ಏರ್ ಇಂಡಿಯಾ ವಿಮಾನ 
ದೇಶ

Ahmedabad Plane Crash: Air India ಬುಕ್ಕಿಂಗ್ ನಲ್ಲಿ ಶೇ.20 ಇಳಿಕೆ, ಟಿಕೆಟ್ ದರ ಶೇ.15ರಷ್ಟು ಕಡಿತ!

ಅಹ್ಮದಾಬಾದ್ ನಲ್ಲಿ ನಡೆದ ಬೋಯಿಂಗ್ ಡ್ರೀಮ್‌ಲೈನರ್ ವಿಮಾನದ ಅಪಘಾತದ ನಂತರ ಏರ್ ಇಂಡಿಯಾ ಬುಕಿಂಗ್‌ಗಳು ಗಣನೀಯವಾಗಿ ಕುಸಿದಿದೆ.

ಬೆಂಗಳೂರು: ಅಹ್ಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಸಂಸ್ಥೆಯ ಟಿಕೆಟ್ ಬುಕ್ಕಿಂಗ್ ನಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಏರ್ ಇಂಡಿಯಾ ಸಂಸ್ಥೆ ಟಿಕೆಟ್ ದರದಲ್ಲಿ ಕಡಿತ ಮಾಡಿದೆ.

ಹೌದು.. ಅಹ್ಮದಾಬಾದ್ ನಲ್ಲಿ ನಡೆದ ಬೋಯಿಂಗ್ ಡ್ರೀಮ್‌ಲೈನರ್ ವಿಮಾನದ ಅಪಘಾತದ ನಂತರ ಏರ್ ಇಂಡಿಯಾ ಬುಕಿಂಗ್‌ಗಳು ಗಣನೀಯವಾಗಿ ಕುಸಿದಿದೆ.

ಕಳೆದ ವಾರ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದ ದುರಂತ ಅಪಘಾತದ ನಂತರ, ಏರ್ ಇಂಡಿಯಾ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಬುಕಿಂಗ್‌ಗಳ ಪ್ರಮಾಣದಲ್ಲಿ ಶೇಕಡಾ 20 ರಷ್ಟು ಕುಸಿದಿದ್ದು, ಟಿಕೆಟ್ ದರಗಳು ಕೂಡ ಶೇಕಡಾ 15 ರಷ್ಟು ಇಳಿಕೆಯಾಗಿವೆ.

ಭಾರತೀಯ ಪ್ರವಾಸ ನಿರ್ವಾಹಕರ ಸಂಘದ (ಐಎಟಿಒ) ಅಧ್ಯಕ್ಷ ರವಿ ಗೋಸೈನ್ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 'ಏರ್ ಇಂಡಿಯಾ ವಿಮಾನದ ದುರದೃಷ್ಟಕರ ಘಟನೆಯ ನಂತರ, ವಿಶೇಷವಾಗಿ ಅಂತರರಾಷ್ಟ್ರೀಯ ವಲಯಗಳಲ್ಲಿ ಬುಕಿಂಗ್‌ಗಳಲ್ಲಿ ತಾತ್ಕಾಲಿಕ ಕುಸಿತ ಕಂಡುಬಂದಿದೆ. ನಮ್ಮ ಅಂದಾಜಿನ ಪ್ರಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 18 ರಿಂದ 22 ಮತ್ತು ದೇಶೀಯವಾಗಿ ಶೇಕಡಾ 10 ರಿಂದ 12 ರಷ್ಟು ಕುಸಿತ ಕಂಡುಬಂದಿದೆ' ಎಂದು ಹೇಳಿದ್ದಾರೆ.

ಇನ್ನು ಈ ಬೆಳವಣಿಗೆಗಳ ಕುರಿತು ಏರ್ ಇಂಡಿಯಾ ಅಧಿಕೃತ ಹೇಳಿಕೆಯನ್ನು ನೀಡಿಲ್ಲವಾದರೂ, ಬುಕಿಂಗ್ ಪ್ರವೃತ್ತಿಗಳು ಮತ್ತು ಬೆಲೆಗಳ ಮೇಲೆ ಪರಿಣಾಮ ಬೀರುವ ಭಾವನಾತ್ಮಕ ಪ್ರತಿಕ್ರಿಯೆಗಳಾಗಿವೆ. ಮಧ್ಯಮ ದರ ತಿದ್ದುಪಡಿ ಕಂಡುಬಂದಿದೆ" ಎಂದು ಗೋಸೈನ್ ಹೇಳಿದರು.

