ನಾಪತ್ತೆಯಾಗಿರುವ ಅಜ್ಜಿ, ಮೊಮ್ಮಗಳು 
ದೇಶ

Air India plane crash: ಹಾಸ್ಟೆಲ್ ಬಾಲ್ಕನಿಯಿಂದ ಜಿಗಿದು ಬದುಕುಳಿದ ವಿದ್ಯಾರ್ಥಿ; ತಾಯಿ, ಮಗಳಿಗಾಗಿ ಹುಡುಕಾಡುತ್ತಿರುವ ವ್ಯಕ್ತಿ, ಹೇಳಿದ್ದೇನು?

ವಿಮಾನ ಬೆಂಕಿಯುಂಡೆಯಾಗುತ್ತಿದ್ದಂತೆಯೇ ನಮ್ಮ ಹಾಸ್ಟೆಲ್ ಇರುವುದಿಲ್ಲ ಅನಿಸಿತು. ಹಾಗಾಗೀ, ಹಾಸ್ಟೆಲ್ ಬಾಲ್ಕನಿಯಿಂದ ಜಿಗಿಯುವ ಮೂಲಕ ಪ್ರಾಣ ಉಳಿಸಿಕೊಂಡೆ

ಅಹಮದಾಬಾದ್: ಲಂಡನ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದ ಇಲ್ಲಿನ ಬಿಜೆ ವೈದ್ಯಕೀಯ ಕಾಲೇಜಿನ ಡಾಕ್ಟರ್ ಹಾಸ್ಟೆಲ್ ನ ವಿದ್ಯಾರ್ಥಿಗಳು, ಪ್ರೊಫೆಸರ್, ಕುಟುಂಬ ಸದಸ್ಯರು ಹಾಗೂ ಸಿಬ್ಬಂದಿ ಬಿಗಿ ಭದ್ರತೆ ನಡುವೆ ತಮ್ಮ ಲಗೇಜ್ ಗಳೊಂದಿಗೆ ಶುಕ್ರವಾರ ತೊರೆಯುತ್ತಿದ್ದ ದೃಶ್ಯ ಕಂಡುಬಂದಿತು.

ಬಾಲ್ಕನಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡೆ:

ಈ ಸಂದರ್ಭದಲ್ಲಿ ಮಾತನಾಡಿದ ದ್ವಿತೀಯ ವರ್ಷದ ಸ್ಥಾನಿಕ ವೈದ್ಯ ಡಾ. ತರುಣ್, ವಿಮಾನ ಬೆಂಕಿಯುಂಡೆಯಾಗುತ್ತಿದ್ದಂತೆಯೇ ನಮ್ಮ ಹಾಸ್ಟೆಲ್ ಇರುವುದಿಲ್ಲ ಅನಿಸಿತು. ಹಾಗಾಗೀ, ಹಾಸ್ಟೆಲ್ ಬಾಲ್ಕನಿಯಿಂದ ಜಿಗಿಯುವ ಮೂಲಕ ಪ್ರಾಣ ಉಳಿಸಿಕೊಂಡೆ. ಈಗ ನಾವು ಮನೆಗೆ ಹೋಗುತ್ತಿಲ್ಲ. ಎಲ್ಲಿ ವಸತಿ ಸೌಕರ್ಯ ಸಿಗುತ್ತದೆಯೋ ಆ ಕಡೆ ಹೋಗುತ್ತೇವೆ. ನಮ್ಮೊಂದಿಗೆ ಅತ್ಯವಶ್ಯಕ್ತ ವಸ್ತುಗಳು ಕೂಡಾ ಇಲ್ಲ. ಹಾಸ್ಟೆಲ್ ಒಳಗಡೆ ಇರುವ ವಸ್ತುಗಳನ್ನು ಪಡೆಯಲು ಅವಕಾಶವಿದೆ. ಈಗ ನಾವು ಏನು ಮಾಡೋದು ಎಂದರು.

ಬಿಜೆ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರೊಫೆಸರ್ ಡಾ. ಪಿಯೂಸ್ ಮಾತನಾಡಿ, ಹಾಸ್ಟೆಲ್ ಕಟ್ಟಡ ಮುಂಭಾಗದ ಗೋಡೆಯಿಂದ ಜಿಗಿದು ದುರಂತದಿಂದ ಪಾರಾಗಿದ್ದಾನೆ. ಒಂದು ವೇಳೆ 15 ರಿಂದ 20 ಸೆಕೆಂಡ್ ಒಳಗಡೆ ಇದಿದ್ದರೆ, ಉಸಿರುಕಟ್ಟಿ ಸಾಯುತ್ತಿದ್ದೆ. ಅನೇಕ ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ಹಾಸ್ಟೆಲ್ ಒಳಗಡೆ ಇದ್ದರು ಎಂದು ಹೇಳಿದರು.

ತಾಯಿ, ಮಗಳಿಗಾಗಿ ಹುಡುಕಾಟ: ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾದ ಬಿಜೆ ಮೆಡಿಕಲ್ ಕಾಲೇಜ್ ಹಾಸ್ಟೆಲ್ ಮೆಸ್‌ನಲ್ಲಿದ್ದ ತನ್ನ ತಾಯಿ ಮತ್ತು ಅಂಬೆಗಾಲಿಡುವ ಮಗಳನ್ನು ಹುಡುಕಾಡುತ್ತಿದ್ದ ರವಿ ಠಾಕೋರ್ ಸಂಕಟ, ನೋವು ಹೇಳತೀರದಾಗಿತ್ತು.

