ತಿರುಪತಿ: ಹಿಂದೂಗಳ ಪವಿತ್ರಯಾತ್ರಾ ತಾಣ ತಿರುಪತಿ ತಿರುಮಲ ಬೆಟ್ಟದಲ್ಲಿ ಬೈಕ್ ಸವಾರನ ಮೇಲೆ ಚಿರತೆಯೊಂದು ದಾಳಿ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ತಿರುಪತಿ ತಿರುಮಲಕ್ಕೆ (Tirumala) ಬೆಟ್ಟ ಹತ್ತಿಕೊಂಡು ಹೋಗುವ ಭಕ್ತರು (Devotees) ಭಯಭೀತರಾಗುವ ಘಟನೆಯೊಂದು ತಿರುಮಲ ರಸ್ತೆಯಲ್ಲೇ ನಡೆದಿದ್ದು, ರಸ್ತೆಯಲ್ಲಿ ಬೈಕ್ ನಲ್ಲಿ ಚಲಿಸುತ್ತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ಮಾಡಿದೆ. ವೆಂಕಟೇಶ್ವರ ಸ್ವಾಮಿಯ ಭಕ್ತರು ನಡೆದುಕೊಂಡು ಹೋಗುವ ಅಲಿಪಿರಿ ಮಾರ್ಗದ ಬಳಿ ಚಿರತೆಯೊಂದು ಓಡಾಡುತ್ತಿತ್ತು.
ಈ ಮಾರ್ಗದಲ್ಲಿ ಪ್ರಯಾಣಿಸುತ್ತಿದ ವಾಹನ ಸವಾರ (Bike Rider) ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದೆ. ವಿಷಯ ತಿಳಿದು ಭಕ್ತರು ಓಡಿದ್ದಾರೆ. ತಿರುಮಲ ತಿರುಪತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೈಕ್ ನಲ್ಲಿ ಚಲಿಸುತ್ತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ಮಾಡಿದ್ದು ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಪಾರಾಗಿದ್ದಾನೆ. ಹಿಂಬದಿಯಲ್ಲಿ ಬರುತ್ತಿದ್ದ ದಾರಿಹೋಕರು ಇದನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ತಿರುಮಲದಲ್ಲಿ ಚಿರತೆ ದಾಳಿ ಇದೇ ಮೊದಲೇನಲ್ಲ
ತಿರುಮಲದಲ್ಲಿ ಚಿರತೆ ದಾಳಿ ಇದೇ ಮೊದಲೇನಲ್ಲ.. ಈ ಹಿಂದೆ ಅಲಿಪಿರಿಯಲ್ಲಿ 350ನೇ ಮೆಟ್ಟಿಲು ಬಳಿ ಚಿರತೆ ಕಾಣಿಸಿಕೊಂಡಿತ್ತು. ತಿರುಪತಿ-ತಿರುಮಲ ಮೆಟ್ಟಿಲುಗಳ ಮೇಲೆ ಚಿರತೆ ಕಾಣಿಸಿಕೊಂಡಿದ್ದು, ಈ ಸುದ್ದಿ ಕೇಳಿ ಜನರು ಭಯಭೀತರಾಗಿದ್ದಾರೆ.
ಅಲಿಪಿರಿ ನಡಿಗೆ ಮಾರ್ಗದಲ್ಲಿ ಚಿರತೆ ಓಡಾಡುತ್ತಿರೋ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. 350ನೇ ಮೆಟ್ಟಿಲು ಬಳಿ ಭಕ್ತರು ಚಿರತೆಯನ್ನು ಕಂಡು ಭಯಭೀತರಾಗಿ ಓಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.