ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್  
ದೇಶ

ಮಹಾರಾಷ್ಟ್ರ ಶಾಲೆಗಳಲ್ಲಿ 3ನೇ ಭಾಷೆಯಾಗಿ ಹಿಂದಿ ಕಲಿಸಲು ಆದೇಶ; ಮರಾಠಿ ಸಂಘಟನೆ, ಕಾಂಗ್ರೆಸ್ ವಿರೋಧ

ಕೆಲವು ಮರಾಠಿ ಭಾಷಾ ವಕೀಲರು ಸರ್ಕಾರವು ಆರಂಭದಲ್ಲಿ ಹಿಂದೆ ಸರಿದು ಈಗ "ಹಿಂಬಾಗಿಲಿನ" ಮೂಲಕ ಹಿಂದಿ ನೀತಿಯನ್ನು ಮರುಪರಿಚಯಿಸಿದೆ ಎಂದು ಆರೋಪಿಸಲಾಗಿದೆ.

ಮುಂಬೈ: ಮಹಾಯುತಿ ಸರ್ಕಾರ ಮಂಗಳವಾರ ರಾತ್ರಿ ರಾಜ್ಯದ ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗೆ ಹಿಂದಿಯನ್ನು ಮೂರನೇ ಐಚ್ಛಿಕ ಮತ್ತು ಕಡ್ಡಾಯ ಭಾಷೆಯಾಗಿ ಕಲಿಸಲು ಸರ್ಕಾರಿ ಆದೇಶ ಹೊರಡಿಸಿದೆ.

ಕೆಲವು ಮರಾಠಿ ಭಾಷಾ ವಕೀಲರು ಸರ್ಕಾರವು ಆರಂಭದಲ್ಲಿ ಹಿಂದೆ ಸರಿದು ಈಗ "ಹಿಂಬಾಗಿಲಿನ" ಮೂಲಕ ಹಿಂದಿ ನೀತಿಯನ್ನು ಮರುಪರಿಚಯಿಸಿದೆ ಎಂದು ಆರೋಪಿಸಿದರೆ, ವಿರೋಧ ಪಕ್ಷ ಕಾಂಗ್ರೆಸ್, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮರಾಠಿಗರ ಎದೆಗೆ "ಇರಿಯುವ" ಕೆಲಸ ಮಾಡಿದ್ದಾರೆ ಎಂದು ಕಿಡಿ ಕಾರಿದೆ.

ಹಿಂದಿ "ಸಾಮಾನ್ಯವಾಗಿ" ಮೂರನೇ ಭಾಷೆಯಾಗಿರುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಆದರೆ ಶಾಲೆಯಲ್ಲಿ ಪ್ರತಿ ತರಗತಿಗೆ 20 ವಿದ್ಯಾರ್ಥಿಗಳು ಹಿಂದಿ ಹೊರತುಪಡಿಸಿ ಇತರೆ ಯಾವುದೇ ಭಾರತೀಯ ಭಾಷೆ ಅಧ್ಯಯನ ಮಾಡುವ ಬಯಕೆ ವ್ಯಕ್ತಪಡಿಸಿದರೆ ಅದನ್ನು ಕಲಿಸುವ ಆಯ್ಕೆಯನ್ನು ನೀಡಿದೆ.

ಆದಾಗ್ಯೂ, ರಾಜ್ಯ ಶಾಲಾ ಶಿಕ್ಷಣ ಇಲಾಖೆ ಹಿಂದಿ ಹೊರತುಪಡಿಸಿ ಮೂರನೇ ಭಾಷೆಗೆ ಶಿಕ್ಷಕರನ್ನು ಒದಗಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಂಡಿದೆ. 20 ವಿದ್ಯಾರ್ಥಿಗಳು ಫ್ರೆಂಚ್ ಅಥವಾ ಸ್ಪ್ಯಾನಿಷ್‌ನಂತಹ ಬೇರೆ ಭಾಷೆಯನ್ನು ಅಧ್ಯಯನ ಮಾಡಲು ತೀವ್ರ ಆಸಕ್ತಿ ತೋರಿಸಿದರೆ, ಆ ನಿರ್ದಿಷ್ಟ ಭಾಷೆಯ ಶಿಕ್ಷಕರನ್ನು ಶಾಲೆಗೆ ಒದಗಿಸುವುದು ಕಡ್ಡಾಯವಲ್ಲ. ಹೀಗಾಗಿ, ಹಿಂದಿ ಹೊರತುಪಡಿಸಿ ಇತರ ಭಾಷೆಗಳನ್ನು ಡಿಜಿಟಲ್ ವೇದಿಕೆಗಳ ಮೂಲಕ ಕಲಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಎಲ್ಲಾ ಮಾಧ್ಯಮ ಶಾಲೆಗಳಲ್ಲಿ ಮರಾಠಿ ಕಡ್ಡಾಯ ಭಾಷೆಯಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