"ದೇಶೀಯವಾಗಿ, ಟಿಕೆಟ್ ಬೆಲೆಗಳು ಶೇಕಡಾ 8 ರಿಂದ 12 ರಷ್ಟು ಕಡಿಮೆಯಾಗಿದೆ. ವಿಶೇಷವಾಗಿ ಏರ್ ಇಂಡಿಯಾ, ಇಂಡಿಗೊ ಮತ್ತು ಅಕಾಸಾದಂತಹ ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಗಳೊಂದಿಗೆ ಸ್ಪರ್ಧಿಸುವ ಮಾರ್ಗಗಳಲ್ಲಿ ದರ ಕಡಿತ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ, ವಿಶೇಷವಾಗಿ ಯುರೋಪ್ ಮತ್ತು ಆಗ್ನೇಯ ಏಷ್ಯಾಕ್ಕೆ ದರಗಳು ಶೇಕಡಾ 10 ರಿಂದ 15 ರಷ್ಟು ಕಡಿಮೆಯಾಗಿದೆ. ಈ ಬೆಲೆ ಹೊಂದಾಣಿಕೆಗಳು, ಕಡಿಮೆಯಾದ ಬೇಡಿಕೆಯನ್ನು ಸರಿದೂಗಿಸಲು ಪ್ರಚಾರ ಪ್ರಯತ್ನಗಳು ಮತ್ತು ಇಳುವರಿ ನಿರ್ವಹಣಾ ತಂತ್ರಗಳ ಸಂಯೋಜನೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿಶೇಷವಾಗಿ ಕಾರ್ಪೊರೇಟ್ ಮತ್ತು ಉನ್ನತ-ಮಟ್ಟದ ವಿರಾಮ ಪ್ರಯಾಣಿಕರಲ್ಲಿ ರದ್ದತಿಗಳಲ್ಲಿಯೂ ಹೆಚ್ಚಳವಾಗಿದೆ. ಅಪಘಾತದ ನಂತರದ ವಾರದಲ್ಲಿ ಬುಕ್ಕಿಂಗ್ ರದ್ದತಿಗಳು ಅಂತರರಾಷ್ಟ್ರೀಯವಾಗಿ 15 ರಿಂದ 18 ಪ್ರತಿಶತ ಮತ್ತು ದೇಶೀಯವಾಗಿ 8ರಿಂದ 10 ಪ್ರತಿಶತದಷ್ಟು ಹೆಚ್ಚಾಗಿದೆ. ಆದಾಗ್ಯೂ, ಯಾವುದೇ ವ್ಯವಸ್ಥಿತ ಸುರಕ್ಷತಾ ಸಮಸ್ಯೆಗಳನ್ನು ಗುರುತಿಸಲಾಗಿಲ್ಲ ಎಂದು ಗೋಸೈನ್ ಚೇತರಿಕೆಯ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು.

"ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಏರ್ ಇಂಡಿಯಾ ಅಂತರರಾಷ್ಟ್ರೀಯ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿದೆ ಎಂದು ಪುನರುಚ್ಚರಿಸಿದೆ. ಮುಂಬರುವ ದಿನಗಳಲ್ಲಿ ಗ್ರಾಹಕರ ಭಾವನೆ ಸ್ಥಿರಗೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದರು.

ಜೂನ್ 12 ರಂದು 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತ ಲಂಡನ್‌ಗೆ ಹೊರಟಿದ್ದ ಎಐ-171 ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾಯಿತು.

ವಿಮಾನವು ಮೇಘನಿನಗರ ಪ್ರದೇಶದಲ್ಲಿ ಪತನಗೊಂಡು ವೈದ್ಯಕೀಯ ಸಂಕೀರ್ಣಕ್ಕೆ ಡಿಕ್ಕಿ ಹೊಡೆದು ಸ್ಫೋಟವಾಗಿತ್ತು. ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದರು. ವಿಮಾನದಲ್ಲಿ ಮಾತ್ರವಲ್ಲದೇ ಸ್ಫೋಟದ ರಭಸಕ್ಕೆ ಕಟ್ಟಡ ಮತ್ತು ಅದರ ಅವರಣದಲ್ಲಿದ್ದ 30 ಮಂದಿ ಕೂಡ ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ತುರ್ತು ಕಾರಣ'ಗಳಿಂದಾಗಿ ಎಲ್ಲಾ ಅಧ್ವಾನವಾಯಿತು: ವಿಮಾನಗಳ ರದ್ದತಿ ಕುರಿತು IndiGo ಸ್ಪಷ್ಟನೆ

ಕೆಂಪೇಗೌಡ ಏರ್ ಪೋರ್ಟ್ ಲ್ಲಿ 62 ವಿಮಾನ ಸೇರಿ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದು; ಕಾರಣವೇನು?: ತನಿಖೆ ಆರಂಭಿಸಿದ DGCA

ಸಂಚಾರಿ ಸಾಥಿ ಆ್ಯಪ್: ಮೋದಿ ಸರ್ಕಾರ 'ಯೂ ಟರ್ನ್', ಮಧ್ಯಮ ವರ್ಗದ ಜನರಿಗೆ ಸಿಕ್ಕ ಅಪರೂಪದ ಜಯ! ಹೇಗೆ?

ಆಪರೇಷನ್ ಟ್ರೈಡೆಂಟ್: ಭಾರತ ಏಕೆ ಡಿಸೆಂಬರ್ 4ರಂದು ನೌಕಾಪಡೆಯ ದಿನವನ್ನು ಆಚರಿಸುತ್ತದೆ?

ನನ್ನ ಜ್ಯೋತಿಷಿ ಗುರುಗಳಿಗೆ 4 ನೇ ಹಂತದ ಕ್ಯಾನ್ಸರ್ ಇದೆ: ನಿದ್ರೆ ಇಲ್ಲದ ರಾತ್ರಿ ಕಳೆದಿದ್ದೇನೆ, ಕೌತುಕ ಹುಟ್ಟಿಸಿದ ರಾಜ್ ನಿಡಿಮೋರು ಮಾಜಿ ಪತ್ನಿ!

SCROLL FOR NEXT