ನಿಸಾರ್ ಉಪಗ್ರಹ 
ದೇಶ

ಜುಲೈ 30ರಂದು NISAR satellite ಉಡಾವಣೆ; ISRO ಮಾಹಿತಿ

ಇಸ್ರೊ ಮತ್ತು ನಾಸಾ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭೂ ಸಮೀಕ್ಷೆಯ ಸಿಂಥೆಟಿಕ್‌ ಅಪರ್ಚರ್ ರೇಡಾರ್ (ನಿಸಾರ್‌) ಉಪಗ್ರಹವನ್ನು ಜುಲೈ 30ರಂದು ಉಡ್ಡಯನ ಮಾಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಕಾಂಕ್ಷಿ NISAR satellite ಉಡಾವಣೆಗೆ ಮಹೂರ್ತ ಫಿಕ್ಸ್ ಆಗಿದ್ದು ಇದೇ ಜುಲೈ 30ರಂದು ಬಹು ನಿರೀಕ್ಷಿತ ಉಡಾವಣೆ ನಡೆಯಲಿದೆ ಎಂದು ಹೇಳಲಾಗಿದೆ.

ಹೌದು.. ಇಸ್ರೊ ಮತ್ತು ನಾಸಾ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭೂ ಸಮೀಕ್ಷೆಯ ಸಿಂಥೆಟಿಕ್‌ ಅಪರ್ಚರ್ ರೇಡಾರ್ (ನಿಸಾರ್‌) ಉಪಗ್ರಹವನ್ನು ಜುಲೈ 30ರಂದು ಉಡ್ಡಯನ ಮಾಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

ಈ ಕುರಿತು ಮಾತನಾಡಿದ ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ಅವರು 'ನಾಸಾ-ಇಸ್ರೊ ಸಹಯೋಗದಲ್ಲಿ ಸಿಂಥೆಟಿಕ್ ಅಪರ್ಚರ್ ರೇಡಾರ್ (NISAR) ಎಂಬ ವಿಶಿಷ್ಟ ಭೂ ವೀಕ್ಷಣಾ ಉಪಗ್ರಹವನ್ನು ಜುಲೈ 30 ರಂದು ಶ್ರೀಹರಿಕೋಟದಿಂದ GSLV-F16 ರಾಕೆಟ್ ಮೂಲಕ ಉಡ್ಡಯನ ಮಾಡಲಾಗುವುದು. ಈ ಉಪಗ್ರಹ ಉಡಾವಣೆಯಿಂದ ಭಾರತ, ಅಮೆರಿಕ ಸೇರಿದಂತೆ ಇಡೀ ಜಗತ್ತಿಗೆ ನೆರವಾಗಲಿದೆ.

ನೈಸರ್ಗಿಕ ಸಂಪನ್ಮೂಲಗಳ ನಿಗಾ ವಹಿಸಲು ಅತ್ಯಂತ ನಿರ್ಣಾಯಕವಾಗಿದೆ. ದಿನದ 24 ತಾಸು ಭೂಮಿಯ ಚಿತ್ರವನ್ನು ತೆಗೆಯಲು, ಭೂಕುಸಿತ ಪತ್ತೆ, ಹವಾಮಾನ ಬದಲಾವಣೆ, ವಿಪತ್ತು ನಿರ್ವಹಣೆಗೆ ಸಹಾಯ ಮಾಡಲು ನೆರವಾಗಲಿದೆ' ಎಂದು ತಿಳಿಸಿದ್ದಾರೆ.

ಅಂತೆಯೇ ಈ ಉಪಗ್ರಹವನ್ನು ಭೂಮಿಯಿಂದ 743 ಕಿ.ಮೀ ಎತ್ತರದಲ್ಲಿ ಸೂರ್ಯನ ಸಮಕಾಲೀನ ಕಕ್ಷೆಯಲ್ಲಿ ನೆಲೆಗೊಳಿಸಲಾಗುವುದು. ಇದರಿಂದ ನಿರಂತರವಾಗಿ ಭೂವೀಕ್ಷಣೆಗೆ ಸೂರ್ಯನ ಬೆಳಕು ಲಭ್ಯವಾಗುತ್ತದೆ. 'ನಿಸಾರ್' ಉಪಗ್ರಹದ ತೂಕ 2392 ಕೆ.ಜಿ ಆಗಿದೆ. ಅವಳಿ ತರಂಗಾಂತರಗಳನ್ನು( ಫ್ರಿಕ್ವೆನ್ಸಿ) ಒಳಗೊಂಡ ಮೊದಲ ಸಿಂಥೆಟಿಕ್‌ ಅಪರ್ಚರ್‌ ರೇಡಾರ್ ಇದಾಗಿದೆ.

