ಸಂಸತ್‌ನಲ್ಲಿ ಕೋಲಾಹಲ: ಉಭಯ ಸದನ ಕಲಾಪಗಳು ನಾಳೆಗೆ ಮುಂದೂಡಿಕೆ Photos | PTI
ದೇಶ

ಬಿಹಾರ ಮತದಾರರ ಪರಿಷ್ಕರಣೆ ವಿರುದ್ಧ ಸಂಸತ್‌ನಲ್ಲಿ ಕೋಲಾಹಲ: ಉಭಯ ಸದನ ಕಲಾಪಗಳು ನಾಳೆಗೆ ಮುಂದೂಡಿಕೆ!

ಬಿಹಾರದಲ್ಲಿ ಚುನಾವಣಾ ಆಯೋಗ ಆರಂಭಿಸಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಹಿಂಪಡೆಯುವಂತೆ ಮತ್ತು ಚರ್ಚೆಯನ್ನು ಮುಂದೂಡುವಂತೆ ವಿಪಕ್ಷಗಳು ಒತ್ತಾಯಿಸಿದ್ದವು.

ನವದೆಹಲಿ: ಬಿಹಾರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದ್ದು ಹೀಗಾಗಿ ಸಂಸತ್ತಿನ ಉಭಯ ಸದನಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ ನಂತರ ಲೋಕಸಭೆಯನ್ನು ಮುಂದೂಡಲಾಯಿತು. ಒಂದು ಕಡೆ ವಿಪಕ್ಷಗಳು ಚರ್ಚೆಗೆ ಒತ್ತಾಯಿಸುತ್ತಿವೆ. ಮತ್ತೊಂದೆಡೆ ಸದನಕ್ಕೆ ಅಡ್ಡಿಪಡಿಸುವ ಮೂಲಕ 'ದ್ವಿಮುಖ ನೀತಿ' ಅನುಸರಿಸುತ್ತಿದೆ ಎಂದು ಸರ್ಕಾರ ಆರೋಪಿಸಿದೆ.

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ಚುನಾವಣಾ ಆಯೋಗ ಆರಂಭಿಸಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಹಿಂಪಡೆಯುವಂತೆ ಮತ್ತು ಚರ್ಚೆಯನ್ನು ಮುಂದೂಡುವಂತೆ ವಿಪಕ್ಷಗಳು ಒತ್ತಾಯಿಸಿದ್ದವು. ಹೀಗಾಗಿ ಸಂಸತ್ತಿನ ಮಳೆಗಾಲದ ಅಧಿವೇಶನದ ಎರಡನೇ ದಿನದಂದು ಎರಡು ಬಾರಿ ಸದನವನ್ನು ಮುಂದೂಡಲಾಗಿತ್ತು. ನಂತರ ಮಧ್ಯಾಹ್ನ 2 ಗಂಟೆಗೆ ಸದನ ಮತ್ತೆ ಸೇರಿದಾಗ ವಿರೋಧ ಪಕ್ಷದ ಸದಸ್ಯರು ಲೋಕಸಭೆಯ ಬಾವಿಗೆ ಇಳಿದು ಪ್ರತಿಭಟಿಸಿದರು. ಹೀಗಾಗಿ ಸದನವನ್ನು ನಾಳೆಗೆ ಮುಂದೂಡಲಾಯಿತು.

ಸದನದ ಭಾವಿಗಿಳಿದಿದ್ದ ವಿರೋಧ ಪಕ್ಷದ ಸಂಸದರನ್ನು ತಮ್ಮ ಸ್ಥಳಗಳಿಗೆ ಹೋಗಿ ಕುಳಿತುಕೊಳ್ಳುವಂತೆ ಸದನವನ್ನು ಸುಗಮವಾಗಿ ನಡೆಯಲು ಅನುವು ಮಾಡಿಕೊಡುವಂತೆ ಸಭಾಧ್ಯಕ್ಷ ದಿಲೀಪ್ ಸೈಕಿಯಾ ಅವರು, ಪದೇ ಪದೇ ವಿನಂತಿಸಿದರು. ಆದರೆ ವಿಪಕ್ಷಗಳು ಪ್ರತಿಭಟನೆಯನ್ನು ಮುಂದುವರೆಸಿದರು. ಈ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಎದ್ದು ವಿರೋಧ ಪಕ್ಷದ ನಡವಳಿಕೆಯನ್ನು ಖಂಡಿಸಿದರು.

ನಿನ್ನೆ ನಡೆದ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಮೊದಲು ಆಪರೇಷನ್ ಸಿಂಧೂರ್ ಬಗ್ಗೆ ಚರ್ಚೆ ನಡೆಸಲಾಗುವುದು ಮತ್ತು ಅದಕ್ಕೆ ಸಮಯವನ್ನು ಸಹ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು. ಚರ್ಚೆ ನಡೆಯುವ ನಿಯಮವನ್ನು ಮಾತ್ರ ನಿರ್ಧರಿಸಲಾಗುತ್ತದೆ. ಅವರು ಫಲಕಗಳನ್ನು ಹಿಡಿದುಕೊಂಡು ಇಲ್ಲಿಗೆ ಬಂದು ನಿಯಮಗಳನ್ನು ಉಲ್ಲಂಘಿಸುತ್ತಾರೆ, ಇದನ್ನು ನಾನು ಖಂಡಿಸುತ್ತೇನೆ" ಎಂದು ರಿಜಿಜು ಹೇಳಿದರು.

