ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಕಂಬಳಿಗಳನ್ನು ಮಾರಾಟ ಮಾಡುತ್ತಿದ್ದ ಅಫ್ಘಾನಿಸ್ತಾನದ ವ್ಯಕ್ತಿಯೊಬ್ಬನ ಮೇಲೆ ಮೂವರು ಮಾರಣಾಂತಿಕವಾಗಿ ದಾಳಿ ನಡೆಸಿರುವ ಘಟನೆ ನಡೆದಿದೆ.
ದಾಳಿಯಿಂದಾಗಿ ಅಪ್ಘನ್ ಪ್ರಜೆ ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಯಶೋಧರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಯಾದವ್ ನಗರದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ಗಾಯಾಳು ಅಫ್ಘಾನಿಸ್ತಾನದ ಪ್ರಜೆಯನ್ನು ಫಹೀಮ್ ಖಾನ್ ಅಲಿಯಾಸ್ ಮಮ್ತೂರ್ ಮಾರ್ಗಕ್ ಎಂದು ಪೊಲೀಸರು ಗುರುತಿಸಿದ್ದಾರೆ.
ಅಜಯ್ ಚವ್ಹಾಣ್ ಮತ್ತು ಅವನ ಸ್ನೇಹಿತರಾದ ರಿಷಿ ಮತ್ತು ಮಯಾಂಕ್ ಎಂಬ ಮೂವರು ವ್ಯಕ್ತಿಗಳು ಯಾವುದೋ ವಿಷಯಕ್ಕೆ ಜಗಳ ತೆಗೆದು, ಮಾರ್ಗಕ್ ಮೇಲೆ ಸಿಮೆಂಟ್ ಬ್ಲಾಕ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಯಶೋಧರ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.