ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕನನ್ನು ಹೊಡೆದು ಸಾಯಿಸಲಾಗಿದೆ. ಅಪ್ರಾಪ್ತ ಬಾಲಕ ತನ್ನ ಗೆಳತಿಯನ್ನು ಭೇಟಿಯಾಗಲು ಆಕೆಯ ಗ್ರಾಮಕ್ಕೆ ಬಂದಿದ್ದ ಎಂದು ಹೇಳಲಾಗುತ್ತಿದೆ. ಕೊಲೆಗೂ ಮುನ್ನ ಆರೋಪಿಗಳು ಅಪ್ರಾಪ್ತ ಪ್ರೇಮಿಗೆ ತಾಲಿಬಾನ್ ಶಿಕ್ಷೆ ನೀಡಿ, ಮರಕ್ಕೆ ಕಟ್ಟಿ, ತಲೆ ಬೋಳಿಸಿ ತೀವ್ರವಾಗಿ ಥಳಿಸಿದ್ದರಿಂದ ಆತ ಸಾವನ್ನಪ್ಪಿದ್ದಾನೆ. ಶನಿವಾರ ಬೆಳಿಗ್ಗೆ 6 ಗಂಟೆಗೆ ಪೊಲೀಸರು ಬಾಲಕ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ, ಪೊಲೀಸರು ಹುಡುಗಿಯ ತಂದೆ ಸೇರಿದಂತೆ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಪ್ರಸ್ತುತ ಮರಣೋತ್ತರ ವರದಿಗಾಗಿ ಕಾಯುತ್ತಿದ್ದಾರೆ.
ರತ್ಲಂ ಜಿಲ್ಲೆಯ ನಮ್ಲಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ಕಂಡ್ರವಸ ಗ್ರಾಮದ ನಿವಾಸಿ ಆಯುಷ್ ಮಾಳವೀಯನನ್ನು ಹತ್ಯೆ ಮಾಡಿದ್ದಾರೆ. 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಯುಷ್ ತಂದೆ ಸಮರ್ಥ ಮಾಳವೀಯ ಹಳ್ಳಿಯಿಂದ ಹಳ್ಳಿಗೆ ಹೋಗಿ ಒಣ ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡುತ್ತಾರೆ. ತಾಯಿಯ ಹೆಸರು ಭುಲಿ ಬಾಯಿ ಮತ್ತು ಅಣ್ಣ ಅನಿಲ್ ದಲೋಡಾದ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 2:30 ರ ಸುಮಾರಿಗೆ ನಾಮ್ಲಿ ಪೊಲೀಸರಿಗೆ ಘಟನೆಯ ಮಾಹಿತಿ ಸಿಕ್ಕಿತು. ಮಾಹಿತಿ ಪಡೆದ ನಂತರ, SDOP ಗ್ರಾಮೀಣ ಕಿಶೋರ್ ಪಟನ್ವಾಲಾ ಸ್ಥಳಕ್ಕೆ ತಲುಪಿದ್ದು ಅಪ್ರಾಪ್ತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರತ್ಲಂ ವೈದ್ಯಕೀಯ ಕಾಲೇಜಿಗೆ ಕಳುಹಿಸಿದರು. ಶನಿವಾರ ಬೆಳಿಗ್ಗೆ ಆತನ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಘಟನೆ ನಂತರ ಹುಡುಗಿಯ ಪೋಷಕರ ಮೃಗೀಯ ವರ್ತನೆ ವಿರುದ್ಧ ಪ್ರತಿಭಟನೆ ನಡೆಸಿದ್ದು ಮೃತನ ಕುಟುಂಬಕ್ಕೆ 1 ಕೋಟಿ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು. ಅಧಿಕಾರಿಗಳ ಭರವಸೆಯ ನಂತರ, ಅವರು ಪ್ರತಿಭಟನೆಯನ್ನು ಕೊನೆಗೊಳಿಸಿದರು.
ಘಟನೆಯ ಪ್ರತಿಯೊಂದು ಅಂಶವನ್ನು ತನಿಖೆ ಮಾಡಲಾಗುತ್ತಿದೆ ಎಂದು ರತ್ಲಂ ಗ್ರಾಮೀಣ ಎಸ್‌ಡಿಒಪಿ ಕಿಶೋರ್ ಪಟನ್‌ವಾಲಾ ತಿಳಿಸಿದ್ದಾರೆ. ಮೃತರ ತಂದೆಯ ವರದಿಯ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗುತ್ತಿದೆ. ಪ್ರಸ್ತುತ, ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದರು.