ಸಾಂದರ್ಭಿಕ ಚಿತ್ರ 
ದೇಶ

ತಮಿಳುನಾಡು: ಅಂತಿಮ ಯಾತ್ರೆ ವೇಳೆ ಪಟಾಕಿ ಸಿಡಿದು ಬಾಲಕಿ ಮುಖಕ್ಕೆ ತೀವ್ರ ಗಾಯ!

ಪಾರ್ಥೀವ ಶರೀರವೊಂದರ ಅಂತಿಮ ಯಾತ್ರೆ ವೇಳೆಯಲ್ಲಿ ಪಾಲ್ಗೊಂಡ ಕೆಲವರು ರಸ್ತೆಯ ಮೇಲೆ ಹೆಚ್ಚಿನ ಡೆಸಿಬಲ್ ಪಟಾಕಿಗಳನ್ನು ಸಿಡಿಸುತ್ತಿದ್ದಾಗ ಪಟಾಕಿಯೊಂದು ನಿಶಾಂತಿನಿಯ ಮುಖದ ಮೇಲೆ ಬಿದ್ದು ಸ್ಫೋಟಗೊಂಡಿದೆ.

ನೀಲಂಕಾರೈ: ಅಂತಿಮ ಯಾತ್ರೆಯೊಂದರ ವೇಳೆ ಪಟಾಕಿ ಸಿಡಿದು 10 ವರ್ಷದ ಬಾಲಕಿಯ ಮುಖಕ್ಕೆ ತೀವ್ರ ಗಾಯಗಳಾಗಿರುವ ಘಟನೆ ತಮಿಳುನಾಡಿನ ನೀಲಂಕಾರೈನಲ್ಲಿ ನಡೆದಿದೆ. ವೆಟ್ಟುವಂಕನ್ನಿಯ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ನಿಶಾಂತಿನಿ ಗಾಯಗೊಂಡ ಬಾಲಕಿ. ಈಕೆ ಮನೆಗೆ ಹಿಂದಿರುಗುತ್ತಿದ್ದಾಗ ಈ ಅವಘಡ ನಡೆದಿದೆ.

ಪಾರ್ಥೀವ ಶರೀರವೊಂದರ ಅಂತಿಮ ಯಾತ್ರೆ ವೇಳೆಯಲ್ಲಿ ಪಾಲ್ಗೊಂಡ ಕೆಲವರು ರಸ್ತೆಯ ಮೇಲೆ ಹೆಚ್ಚಿನ ಡೆಸಿಬಲ್ ಪಟಾಕಿಗಳನ್ನು ಸಿಡಿಸುತ್ತಿದ್ದಾಗ ಪಟಾಕಿಯೊಂದು ನಿಶಾಂತಿನಿಯ ಮುಖದ ಮೇಲೆ ಬಿದ್ದು ಸ್ಫೋಟಗೊಂಡಿದೆ.

ಪರಿಣಾಮ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಅಲ್ಲಿದ್ದವರು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಸ್ಫೋಟದಿಂದ ಆಕೆಯ ಮುಖದ ಎಡಭಾಗಕ್ಕೆ ತೀವ್ರ ಹಾನಿಯಾಗಿದೆ. ಆಕೆಯ ಕೆನ್ನೆ, ಮೂಗು ಮತ್ತು ಕಣ್ಣಿಗೂ ಗಾಯವಾಗಿದೆ. ಆಕೆಯ ತಂದೆ ನೀಡಿದ ದೂರಿನ ಮೇರೆಗೆ ನೀಲಂಕರೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು 33 ವರ್ಷದ ಗೋಪಿನಾಥ್ ಎಂಬಾತನನ್ನು ಬಂಧಿಸಿದ್ದಾರೆ.

ಗೋಪಿನಾಥ್ ಜೊತೆಗೆ ಪಟಾಕಿ ಸಿಡಿಸುವಾಗ ಮದ್ಯದ ಅಮಲಿನಲ್ಲಿದ್ದ ಮತ್ತೋರ್ವ ಯುವಕ ವಿನೀತ್‌ಗಾಗಿಯೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್