ಜಗದೀಪ್ ಧಂಖರ್  
ದೇಶ

Vice President ಹುದ್ದೆಗೆ ರಾಜೀನಾಮೆ: ಜಗದೀಪ್ ಧಂಖರ್ ಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳೇನು?

ಹಾಗಾದರೆ ಅವರಿಗೆ ಸರ್ಕಾರದ ಯಾವೆಲ್ಲಾ ಸ್ವತ್ತು, ಸವಲತ್ತುಗಳು ಸಿಗುತ್ತವೆ ಎಂದು ನೋಡುವುದಾದರೆ ದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾದ ವೈಸ್ ಪ್ರೆಸಿಡೆಂಟ್ ಎನ್ಕ್ಲೇವ್‌ನಲ್ಲಿ ವಾಸಿಸಿದ ಮೊದಲ ಉಪ ರಾಷ್ಟ್ರಪತಿಗಳು ಜಗದೀಪ್ ಧಂಖರ್.

ನವದೆಹಲಿ: ಉಪ ರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧಂಖರ್ ಅವರು ದಿಢೀರ್ ರಾಜೀನಾಮೆ ನೀಡಿದ್ದು ಅವರ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳು ಅಂಗೀಕರಿಸಿ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿ ಆಗಿದೆ. ಜಗದೀಪ್ ಧಂಖರ್ ಅವರು ಇನ್ನು ಮಾಜಿ ಉಪ ಮಾಷ್ಟ್ರಪತಿಗಳು.

ಹಾಗಾದರೆ ಅವರಿಗೆ ಸರ್ಕಾರದ ಯಾವೆಲ್ಲಾ ಸ್ವತ್ತು, ಸವಲತ್ತುಗಳು ಸಿಗುತ್ತವೆ ಎಂದು ನೋಡುವುದಾದರೆ ದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾದ ವೈಸ್ ಪ್ರೆಸಿಡೆಂಟ್ ಎನ್ಕ್ಲೇವ್‌ನಲ್ಲಿ ವಾಸಿಸಿದ ಮೊದಲ ಉಪ ರಾಷ್ಟ್ರಪತಿಗಳು ಜಗದೀಪ್ ಧಂಖರ್.

ಸುಮಾರು 15 ಎಕರೆಗಳಷ್ಟು ವಿಸ್ತಾರವಾದ ಸಂಕೀರ್ಣದಲ್ಲಿ ಅವರು ಸುಮಾರು ಒಂದೂವರೆ ವರ್ಷಗಳ ಕಾಲ ವಾಸಿಸುತ್ತಿದ್ದರು. ಈ ಎನ್ಕ್ಲೇವ್‌ನಲ್ಲಿ ಉಪ ರಾಷ್ಟ್ರಪತಿಗಳ ನಿವಾಸ(ಕಟ್ಟಡ + ನೆಲಮಾಳಿಗೆ), ಪ್ರತ್ಯೇಕ ಸಚಿವಾಲಯ ಕಟ್ಟಡ, ಅತಿಥಿ ಗೃಹ, ಸಿಬ್ಬಂದಿ ವಸತಿಗೃಹಗಳು, ಕ್ರೀಡಾ ಸೌಲಭ್ಯಗಳು ಮತ್ತು ಈಜುಕೊಳಗಳು ಇವೆ.

ಈ ಹಿಂದೆ, ಎಲ್ಲಾ ಉಪ ರಾಷ್ಟ್ರಪತಿಗಳು ಮೌಲಾನಾ ಆಜಾದ್ ರಸ್ತೆಯಲ್ಲಿರುವ ಉಪ ರಾಷ್ಟ್ರಪತಿಗಳ ನಿವಾಸದಲ್ಲಿ ವಾಸಿಸುತ್ತಿದ್ದರು.

ಧಂಖರ್‌ಗೆ ಸಿಬ್ಬಂದಿಯೊಂದಿಗೆ ಟೈಪ್ 8 ಬಂಗಲೆಯನ್ನು ನೀಡಲಾಗುವುದು. ಅವರಿಗೆ Z+ ಭದ್ರತೆಯೂ ಸಹ ಸಿಗುತ್ತದೆ. ಅವರು ತಿಂಗಳಿಗೆ 1, 25,000 ರೂಪಾಯಿ ಪಿಂಚಣಿ, ಸರ್ಕಾರಿ ಕಾರು, ಚಾಲಕ, ವೈದ್ಯಕೀಯ ಸೌಲಭ್ಯಗಳು ಮತ್ತು ಪ್ರಯಾಣ ಭತ್ಯೆಗಳನ್ನು ಇತರ ಪ್ರಯೋಜನಗಳ ಜೊತೆಗೆ ಪಡೆಯುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಯಕ್ಷಗಾನ ಕಲಾವಿದರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: KDA ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕೊಟ್ಟ ಸ್ಪಷ್ಟನೆಯೇನು?

Delhi Red Fort blast: ಜವಾಬ್ದಾರಿ ಮರೆತ ಕೆಲ ಮಾಧ್ಯಮಗಳಿಂದ ಸ್ಫೋಟಕ ತಯಾರಿಸುವ ಕುರಿತು ವರದಿ; ಎಚ್ಚರಿಕೆ ಕೊಟ್ಟ ಕೇಂದ್ರ ಸರ್ಕಾರ

Delhi Red Fort blast: ಡಿ.1 ರವರೆಗೆ ಅಲ್ ಫಲಾಹ್ ವಿವಿ ಸಂಸ್ಥಾಪಕ ಜಾವೆದ್ ಅಹ್ಮದ್ ಸಿದ್ದಿಕಿ ED ಕಸ್ಟಡಿಗೆ

ಮಹಾಯುತಿಯಲ್ಲಿ ಮತ್ತಷ್ಟು ಬಿರುಕು: ಫಡ್ನವೀಸ್ ನೇತೃತ್ವದ ಸಂಪುಟ ಸಭೆ 'ಬಹಿಷ್ಕರಿಸಿದ' ಶಿಂಧೆ ಸಚಿವರು!

ಆಸ್ಟ್ರೇಲಿಯಾದಲ್ಲಿ ಭೀಕರ ರಸ್ತೆ ಅಪಘಾತ: ಭಾರತೀಯ ಮೂಲದ 8 ತಿಂಗಳ ಗರ್ಭಿಣಿ- ಹೊಟ್ಟೆಯಲ್ಲಿದ್ದ ಮಗು ಸಾವು

SCROLL FOR NEXT