ವಿಜಯ ಮಲ್ಯ 
ದೇಶ

ವಿಜಯ ಮಲ್ಯ ಸಾಲ-ಬಡ್ಡಿಯ ಲೆಕ್ಕಾಚಾರ: ಒಟ್ಟು 17,781 ಕೋಟಿಯಲ್ಲಿ ಇನ್ನೂ 6,997 ಕೋಟಿ ರೂ ಬಾಕಿ; ಹಣಕಾಸು ಸಚಿವಾಲಯ ಮಾಹಿತಿ

ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧೀಕರಣ ತಾವು ಪಡೆದಿರುವ ಸಾಲ 6 ಸಾವಿರ ಕೋಟಿ ರೂಪಾಯಿ ಎಂದು ಹೇಳಿದೆ ಎಂದು ದಾಖಲೆ ಪ್ರದರ್ಶಿಸಿದ್ದರು.

ನವದೆಹಲಿ: ಕರ್ನಾಟಕದ ಉದ್ಯಮಿ ವಿಜಯ ಮಲ್ಯ ಅವರು ಇತ್ತೀಚೆಗೆ ನೀಡಿದ ಪಾಡ್ ಕಾಸ್ಟ್‌ನಲ್ಲಿ ತಮ್ಮಿಂದ ಭಾರತದ ಬ್ಯಾಂಕ್‌ಗಳು 14 ಸಾವಿರ ಕೋಟಿ ರೂಪಾಯಿ ಸಾಲವನ್ನ ವಸೂಲಿ ಮಾಡಿಕೊಂಡಿವೆ. ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧೀಕರಣ ತಾವು ಪಡೆದಿರುವ ಸಾಲ 6 ಸಾವಿರ ಕೋಟಿ ರೂಪಾಯಿ ಎಂದು ಹೇಳಿದೆ ಎಂದು ದಾಖಲೆ ಪ್ರದರ್ಶಿಸಿದ್ದರು. ಭಾರತದಲ್ಲಿ ಅಧಿಕಾರಶಾಹಿ ತಮಗೆ ಕಿರುಕುಳ ನೀಡಿದೆ ಎಂದು ಹೇಳಿದ್ದರು.

ಕಂಪನಿಗಳ ಷೇರುಗಳ ಮಾರಾಟದ ಮೂಲಕ ಬ್ಯಾಂಕ್‌ಗಳು ತಾವು ವಾಸ್ತವವಾಗಿ ಬಾಕಿ ಉಳಿಸಿಕೊಂಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಮೊತ್ತವನ್ನು ವಸೂಲಿ ಮಾಡಿಕೊಂಡಿವೆ ಎಂದು ಉದ್ಯಮಿ ವಿಜಯ್ ಮಲ್ಯ ಹೇಳಿಕೊಂಡ ಕೆಲವು ದಿನಗಳ ನಂತರ, ಹಣಕಾಸು ಸಚಿವಾಲಯವು ಮಾಹಿತಿ ನೀಡಿದೆ.

ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕಾರ, ಕಿಂಗ್ ಫಿಷರ್ ಏರ್ ಲೈನ್ಸ್ 2013ರ ಜೂನ್‌ನಲ್ಲಿ 6,848 ಕೋಟಿ ರೂಪಾಯಿ ಅನುತ್ಪಾದಕ ಸಾಲವನ್ನು ಹೊಂದಿತ್ತು. ಆದರೆ 2025ರ ಜೂನ್ 10ಕ್ಕೆ ಸಾಲ ಮತ್ತು ಬಡ್ಡಿ, ಚಕ್ರಬಡ್ಡಿ ಸೇರಿ ಒಟ್ಟಾರೆ ಮೊತ್ತ 17,781 ಕೋಟಿ ರೂಪಾಯಿಗೆ ಏರಿದೆ. ಇದರಲ್ಲಿ ಬ್ಯಾಂಕ್‌ಗಳು 10, 815 ಕೋಟಿ ರೂಪಾಯಿ ಹಣವನ್ನು ವಿಜಯ ಮಲ್ಯರಿಂದ ವಸೂಲಿ ಮಾಡಿಕೊಂಡಿವೆ. ಇನ್ನೂ 6,848 ಕೋಟಿ ರೂಪಾಯಿ ಸಾಲದ ಹಣ ವಸೂಲಿ ಬಾಕಿ ಇದೆ.

