ಸಾಂದರ್ಭಿಕ ಚಿತ್ರ 
ದೇಶ

ನರೇಗಾ ಯೋಜನೆಗೆ ಶೇ.12ರಷ್ಟು ಹೆಚ್ಚುವರಿ ಅನುದಾನ; ಹಣಕಾಸು ಸಚಿವಾಲಯ ಅನುಮೋದನೆ ಸಾಧ್ಯತೆ

ಗ್ರಾಮೀಣಾಭಿವೃದ್ಧಿ ಸಚಿವಾಲಯ 2029-30 ರವರೆಗೆ ಐದು ವರ್ಷಗಳ ಕಾಲ ನರೇಗಾ ಯೋಜನೆಯಡಿ 5.23 ಲಕ್ಷ ಕೋಟಿ ರೂಪಾಯಿಗಳ ಅನುದಾನವನ್ನು ವೆಚ್ಚ ಹಣಕಾಸು ಸಮಿತಿಗೆ (EFC) ಸಲ್ಲಿಸಿದೆ.

ನವದೆಹಲಿ: ಗ್ರಾಮೀಣಾಭಿವೃದ್ಧಿ ಸಚಿವಾಲಯದ ಬೇಡಿಕೆಯಂತೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (MGNREGS) ಐದು ವರ್ಷಗಳ ಅವಧಿಗೆ ಶೇ. 12 ರಷ್ಟು ಹೆಚ್ಚಳಕ್ಕೆ ಹಣಕಾಸು ಸಚಿವಾಲಯ ಅನುಮೋದನೆ ನೀಡುವ ಸಾಧ್ಯತೆಯಿದೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯ 2029-30 ರವರೆಗೆ ಐದು ವರ್ಷಗಳ ಕಾಲ ನರೇಗಾ ಯೋಜನೆಯಡಿ 5.23 ಲಕ್ಷ ಕೋಟಿ ರೂಪಾಯಿಗಳ ಅನುದಾನವನ್ನು ವೆಚ್ಚ ಹಣಕಾಸು ಸಮಿತಿಗೆ (EFC) ಸಲ್ಲಿಸಿದೆ. ಯೋಜನೆಗಳನ್ನು ಮೌಲ್ಯಮಾಪನ ಮಾಡುವ ಮತ್ತು ಅನುಮೋದಿಸುವ ಜವಾಬ್ದಾರಿ ಹಣಕಾಸು ಸಚಮಿತಿಯದ್ದಾಗಿದೆ.

ಸಚಿವಾಲಯವು ಪ್ರಸ್ತಾವನೆಗೆ ಅನುಮೋದನೆ ನೀಡಬಹುದು. ನಂತರ ಸಚಿವ ಸಂಪುಟ ಅನುಮೋದನೆಯ ನಂತರ ಅದನ್ನು ಅಂತಿಮಗೊಳಿಸಲಾಗುವುದು ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. 2020-21 ರಿಂದ 2024-25 ರವರೆಗಿನ ಹಿಂದಿನ ಐದು ಹಣಕಾಸು ವರ್ಷಗಳಲ್ಲಿ, ನರೇಗಾ ಯೋಜನೆಗೆ ಕೇಂದ್ರ ನಿಧಿಯು 4.68 ಲಕ್ಷ ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿತ್ತು.

2024-2025ರ ಪರಿಷ್ಕೃತ ಅಂದಾಜಿನ ಪ್ರಕಾರ ನರೇಗಾ ಯೋಜನೆಗೆ ಬಜೆಟ್ ಹಂಚಿಕೆ 86,000 ಕೋಟಿ ರೂಪಾಯಿಗಳಾಗಿತ್ತು. ಲಿಬ್‌ಟೆಕ್ ಇಂಡಿಯಾದ ಇತ್ತೀಚಿನ ವರದಿಯ ಸಂಶೋಧನೆಗಳು, 2024-25ರಲ್ಲಿ ಉದ್ಯೋಗವು 7.1% ರಷ್ಟು ಕಡಿಮೆಯಾಗಿದೆ ಎಂದು ತೋರಿಸಿದೆ, ಆದರೆ ಯೋಜನೆಯಡಿಯಲ್ಲಿ ನೋಂದಾಯಿತ ಕುಟುಂಬಗಳಲ್ಲಿ 8.6% ರಷ್ಟು ಏರಿಕೆ ಕಂಡುಬಂದಿದೆ. MGNREGA ಯೋಜನೆಯಡಿಯಲ್ಲಿ ಕೇವಲ 7% ಕುಟುಂಬಗಳು ಮಾತ್ರ ಭರವಸೆ ನೀಡಿದ 100 ದಿನಗಳ ಕೆಲಸವನ್ನು ಪಡೆದುಕೊಂಡಿವೆ ಎಂದು ಅದು ತೋರಿಸಿದೆ.

ಸರಾಸರಿ ಕೆಲಸದ ದಿನಗಳು 4.3% ರಷ್ಟು ಕಡಿಮೆಯಾಗಿ, 100 ದಿನಗಳ ಕೆಲಸ ಪಡೆದ ಕುಟುಂಬಗಳು 11.9% ರಷ್ಟು ಕಡಿಮೆಯಾಗಿವೆ. ತೀವ್ರ ಉದ್ಯೋಗ ಕುಸಿತ ಕಂಡ ರಾಜ್ಯಗಳಲ್ಲಿ ಒಡಿಶಾ (34.8%), ತಮಿಳುನಾಡು (25.1%), ಮತ್ತು ರಾಜಸ್ಥಾನ (15.9%), ಮಹಾರಾಷ್ಟ್ರ (39.7%), ಹಿಮಾಚಲ ಪ್ರದೇಶ (14.8%) ಮತ್ತು ಬಿಹಾರ (13.3%) ಸೇರಿವೆ.

ಸರ್ಕಾರವು ಸಾಕಷ್ಟು ಹಣವನ್ನು ಒದಗಿಸಬೇಕು: ಕಾಂಗ್ರೆಸ್

ಆರ್ಥಿಕ ಹಿಂಜರಿತದ ಮಧ್ಯೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, MGNREGA ಅಡಿಯಲ್ಲಿ ಬಜೆಟ್‌ನಲ್ಲಿ ಸಾಕಷ್ಟು ಹಣಕಾಸು ಒದಗಿಸಬೇಕು ಎಂದು ಒತ್ತಾಯಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT