFRMS ಅನ್ನು I4C ಅಡಿಯಲ್ಲಿ 2021 ರಲ್ಲಿ ಪ್ರಾರಂಭಿಸಲಾಯಿತು" ಎಂದ ಸಚಿವರು, ಆದಾಗ್ಯೂ, ಇಲ್ಲಿಯವರೆಗೆ ಅದರ ಬಗ್ಗೆ ವರದಿಯಾದ 17.82 ಲಕ್ಷಕ್ಕೂ ಹೆಚ್ಚು ದೂರುಗಳಲ್ಲಿ 5,489 ಕೋಟಿ ರೂ. ಉಳಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಮೋದಿಯವರು ಅವಮಾನ ಸಹಿಸುವುದಿಲ್ಲ, ಅವರು ಬುದ್ಧಿವಂತ ನಾಯಕ, ತಲೆಬಾಗಿಕೊಂಡು ಹೋಗುವವರಲ್ಲ': US tariffs ಮಧ್ಯೆ ಪುಟಿನ್ ಪ್ರಶಂಸೆ ಮಾತು!

ಲಡಾಖ್: ಪತಿಯ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ವಾಂಗ್ಚುಕ್ ಪತ್ನಿ ಗೀತಾಂಜಲಿ

ಆಡಳಿತ ವೈಫಲ್ಯದ ಲಾಭ ಪಡೆಯಲೂ ವಿಫಲವಾಗಿರುವ ಪ್ರತಿಪಕ್ಷ ಬಿಜೆಪಿ (ನೇರ ನೋಟ)

ರಾಜ್ಯಕ್ಕೆ 3,705 ಕೋಟಿ ರೂ. ತೆರಿಗೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ..!

ಪೇಸ್‌ಮೇಕರ್‌ ಅಳವಡಿಕೆ ಯಶಸ್ವಿ: ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ಸ್ಥಿರ, ಆಸ್ಪತ್ರೆಯಿಂದ ಡಿಸ್‌ಚಾರ್ಜ್

SCROLL FOR NEXT