ವಿಜಯ ಮಲ್ಯ, ಬ್ಯಾಂಕ್‌ಗಳಿಗೆ ಸಾಲವನ್ನು ಮರುಪಾವತಿಸಿದ್ದೇನೆ ಎಂದು ಹೇಳಿದ್ದರಲ್ಲಿ ಬಡ್ಡಿ, ಚಕ್ರಬಡ್ಡಿ ಸೇರಿಲ್ಲ. ಸಾಲದ ಮೂಲ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸುವವರೆಗೂ ಸಾಲದ ಬಡ್ಡಿ, ಚಕ್ರಬಡ್ಡಿ, ದಂಡವನ್ನು ವಿಧಿಸಲಾಗುತ್ತಲೇ ಇರುತ್ತೆ. ಡಿಆರ್‌ಟಿ ಪ್ರಕಾರ, ಬಡ್ಡಿ ಮತ್ತು ಇತರ ಶುಲ್ಕಗಳಾದ 10,933 ಕೋಟಿ ರೂ.ಗಳನ್ನು ಸೇರಿಸಿದರೆ, ಒಟ್ಟಾರೆ ಸಾಲದ ಮೊತ್ತ ಈಗ 17,781 ಕೋಟಿ ರೂಪಾಯಿಗೆ ಏರಿದೆ.

ವಿಜಯ ಮಲ್ಯ ತಾವು ಪಡೆದ 6,848 ಕೋಟಿ ರೂ.ಗಳ ಸಾಲಕ್ಕೆ ಬದಲಾಗಿ ಬ್ಯಾಂಕುಗಳಿಗೆ 14,000 ಕೋಟಿ ರೂ.ಗಳನ್ನು ಪಾವತಿಸಿರುವುದಾಗಿ ಹೇಳಿಕೊಂಡಿದ್ದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದ ಪ್ರಕಾರ, ಬಾಕಿ ಮೊತ್ತದಲ್ಲಿ ಭವಿಷ್ಯ ನಿಧಿ ಮತ್ತು ವಿಮಾನಯಾನ ಸಂಸ್ಥೆಯ ಇತರ ಶಾಸನಬದ್ಧ ಬಾಕಿಗಳು ಸಹ ಸೇರಿವೆ.

ಬ್ಯಾಂಕ್‌ಗಳು – ಒಟ್ಟು ಸಾಲ – ವಸೂಲಿಯಾದ ಮೊತ್ತ

SBI – 5,208 ಕೋಟಿ ರೂ – 3,174 ಕೋಟಿ ರೂ, ಎಸ್ ಬಿ ಐ ಗೆ ಇನ್ನೂ 1,939 ಕೋಟಿ ರೂ. ಹಣ ಪಾವತಿಸಬೇಕಾಗಿದೆ.

PNB – 3,084 ಕೋಟಿ ರೂ – 1,910 ಕೋಟಿ ರೂ ಬಾಕಿ 1,197 ಕೋಟಿ ರೂ.

IDBI – 2,390 ಕೋಟಿ ರೂ – 1,375 ಕೋಟಿ ರೂ ಬಾಕಿ 939 ಕೋಟಿ ರೂ.

BIO – 1,759 ಕೋಟಿ ರೂ – 1,034 ಕೋಟಿ ರೂ ಬಾಕಿ 708 ಕೋಟಿ ರೂ.

BIB – 1,580 ಕೋಟಿ ರೂ – 994 ಕೋಟಿ ರೂ ಬಾಕಿ ರೂ. 605 ಕೋಟಿ ರೂ.