ವಿಪಕ್ಷಗಳು ಚರ್ಚೆಗೆ ಕೇಳುತ್ತಿದ್ದಾರೆ ಮತ್ತು ನಾವು ಚರ್ಚೆಗೆ ಸಿದ್ಧರಿದ್ದೇವೆ. ಆದರೆ ಅವರು ಸದನವನ್ನು ಕಾರ್ಯರೂಪಕ್ಕೆ ತರಲು ಬಿಡುತ್ತಿಲ್ಲ ಎಂದು ರಿಜಿಜು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಈ 'ದ್ವಿಮುಖ ನೀತಿ ತಪ್ಪು'. ಒಂದೆಡೆ ಚರ್ಚಿಸುವಂತೆ ಕೇಳುತ್ತಾರೆ. ಮತ್ತೊಂದೆಡೆ ಈ ರೀತಿಯ ಗದ್ದಲವನ್ನು ಸೃಷ್ಟಿಸುತ್ತಾರೆ. ಸರ್ಕಾರ ಚರ್ಚೆಗೆ ಸಿದ್ಧವಾಗಿದೆ ಆದರೆ ವಿರೋಧ ಪಕ್ಷವು ಸಂಸತ್ತಿನ ಸಮಯವನ್ನು ವ್ಯರ್ಥ ಮಾಡುತ್ತಿದೆ ಎಂದು ರಿಜಿಜು ಹೇಳಿದರು.

74 ಲಕ್ಷ ಮತದಾರರ ಹುಡುಕಿ ಕೊಡಿ': ರಾಜಕೀಯ ಪಕ್ಷಗಳಿಗೆ Election Commission ಪ್ರಶ್ನೆ?

ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಅಕ್ರಮ ವಲಸಿಗರಿಗೆ ಮತ್ತು ನಕಲಿ ಮತದಾರರ ಸೃಷ್ಟಿಸುತ್ತಿದ್ದ ರಾಜಕೀಯ ಪಕ್ಷಗಳ Fake ಆಟಕ್ಕೆ ಕೇಂದ್ರ ಚುನಾವಣಾ ಆಯೋಕ ಚೆಕ್ ಇಟ್ಟಿದ್ದು, ಮಿಸ್ ಆಗಿರುವ 74 ಲಕ್ಷ ಮತದಾರರ ಹುಡುಕಿ ಕೊಡಿ ಎಂದು ರಾಜಕೀಯ ಪಕ್ಷಗಳ ಕೇಳಿದೆ. ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಸುತ್ತಿರುವ ಚುನಾವಣಾ ಆಯೋಗ, ನಾಪತ್ತೆಯಾಗಿರುವ ಅಂದಾಜು 74 ಲಕ್ಷ ಮತದಾರರನ್ನು ಹುಡುಕಿಕೊಡಿ ಎಂದು ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿದೆ. ರಾಜ್ಯದಲ್ಲಿ ಅಕ್ರಮ ವಲಸಿಗರು, ಸೂಕ್ತ ದಾಖಲೆ ಇಲ್ಲದವರ ಹೆಸರನ್ನು ಕೈಬಿಡುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಚಿವ ಸಂಪುಟ ಪುನಾರಚನೆ: ಆತುರದ ನಿರ್ಧಾರ ಕೈಗೊಳ್ಳದೆ, ಕಾದು ನೋಡುವ ತಂತ್ರ ಅಳವಡಿಸಿಕೊಂಡ 'ಕೈ' ಕಮಾಂಡ್

ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್‌ಗೆ ಆಡಳಿತ ವಿರೋಧಿ ಅಲೆ ಸಹಾಯ ಮಾಡುತ್ತದೆ: ಸಿಎಂ ಸಿದ್ದರಾಮಯ್ಯ

ನವರತ್ನ ಧಾರಣೆ: ಗ್ರಹಗಳ ಅಧಿಪತಿ 'ಸೂರ್ಯ'ನ ಫಲ ಪಡೆಯಲು ಯಾವ ರತ್ನ ಧರಿಸಬೇಕು?

ಉಪ ಮುಖ್ಯಮಂತ್ರಿಯಾಗಲು ನಾನು ಸಿದ್ಧ: ಹೈಕಮಾಂಡ್ ಬಯಸಿದರೆ ಸಚಿವ ಸ್ಥಾನ ತ್ಯಾಗ; ಜಮೀರ್‌ ಅಹ್ಮದ್‌ ಖಾನ್‌

ನ.18ರಿಂದ Bengaluru Tech Summit 2025: ‘ಡೀಪ್‌ಟೆಕ್ ದಶಕ’ಕ್ಕೆ 600 ಕೋಟಿ ರೂ. ಹೂಡಿಕೆ; ಸಚಿವ ಪ್ರಿಯಾಂಕ್ ಖರ್ಗೆ

SCROLL FOR NEXT