'ಹಿಂಬಾಗಿಲ ಮೂಲಕ ಹಿಂದಿ ಹೇರಿಕೆ'

"ಇದು ಹಿಂಬಾಗಿಲ ಮೂಲಕ ಹಿಂದಿ ಹೇರಿಕೆಯಲ್ಲದೆ ಬೇರೇನೂ ಅಲ್ಲ" ಎಂದು ಮರಾಠಿಪರ ಹೋರಾಟಗಾರ ಮುಂಬೈ ಮೂಲದ ಮರಾಠಿ ಭಾಷಾ ಅಭ್ಯಾಸ ಕೇಂದ್ರದ ದೀಪಕ್ ಪವಾರ್ ಅವರು ಹೇಳಿದ್ದಾರೆ.

"ಸರ್ಕಾರವು ಮರಾಠಿ ಜನರಿಗೆ ದ್ರೋಹ ಮಾಡಿದೆ. ನಾವು ಈಗ ಮೌನವಾಗಿದ್ದರೆ, ಅದು ಒಕ್ಕೂಟ ರಚನೆ ಮತ್ತು ಸಂಯುಕ್ತ ಮಹಾರಾಷ್ಟ್ರ ಚಳವಳಿಯ ಪರಂಪರೆಯನ್ನು ಕೆಡವಲು ದಾರಿ ಮಾಡಿಕೊಡುತ್ತದೆ" ಎಂದು ಪವಾರ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ ಮತ್ತು ಜನ ಇದರ ವಿರುದ್ಧ ಪ್ರತಿಭಟಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೆಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಿದೆ: 7.8ರಷ್ಟು GDP ಬೆಳವಣಿಗೆಯ ಟೀಕಾಕಾರರನ್ನು ಖಂಡಿಸಿದ ಪ್ರಧಾನಿ ಮೋದಿ!

ಏಷ್ಯಾಕಪ್ 2026: ಪಾಕಿಸ್ತಾನ ನೀಡಿದ ಅಲ್ಪಮೊತ್ತದ ರನ್ ಬೆನ್ನಟ್ಟಿ ಗೆದ್ದ ಭಾರತ

ತುಂಗಭದ್ರಾ ಜಲಾಶಯದ ಹೂಳು ತೆರವು ಸಾಧ್ಯವಿಲ್ಲದಿದ್ದರೆ ಸಮಾನಾಂತರ ಜಲಾಶಯ ನಿರ್ಮಿಸಿ: ರಾಜ್ಯ ಸರ್ಕಾರಕ್ಕೆ ಬಿ.ವೈ. ವಿಜಯೇಂದ್ರ ಆಗ್ರಹ!

ಏಷ್ಯಾಕಪ್ 2026: 3 ಡಕೌಟ್, ಪಾಕಿಸ್ತಾನವನ್ನು 55 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ಕಳಪೆ ದಾಖಲೆ ಸೃಷ್ಟಿ!

'ದುಡ್ಡಿನ ಧಿಮಾಕು.. ಕಾರಿಗೇ ಬೆಂಕಿ ಹಾಕಿ ಬಾ ಅಂತ ಹೇಳಿದ್ದೆ': ನಟ 'ಯಶ್' ತಾಯಿ ಪುಷ್ಪ ಅರುಣ್ ಕುಮಾರ್!