ಇದರಲ್ಲಿ ನಾಸಾದ ಎಲ್‌ ಬ್ಯಾಂಡ್ ಮತ್ತು ಇಸ್ರೊದ ಎಸ್‌ ಬ್ಯಾಂಡ್‌ ಇವೆ. ಎರಡೂ ತರಂಗಾಂತರಗಳಿಗೆ 12 ಮೀಟರ್‌ನ ಅಗಲದ ಬಿಡಿಸಲಾಗದ ಮೆಷ್ ಅಳವಡಿಸಿದ ಪ್ರತಿಫಲಕ ಆಂಟೆನಾ ಅಳವಡಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಈ ಉಪಗ್ರಹವು ಇಡೀ ಭೂಮಿಯನ್ನು ಎಲ್ಲ ಋತುಮಾನಗಳು, ಹಗಲು–ರಾತ್ರಿ ವೀಕ್ಷಣೆ ನಡೆಸುತ್ತದೆ. ಭೂಮಿಯ ಮೇಲೆ ಆಗುವ ಸಣ್ಣ ಪುಟ್ಟ ಬದಲಾವಣೆಗಳ ಮಾಹಿತಿ ನೀಡುವ, ನೆಲದ ವಿರೂಪ, ಮಂಜುಗಡ್ಡೆಯ ಪದರದ ಚಲನೆ, ಹಡಗುಗಳ ಪತ್ತೆ, ಮಣ್ಣಿನ ತೇವಾಂಶದಲ್ಲಿನ ಬದಲಾವಣೆ, ಕಡಲಿನ ಮೇಲೆ ಕಣ್ಗಾವಲು, ಮೇಲ್ಮೈ ನೀರಿನ ಸಂಗ್ರಹದ ಮೇಲೆ ನಿಗಾ, ನೈಸರ್ಗಿಕ ವಿಕೋಪದ ಸೇರಿದಂತೆ ಹಲವು ಮಾಹಿತಿಗಳನ್ನು ಸಂಗ್ರಹಿಸಲಿದೆ ಎಂದು ಇಸ್ರೊ ತಿಳಿಸಿದೆ.

ಗಗನ್ ಯಾನ ಯೋಜನೆ

ಇದೇ ವೇಳೆ ಭಾರತದ ಮಾನವ ಬಾಹ್ಯಾಕಾಶ ಹಾರಾಟದ ಮಿಷನ್ ಗಗನ್ ಯಾನ್ ಗೆ ಸಂಬಂಧಿಸಿದಂತೆ, ಈ ಡಿಸೆಂಬರ್‌ನಲ್ಲಿ ವ್ಯೋಮಿತ್ರ ಎಂಬ ಹೆಸರಿನ ಹುಮನಾಯ್ಡ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು ಎಂದು ಇದೇ ವೇಳೆ ನಾರಾಯಣನ್ ಘೋಷಿಸಿದರು. ಆ ಮಿಷನ್ ಯಶಸ್ವಿಯಾದ ನಂತರ, ಮುಂದಿನ ವರ್ಷ ಇನ್ನೂ ಎರಡು ಸಿಬ್ಬಂದಿ ಇಲ್ಲದ ಮಿಷನ್‌ಗಳನ್ನು ಪ್ರಾರಂಭಿಸಲಾಗುವುದು. ಈ ಯಶಸ್ಸಿನ ನಂತರ, ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ, ಗಗನಯಾನ್ ಮಿಷನ್ ಮಾರ್ಚ್ 2027 ರಲ್ಲಿ ಉಡಾವಣೆಗೊಳ್ಳಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT