ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅನುಷ್ಠಾನ ಅಗತ್ಯ ಎಂದು ಪಶ್ಚಿಮ ಬಂಗಾಳ ಭಾರತೀಯ ಜನತಾ ಪಕ್ಷದ (BJP) ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಶುಕ್ರವಾರ ಹೇಳಿದ್ದಾರೆ, ರಾಜ್ಯದಲ್ಲಿ SIR ಅನುಷ್ಠಾನ ಆಗದೇ ಇದ್ದಲ್ಲಿ ರಾಜ್ಯ "ಪಶ್ಚಿಮ ಬಾಂಗ್ಲಾದೇಶ" ಆಗಿ ಬದಲಾಗಬಹುದು ಎಂದು ಎಚ್ಚರಿಸಿದ್ದಾರೆ.
ANI ಜೊತೆ ಮಾತನಾಡಿದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷರು, ಜನಸಂಖ್ಯಾಶಾಸ್ತ್ರ ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ರಾಜ್ಯದ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ. "ಮಮತಾ ಬ್ಯಾನರ್ಜಿ ಹೇಳುವಷ್ಟು ಪಶ್ಚಿಮ ಬಂಗಾಳ ಅಭಿವೃದ್ಧಿ ಹೊಂದುತ್ತಿದ್ದರೆ, ರಾಜ್ಯದಿಂದ ಇಷ್ಟೊಂದು ಜನರು ವಲಸೆ ಬರುತ್ತಿರುವುದು ಏಕೆ?... ದೇಶದ ಒಟ್ಟು ನಕಲಿ ಕರೆನ್ಸಿಯ 72% ಪಶ್ಚಿಮ ಬಂಗಾಳದಿಂದ ಬರುತ್ತಿದೆ, ಅದೂ ಮಾಲ್ಡಾ ಜಿಲ್ಲೆಯಿಂದ ಎಂದು ಸಮಿಕ್ ಭಟ್ಟಾಚಾರ್ಯ ಆರೋಪಿಸಿದ್ದಾರೆ.
ಸರ್ಕಾರ ಏನು ಮಾಡುತ್ತಿದೆ?... ಪಶ್ಚಿಮ ಬಂಗಾಳದಲ್ಲಿಯೂ SIR ನಡೆಯಲಿದೆ; ಇಲ್ಲದಿದ್ದರೆ, ರಾಜ್ಯ ಪಶ್ಚಿಮ ಬಾಂಗ್ಲಾದೇಶವಾಗುತ್ತದೆ. ಪಶ್ಚಿಮ ಬಂಗಾಳದ ಬಹುಸಂಖ್ಯಾತ ಸಮುದಾಯದ ಬಲವರ್ಧನೆ ನಡೆದಿದೆ... ಮಧ್ಯಕಾಲೀನ ಯುಗದ ದೃಶ್ಯಗಳನ್ನು ಪಶ್ಚಿಮ ಬಂಗಾಳದಲ್ಲಿ ಕಾಣಬಹುದು..," ಭಟ್ಟಾಚಾರ್ಯ ಹೇಳಿದ್ದಾರೆ.