ನಾನು, ನನ್ನ ತಾಯಿ, ಹೆಂಡತಿ ಬಿಜೆ ಮೆಡಿಕಲ್ ಕಾಲೇಜ್ ಮೆಸ್‌ನಲ್ಲಿ ಕೆಲಸ ಮಾಡುತ್ತಿದ್ದೇವು. ಜೂನಿಯರ್ ವೈದ್ಯರು ಊಟಕ್ಕಾಗಿ ಇಲ್ಲಿಗೆ ಬರುತ್ತಿದ್ದರೆ, ಹಿರಿಯ ವೈದ್ಯರಿಗೆ ಊಟವನ್ನು ಪ್ಯಾಕ್ ಮಾಡಿ, ಟಿಪ್ಪನ್ ಸರ್ವಿಸ್ ಭಾಗವಾಗಿ ಸಿವಿಲ್ ಆಸ್ಪತ್ರೆಗೆ ಕೊಂಡೊಯ್ಯಲಾಗುತಿತ್ತು. ಗುರುವಾರ ಮಧ್ಯರಾತ್ರಿ 1 ಗಂಟೆಗೆ ಊಟ ಪ್ಯಾಕ್ ಮಾಡಿ ಆಸ್ಪತ್ರೆಗೆ ಹೋದೆವು, ನನ್ನ ತಾಯಿ ಮತ್ತು ನನ್ನ ಮಗಳು ಮೆಸ್ ನಲ್ಲಿದ್ದರು ಎಂದು ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು.

"ಅಪಘಾತದ ಸಮಯದಲ್ಲಿ, ನನ್ನ ತಾಯಿ ಸರಳಾ ಮತ್ತು ಮಗಳು ಆದ್ಯ ಮೆಸ್ ನಲ್ಲಿದ್ದರು. 24 ಗಂಟೆಗಳು ಕಳೆದಿವೆ ಆದರೆ ಅವರಿಗೆ ಏನಾಗಿದೆ ಎಂಬುದರ ಕುರಿತು ನನಗೆ ಯಾವುದೇ ಸುಳಿವು ಸಿಕ್ಕಿಲ್ಲ. ಅಧಿಕಾರಿಗಳು ನೀಡಿದ ಪಟ್ಟಿಗಳನ್ನು ಪರಿಶೀಲಿಸಿದ್ದೇನೆ ಮತ್ತು ರಾತ್ರಿಯಿಡೀ ಸಿವಿಲ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅವರನ್ನು ಹುಡುಕಿದೆ" ಎಂದು ಏನೂ ಹೇಳದ ಅಧಿಕಾರಿಗಳಲ್ಲಿ ತಮ್ಮ ನೋವು ತೋಡಿಕೊಂಡರು.

"ನಾಪತ್ತೆಯಾಗಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ಪತ್ತೆ ಮಾಡಲಾಗಿದ್ದು, ಮೃತದೇಹಗಳನ್ನು ಗುರುತಿಸಲಾಗಿದೆ. ನನ್ನ ತಾಯಿ ಮತ್ತು ಮಗಳು ಮಾತ್ರ ಪತ್ತೆಯಾಗಿಲ್ಲ. ಮೆಸ್‌ನಲ್ಲಿರುವ ಕಾವಲುಗಾರರು ಯಾರನ್ನೂ ಒಳಗೆ ಬಿಡುತ್ತಿಲ್ಲ. ನನ್ನ ತಾಯಿ ಮತ್ತು ಮಗಳು ಮೆಟ್ಟಿಲು ಹತ್ತಿ ನೆಲಮಹಡಿಗೆ ಹೋಗಿರಬಹುದು ಅಂದುಕೊಂಡಿದ್ದೇನೆ. ನಮ್ಮ ಸಮಾಧಾನಕ್ಕಾಗಿ ಎಲ್ಲೆಡೆ ಹುಡುಕಾಡಲು ಅಧಿಕಾರಿಗಳು ಅವಕಾಶ ನೀಡಬೇಕು ಎಂದು ಬಯಸುತ್ತೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

70ನೇ ಕನ್ನಡ ರಾಜ್ಯೋತ್ಸವ ಸಂಭ್ರಮ: ಎಲ್ಲೆಡೆ ಹರಡಿದ ಕನ್ನಡದ ಕಂಪು, ಕಂಠೀರವ ಸ್ಟೇಡಿಯಂನಲ್ಲಿ ಸಕಲ ಸಿದ್ಧತೆ

ನಾಡಿನಾದ್ಯಂತ 70ನೇ ಕನ್ನಡ ರಾಜ್ಯೋತ್ಸವ ಆಚರಣೆ: ಜನತೆಗೆ CM-DCM ಸೇರಿ ಗಣ್ಯರಿಂದ ಶುಭಾಶಯ

70ನೇ ಕನ್ನಡ ರಾಜ್ಯೋತ್ಸವ: ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಜಾತಿ ಗಣತಿ: ಮನೆ ಮನೆ ಸಮೀಕ್ಷೆ ಮುಕ್ತಾಯ; ರಾಜ್ಯದ ಒಟ್ಟು ಜನಸಂಖ್ಯೆ ಎಷ್ಟು ಗೊತ್ತಾ?

ದೇಶದ ಮೊದಲ 'ಕಡುಬಡತನ ಮುಕ್ತ' ರಾಜ್ಯ: ಘೋಷಣೆಗೆ ಕೇರಳ ಸಜ್ಜು, ಆರ್ಥಿಕ ತಜ್ಞರ ಆಕ್ಷೇಪವೇನು?

SCROLL FOR NEXT