ಸಾಂದರ್ಭಿಕ ಚಿತ್ರ  
ದೇಶ

ಸರ್ಕಾರದ ಬಜೆಟ್ ಗಿಂತ ಖಾಸಗಿ ವಿಮೆ ಪ್ರೀಮಿಯಂ ಅಧಿಕ: ಬಡವರಿಗೆ ಆರೋಗ್ಯ ಸೇವೆ ಗಗನಕುಸುಮ!

ಭಾರತದ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿನ ಬದಲಾವಣೆಯ ಸ್ಪಷ್ಟ ಸೂಚಕವಾಗಿ, ವೈಯಕ್ತಿಕ ಆರೋಗ್ಯ ವಿಮಾ ಪ್ರೀಮಿಯಂಗಳು ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಸಂಶೋಧನಾ ಇಲಾಖೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ಒಟ್ಟು ಬಜೆಟ್ ಹಂಚಿಕೆಗಿಂತ ಹೆಚ್ಚಾಗಿದೆ.

ನವದೆಹಲಿ: ಇತ್ತೀಚಿನ ಜೀವನಕ್ರಮದಲ್ಲಿ ಆರೋಗ್ಯವೇ ಭಾಗ್ಯ ಎಂಬ ಪರಿಸ್ಥಿತಿ ಉಂಟಾಗಿದೆ. ಬಹುತೇಕರು ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಂದರ್ಭದಲ್ಲಿ ಆರೋಗ್ಯ ವಿಮಾ ಯೋಜನೆಗಳು ಮುಖ್ಯವಾಗಿವೆ.

ಭಾರತದ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿನ ಬದಲಾವಣೆಯ ಸ್ಪಷ್ಟ ಸೂಚಕವಾಗಿ, ವೈಯಕ್ತಿಕ ಆರೋಗ್ಯ ವಿಮಾ ಪ್ರೀಮಿಯಂಗಳು ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಸಂಶೋಧನಾ ಇಲಾಖೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ಒಟ್ಟು ಬಜೆಟ್ ಹಂಚಿಕೆಗಿಂತ ಹೆಚ್ಚಾಗಿದೆ.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ವಾರ್ಷಿಕ ವರದಿಗಳು ಮತ್ತು ಸಂಬಂಧಿತ ಕೇಂದ್ರ ಬಜೆಟ್ ದಾಖಲೆಗಳ ಪ್ರಕಾರ, ಕೋವಿಡ್ ಸಾಂಕ್ರಾಮಿಕ ನಂತರದ ವರ್ಷಗಳಲ್ಲಿ (2021–22 ಮತ್ತು 2022–23) ವಿಮಾ ಪ್ರೀಮಿಯಂ ಸಂಗ್ರಹಗಳು ಕುಸಿದಿದ್ದರೂ, ಅವು ರಾಷ್ಟ್ರೀಯ ಆರೋಗ್ಯ ಬಜೆಟ್‌ಗಿಂತ ಹೆಚ್ಚಾಗಿದೆ ಎಂದು ತೋರಿಸುತ್ತದೆ.

ರಕ್ಷಣಾ ಮತ್ತು ಕಾರ್ಮಿಕ ಸಚಿವಾಲಯಗಳ ಸಂಬಂಧಿತ ವೆಚ್ಚವನ್ನು ಗಣನೆಗೆ ತೆಗೆದುಕೊಂಡಾಗಲೂ, ಭಾರತದ ಒಟ್ಟು ಸಾರ್ವಜನಿಕ ಆರೋಗ್ಯ ವೆಚ್ಚವು ಕಡಿಮೆಯಾಗಿದೆ: ಕೇಂದ್ರ ಬಜೆಟ್‌ನ ಸುಮಾರು ಶೇಕಡಾ 2 ಮತ್ತು GDP ಯ ಶೇಕಡಾ 1.5ರಷ್ಟಿದೆ. ಇದು ರಾಷ್ಟ್ರೀಯ ಆರೋಗ್ಯ ನೀತಿಯಿಂದ ನಿಗದಿಪಡಿಸಿದ ಶೇಕಡಾ 2.5 ಗುರಿಗಿಂತ ಕಡಿಮೆಯಾಗಿದೆ.

ಹೆಲ್ತ್ ಇನ್ಷೂರೆನ್ಸ್ ನಿಂದ ಆರೋಗ್ಯ ಸೌಲಭ್ಯ ವೆಚ್ಚ ಅಧಿಕ

ಈ ಪ್ರವೃತ್ತಿ ಬಜೆಟ್ ಬದಲಾವಣೆಗಿಂತ ಹೆಚ್ಚಿನದನ್ನು ಸೂಚಿಸುತ್ತದೆ - ಇದು ಭಾರತದಲ್ಲಿ ಆರೋಗ್ಯ ರಕ್ಷಣೆ ಹೇಗೆ ಮಹತ್ವ ಪಡೆದುಕೊಂಡಿದೆ ಎಂಬುದರಲ್ಲಿ ರಚನಾತ್ಮಕ ರೂಪಾಂತರವನ್ನು ಪ್ರತಿಬಿಂಬಿಸುತ್ತದೆ. ಖಾಸಗಿ ವಿಮೆಯ ಮೇಲಿನ ಹೆಚ್ಚುತ್ತಿರುವ ಅವಲಂಬನೆಯು ಮಾರುಕಟ್ಟೆ-ಚಾಲಿತ ಮಾದರಿಯತ್ತ ಗಮನ ಹರಿಸುತ್ತದೆ.

ಖಾಸಗಿ ವಿಮಾ ಯೋಜನೆಗಳು ಹೆಚ್ಚಾಗಿ ಕವರೇಜ್ ನ್ನು ಹೊಂದಿರುವುದಿಲ್ಲ, ಸಹ-ಪಾವತಿಗಳು ಮತ್ತು ಕ್ಲೈಮ್ ಕ್ಯಾಪ್‌ಗಳೊಂದಿಗೆ ಬರುತ್ತವೆ, ಇದು ಹೆಚ್ಚಿನ ವೈದ್ಯಕೀಯ ವೆಚ್ಚಗಳಿಂದ ವ್ಯಕ್ತಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿವೆ. ಅನೇಕ ಪಾಲಿಸಿಗಳಲ್ಲಿ ಹೊರರೋಗಿ ಆರೈಕೆ ಸೌಲಭ್ಯವಿರುವುದಿಲ್ಲ. ಇದು ಬಡ ರೋಗಿಗಳ ಆರೋಗ್ಯ ಸೌಲಭ್ಯದ ಮೇಲೆ ಪರಿಣಾಮ ಬೀರುತ್ತಿವೆ.

ವಿಮೆಯು ಆರೋಗ್ಯ ರಕ್ಷಣೆಗೆ ಎಂದು ಹೇಳುತ್ತಿದ್ದರೂ ಕೂಡ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಾಗುತ್ತಿಲ್ಲ, ಹಲವು ರೋಗಗಳ ಚಿಕಿತ್ಸೆಗೆ ವಿಮಾ ಸೌಲಭ್ಯ ಒಳಗೊಳ್ಳದಿರುವುದು, ಅತ್ಯಂತ ದುರ್ಬಲರನ್ನು ಹೊರಗಿಡುವುದು ಮತ್ತು ಆರೋಗ್ಯವನ್ನು ಸಾರ್ವಜನಿಕ ಉತ್ತಮ ಆರೈಕೆಯಾಗಿ ನೋಡದಿರುವುದು ದೌರ್ಭಾಗ್ಯವೇ ಸರಿ ಎನ್ನುತ್ತಾರೆ ತಜ್ಞರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT