ಚುನಾವಣಾ ಆಯೋಗ 
ದೇಶ

ಬಿಹಾರ SIRನ ಮೊದಲ ಹಂತ ಪೂರ್ಣ, ಕರಡು ಪಟ್ಟಿಯಿಂದ 65 ಲಕ್ಷ ಮತದಾರರು ಔಟ್

ECI ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ವಿಚಾರಣೆ ನಡೆಯುವ ಒಂದು ದಿನ ಮೊದಲು ಈ ಪ್ರಕಟಣೆ ಹೊರಬಿದ್ದಿದೆ.

ನವದೆಹಲಿ: ಇದೇ ನವೆಂಬರ್ ನಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR)ಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ(ECI) ಭಾನುವಾರ ಘೋಷಿಸಿದೆ.

ಈ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯ ನಡೆಸುತ್ತಿರುವ ECI ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ವಿಚಾರಣೆ ನಡೆಯುವ ಒಂದು ದಿನ ಮೊದಲು ಈ ಪ್ರಕಟಣೆ ಹೊರಬಿದ್ದಿದೆ.

ಜೂನ್ 24 ರಿಂದ ಜುಲೈ 25, 2025 ರವರೆಗೆ ನಡೆದ ಮತದಾರರ ಪರಿಷ್ಕರಣೆಯಲ್ಲಿ ಒಟ್ಟು 7.89 ಕೋಟಿ ಮತದಾರರಲ್ಲಿ 65 ಲಕ್ಷ ಮತದಾರರು "ತಪ್ಪಾಗಿ ಮತದಾರರಾಗಿ ಸೇರ್ಪಡೆಯಾಗಿದ್ದಾರೆ" ಮತ್ತು ಇವರು ಮುಂದಿನ ಮತದಾನದಲ್ಲಿ ನಕಲಿ ಮತದಾನ ಮಾಡುವ ಅಪಾಯ ಇತ್ತು. ಹೀಗಾಗಿ ಅವರನ್ನು ಕರಡು ಪಟ್ಟಿಯಿಂದ ತೆಗೆಯಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ECI ಪ್ರಕಾರ, ಈ ಪ್ರಕ್ರಿಯೆಯು ರಾಜ್ಯದ ಇತಿಹಾಸದಲ್ಲಿ ಅತ್ಯಂತ ವ್ಯಾಪಕವಾದ ಮತದಾರರ ಪರಿಶೀಲನಾ ಅಭಿಯಾನಗಳಲ್ಲಿ ಒಂದಾಗಿದ್ದು, ಆಗಸ್ಟ್ 1 ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಿಂದ 65 ಲಕ್ಷ ಮತದಾರರನ್ನು ಹೊರಗಿಡಲಾಗುವುದು ಎಂದು ಚುನಾವಣಾ ಆಯೋಗ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದಿನ ಮತದಾರರ ಪಟ್ಟಿಯಲ್ಲಿದ್ದ ಸುಮಾರು 22 ಲಕ್ಷ ಮೃತ ಮತದಾರರು, 36 ಲಕ್ಷ ಶಾಶ್ವತವಾಗಿ ಸ್ಥಳಾಂತರಗೊಂಡವರು ಅಥವಾ ಪತ್ತೆಯಾಗದ ಮತದಾರರು ಮತ್ತು 7 ಲಕ್ಷ ಮತದಾರರು ಹಲವು ಕಡೆಗಳಲ್ಲಿ ನೋಂದಾಯಿಸಲ್ಪಟ್ಟವರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಆಯೋಗ ತಿಳಿಸಿದೆ.

ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅಥವಾ ಬದಲಾವಣೆಗಾಗಿ ಒಂದು ತಿಂಗಳು ಸಮಯ ನೀಡಲಾಗಿದ್ದು, ಆಗಸ್ಟ್ 1 ರಿಂದ ಸೆಪ್ಟೆಂಬರ್ 1 ರವರೆಗೆ ಆಕ್ಷೇಪಣೆ ಸಲ್ಲಿಸಲು ಅಥವಾ ಬದಲಾವಣೆಗಾಗಿ ಅವಕಾಶ ಇರುತ್ತದೆ ಎಂದು ಆಯೋಗ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ ಚುನಾವಣೆ: ಸೋಲಿಗೆ ದುಃಖವಿಲ್ಲ, 'ಸಾರ್ವಜನಿಕ ಜೀವನದಲ್ಲಿ ಏರಿಳಿತ ಅನಿವಾರ್ಯ: RJD ಮೊದಲ ಪ್ರತಿಕ್ರಿಯೆ

ಬಿಹಾರ ಚುನಾವಣೆ ಫಲಿತಾಂಶಕ್ಕೆ ರಾಜಕೀಯ ಅಷ್ಟೇ ಅಲ್ಲ, ಕುಟುಂಬವೂ ಛಿದ್ರ; ರಾಜಕಾರಣದ ಜೊತೆ ಕುಟುಂಬಕ್ಕೂ ಲಾಲು ಪುತ್ರಿ ಗುಡ್ ಬೈ!

ಮಣ್ಣಲ್ಲಿ ಮಣ್ಣಾದ ʻವೃಕ್ಷಮಾತೆʼ; ಸಕಲ ಸರ್ಕಾರಿ ಗೌರವಗಳೊಂದಿಗೆ ತಿಮ್ಮಕ್ಕ ಅಂತ್ಯಕ್ರಿಯೆ

ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರಶಸ್ತಿ; ರಾಜ್ಯದ 114 ಸ್ಥಳದಲ್ಲಿ 114 ಸಸಿ ನೆಟ್ಟು ಪೋಷಣೆ

ಜಮ್ಮು-ಕಾಶ್ಮೀರ ನೌಗಮ್ ಪೋಲಿಸ್ ಠಾಣೆ ಸ್ಫೋಟ, ಮೃತರ ಸಂಖ್ಯೆ 9ಕ್ಕೆ ಏರಿಕೆ, 32 ಮಂದಿ ಗಾಯ, ಭಯೋತ್ಪಾದಕ ಕೃತ್ಯವೇ? ಪೊಲೀಸರು ಹೇಳುವುದೇನು-Video

SCROLL FOR NEXT