OTH – 3,760 ಕೋಟಿ ರೂ – 2,327 ಕೋಟಿ ರೂ

ಒಟ್ಟು ಸಾಲದ ಮೊತ್ತ 17,781 ಕೋಟಿ ರೂ ಅದರಲ್ಲಿ 10,814 ಕೋಟಿ ರೂ ವಸೂಲಿಯಾಗಿದೆ. 6,967 ಕೋಟಿ ಇನ್ನೂ ವಸೂಲಿ ಮಾಡಬೇಕಾಗಿದೆ. ಯಾವುದೇ ಸಾಲವು ಬಡ್ಡಿಯೊಂದಿಗೆ ಸೇರುತ್ತದೆ. ಹಣವನ್ನು ಸಂಪೂರ್ಣವಾಗಿ ಪಾವತಿಸುವವರೆಗೆ, ದಂಡದ ಬಡ್ಡಿಯೂ ಅದರ ಜೊತೆಗೂಡುತ್ತದೆ ಮಲ್ಯ ಅವರ ಹೇಳಿಕೆಯ ಪ್ರಕಾರ, ಅವರು ಬಡ್ಡಿ ಮತ್ತು ದಂಡಗಳನ್ನು ಸೇರಿಸಿಲ್ಲ, ಅಸಲು ಹಣ ಮಾತ್ರ ಸೇರಿಸುತ್ತಿದ್ದಾರೆಂದು ತೋರುತ್ತದೆ.

ಒತ್ತೆ ಇಟ್ಟಿದ್ದ ಗೋವಾದ ಪ್ರಸಿದ್ಧ ಕಿಂಗ್‌ಫಿಷರ್ ವಿಲ್ಲಾ ಸೇರಿದಂತೆ ಮಲ್ಯ ಅವರ ಆಸ್ತಿಗಳ 10,815 ಕೋಟಿ ರೂ.ಗಳ ಷೇರುಗಳನ್ನು ಮಾರಾಟ ಮಾಡುವ ಮೂಲಕ ಬ್ಯಾಂಕುಗಳು ಹಣವನ್ನು ವಸೂಲಿ ಮಾಡಿವೆ. ಆರ್ಥಿಕ ಅಪರಾಧಿ ಎಂದು ಘೋಷಿಸಲ್ಪಟ್ಟ' ಮಲ್ಯ, ಈ ವಾರದ ಆರಂಭದಲ್ಲಿ ಪ್ರಭಾವಿ ರಾಜ್ ಶಮಾನಿ ಅವರೊಂದಿಗೆ ನಾಲ್ಕು ಗಂಟೆಗಳ ಕಾಲ ಪಾಡ್‌ಕ್ಯಾಸ್ಟ್ ನಡೆಸಿದ್ದರು ಮತ್ತು ಸಾಲಗಾರರಿಗೆ ನೀಡಬೇಕಾಗಿದ್ದ 14,000 ಕೋಟಿ ರೂ.ಗಳ ದುಪ್ಪಟ್ಟು ಮೊತ್ತವನ್ನು ಮರುಪಾವತಿಸಿರುವುದಾಗಿ ಹೇಳಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Mysuru Dasara: ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ; ಜಂಬೂ ಸವಾರಿಗೆ ಸಿಎಂ ಚಾಲನೆ

ಯದುವೀರ್ ಒಡೆಯರ್ ರಿಂದ ಬನ್ನಿ ಮರಕ್ಕೆ ಶಮಿ ಪೂಜೆ: ಅರಮನೆ ದಸರಾ ಮುಕ್ತಾಯ

HAL ಗೇ ಠಕ್ಕರ್, ಟಾಟಾ-Airbus ನಿಂದ ಕರ್ನಾಟಕದಲ್ಲಿ H125 ಹೆಲಿಕಾಪ್ಟರ್ ನಿರ್ಮಾಣ!

RSS @100: ಪ್ರಚಾರಕರಾಗಿ ಸಂಘ ಸೇರಿದ ಕೇರಳದ ಮಾಜಿ ಪೊಲೀಸ್ ಮುಖ್ಯಸ್ಥ Jacob Thomas

ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ: NCRB ವರದಿ

SCROLL FOR NEXT