ಸಂಸತ್ತು ಹೊರಗೆ ಸಂಸದರು  
ದೇಶ

Monsoon Session Day 3 | ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆ: ಸಂಸತ್ತು ಉಭಯ ಸದನಗಳ ಕಲಾಪ ಮಧ್ಯಾಹ್ನ 2 ಗಂಟೆವರೆಗೆ ಮುಂದೂಡಿಕೆ

ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಕಲಾಪಕ್ಕೆ ಅಡ್ಡಿಪಡಿಸಿದ ನಂತರ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು.

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಮೂರನೇ ದಿನವಾದ ಇಂದು ಬುಧವಾರ ಕೂಡ ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ ಉಭಯ ಸದನಗಳ ಕಲಾಪ ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿಕೆಯಾಗಿದೆ.

ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಮತ್ತು ಆಪರೇಷನ್ ಸಿಂದೂರ್ ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚಿಸಲು ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗುವುದರೊಂದಿಗೆ ಲೋಕಸಭೆಯ ಅಧಿವೇಶನ ಪ್ರಾರಂಭವಾಯಿತು. ಪ್ರತಿಭಟನೆಗಳು ಸಭ್ಯತೆಯನ್ನು ಕಾಪಾಡಿಕೊಳ್ಳುವಂತೆ ಸ್ಪೀಕರ್ ಓಂ ಬಿರ್ಲಾ ಒತ್ತಾಯಿಸಿದರು. ಆದರೆ ಗದ್ದಲ ಮುಂದುವರಿದಂತೆ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು.

ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಕಲಾಪಕ್ಕೆ ಅಡ್ಡಿಪಡಿಸಿದ ನಂತರ ರಾಜ್ಯಸಭೆ ಕಲಾಪವನ್ನು ಆರಂಭದಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು. ಮತ್ತೆ ಸದನ ಸೇರಿದಾಗ ಗದ್ದಲ, ಕೋಲಾಹಲ ಮುಂದುವರಿದು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.

ಸಂಸತ್ತು ಕಾರ್ಯನಿರ್ವಹಿಸದಿದ್ದಾಗ ಸರ್ಕಾರ ಅತಿ ದೊಡ್ಡ ಫಲಾನುಭವಿ: ಡೆರೆಕ್ ಒ'ಬ್ರೇನ್

ತೃಣಮೂಲ ಕಾಂಗ್ರೆಸ್ (TMC) ನಾಯಕ ಡೆರೆಕ್ ಒ'ಬ್ರೇನ್ ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸಿದ್ದಕ್ಕಾಗಿ ಸರ್ಕಾರವನ್ನು ಟೀಕಿಸಿದರು, ಸಂಸತ್ತು ಕಾರ್ಯನಿರ್ವಹಿಸದಿದ್ದಾಗ ಕೇಂದ್ರ ಸರ್ಕಾರವು ಅತಿದೊಡ್ಡ ಫಲಾನುಭವಿ ಎಂದರು.

ಎಕ್ಸ್ ಖಾತೆಯಲ್ಲಿ ಅವರು ಪೋಸ್ಟ್ ಹಾಕಿ, ಕೇಂದ್ರ ಸರ್ಕಾರವು ಕಲಾಪದ ಎರಡು ದಿನವನ್ನು ಹಾಳುಮಾಡಿತು. ಸಂಸತ್ತು ಕಾರ್ಯನಿರ್ವಹಿಸದಿದ್ದಾಗ, ಯಾರಿಗೆ ಲಾಭ ಅಧಿಕಾರದಲ್ಲಿರುವ ಸರ್ಕಾರಕ್ಕೆ. ಸರ್ಕಾರ ಸಂಸತ್ತಿಗೆ ಜವಾಬ್ದಾರ; ಸಂಸತ್ತು ಜನರಿಗೆ ಜವಾಬ್ದಾರ. ಸಂಸತ್ತು ನಿಷ್ಕ್ರಿಯವಾಗಿದ್ದಾಗ, ಸರ್ಕಾರ ಯಾರಿಗೂ ಜವಾಬ್ದಾರನಾಗಿರುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಓ'ಬ್ರೇನ್ ಬ್ಲಾಗ್ ಪೋಸ್ಟ್‌ಗೆ ಲಿಂಕ್ ನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಮಳೆಗಾಲದ ಅಧಿವೇಶನವನ್ನು ಒಟ್ಟು 190 ಗಂಟೆಗಳ ಕಾಲ ನಿಗದಿಪಡಿಸಲಾಗಿದೆ, ಅದರಲ್ಲಿ ಶೇಕಡಾ 70ರಷ್ಟು ಸರ್ಕಾರಿ ವ್ಯವಹಾರಕ್ಕಾಗಿ ಮೀಸಲಿಡಲಾಗಿದೆ. ವಿರೋಧ ಪಕ್ಷದ ಸಂಸದರು ಪ್ರಶ್ನೋತ್ತರ ಅವಧಿಗೆ ಅರ್ಧದಷ್ಟು ಪ್ರಶ್ನೆಗಳನ್ನು ಮತ್ತು ಶೂನ್ಯ ಗಂಟೆಯ ಸೂಚನೆಗಳನ್ನು ನೀಡುತ್ತಾರೆ, ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಎತ್ತಲು ಅವರಿಗೆ 31 ಗಂಟೆಗಳ ಸಮಯವನ್ನು ನೀಡುತ್ತಾರೆ.

ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ಚರ್ಚೆಗಳಿಗೆ ಅವಕಾಶ ನೀಡಲು ಪ್ರತಿ ಸದನದಲ್ಲಿ ಪ್ರತಿ ವಾರ ನಾಲ್ಕು ಗಂಟೆಗಳನ್ನು ಕಾಯ್ದಿರಿಸಬೇಕು. ಗಮನ ಸೆಳೆಯುವ ಪ್ರಸ್ತಾಪಕ್ಕಾಗಿ ಹೆಚ್ಚುವರಿಯಾಗಿ ಎರಡು ಗಂಟೆಗಳನ್ನು ಮೀಸಲಿಡಬೇಕು. ಇದು ಸರ್ಕಾರಿ ವ್ಯವಹಾರಗಳಿಗೆ 117 ಗಂಟೆಗಳು ಮತ್ತು ವಿರೋಧ ಪಕ್ಷಗಳಿಗೆ 49 ಗಂಟೆಗಳಿಗೆ ಹಂಚಿಕೆಯನ್ನು ಪರಿಷ್ಕರಿಸುತ್ತದೆ, ಈ ಮಾದರಿಯು ಹೆಚ್ಚು ನ್ಯಾಯಯುತ ವ್ಯವಸ್ಥೆ ಎಂದು ಬರೆದುಕೊಂಡಿದ್ದಾರೆ.

ಬಿಹಾರ SIR ವಿರುದ್ಧ ವಿರೋಧ ಪಕ್ಷದ ಸಂಸದರ ಪ್ರತಿಭಟನೆ

ಮಳೆಗಾಲ ಅಧಿವೇಶನದ ಮೂರನೇ ದಿನ ಇಂದು ಕಲಾಪ ಉದ್ವಿಗ್ನತೆಯಿಂದ ಆರಂಭವಾಯಿತು, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಸಂಸದರು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಪ್ರತಿಭಟನೆಗಳು ನಡೆದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT