ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ಮುಸ್ಲಿಂ ಧರ್ಮ ಗುರು ಮೌಲಾನಾ ಶಹಾಬುದ್ದೀನ್ ರಜ್ವಿ 
ದೇಶ

Uttar Pradesh: ಮುಸ್ಲಿಮರು ಯೋಗ ಮಾಡಬಹುದು, ಆದ್ರೆ ಇದನ್ನು ಮಾಡಲೇಬಾರದು: ಧರ್ಮ ಗುರುವಿಗೆ ತಿರುಗೇಟು ನೀಡಿ ಸಚಿವ ಹೇಳಿದ್ದೇನು?

ಮದರಾಸಗಳಲ್ಲಿಯೂ ಯೋಗವನ್ನು ಪ್ರೋತ್ಸಾಹಿಸಲಾಗುತ್ತದೆ ಆದರೆ, ಸೂರ್ಯ ನಮಸ್ಕಾರ ಮಾಡುವಂತಿಲ್ಲ. ಇಸ್ಲಾಂನಲ್ಲಿ ಇದನ್ನು ನಿರ್ಬಂಧಿಸಲಾಗಿದೆ.

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ವಿಶ್ವದಾದ್ಯಂತ ಜನರು ಯೋಗ ಪ್ರದರ್ಶನ ಮಾಡಿದ್ದಾರೆ. ಮಸೀದಿಗಳ ಬಳಿಯೂ ಯೋಗ ಪ್ರದರ್ಶನ ನಡೆದಿದೆ. ಆದರೆ ಸೂರ್ಯ ನಮಸ್ಕಾರ ಮಾತ್ರ ಮಾಡಿಲ್ಲ. ಇದಕ್ಕೆ ಇಸ್ಲಾಂನಲ್ಲಿ ನಿರ್ಬಂಧಿಸಲಾಗಿದೆ.

ಬರೇಲಿಯ ಇ-ಅಲ್ಹಾ ಹಜರಾತ್ ದರ್ಮದ ಬಳಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಸ್ಲಿಂ ಧರ್ಮ ಗುರು ಹಾಗೂ ಅಲ್ ಇಂಡಿಯಾ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ, ಮಸೀದಿ, ಮದರಾಸಗಳಲ್ಲಿಯೂ ಯೋಗವನ್ನು ಪ್ರೋತ್ಸಾಹಿಸಲಾಗುತ್ತದೆ ಆದರೆ, ಸೂರ್ಯ ನಮಸ್ಕಾರ ಮಾಡುವಂತಿಲ್ಲ. ಇಸ್ಲಾಂನಲ್ಲಿ ಇದನ್ನು ನಿರ್ಬಂಧಿಸಲಾಗಿದೆ. ಯಾವುದೇ ಕಾರಣಕ್ಕೂ ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಬಾರದು ಎಂದು ತಿಳಿಸಿದರು.

ಯೋಗವನ್ನು ಪ್ರೋತ್ಸಾಹಿಸುತ್ತೇನೆ. ಆದರೆ ಸೂರ್ಯ ನಮಸ್ಕಾರವನ್ನು ವಿರೋಧಿಸುತ್ತೇನೆ. ಮುಸ್ಲಿಮರು ಸೂರ್ಯ ನಮಸ್ಕಾರ ಮಾಡುವಂತಿಲ್ಲ. ಯೋಗದಲ್ಲಿ ಸೂರ್ಯ ನಮಸ್ಕಾರ ಒಂದು ಚಟುವಟಿಕೆಯಾಗಿದೆ. ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಯರು ಯೋಗ ಮಾಡಬೇಕು. ಮದರಾಸ, ಮಸೀದಿಗಳಲ್ಲಿಯೂ ಯೋಗ ಮಾಡಬಹುದು ಆದರೆ, ಸೂರ್ಯನಿಗೆ ನಮಿಸುವುದು, ಸೂರ್ಯನಿಗೆ ಪೂಜೆಸುವುದನ್ನು ಇಸ್ಲಾಂ ಧರ್ಮದಲ್ಲಿ ನಿರ್ಬಂಧಿಸಲಾಗಿದೆ ಎಂದು ಹೇಳಿದರು.

ಸೂರ್ಯ ನಮಸ್ಕಾರ ಇಸ್ಲಾಂನ ಭಾಗವಲ್ಲ: ಇಸ್ಲಾಂನಲ್ಲಿ ಸೂರ್ಯನಿಗೆ ಪೂಜೆಸುವುದು ಕಾನೂನುಬದ್ಧ ನಿಷೇಧವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಸೂರ್ಯ ನಮಸ್ಕಾರ ಮಾಡದಂತೆ ನಿಷೇಧಿಸಿದ್ದೇವೆ. ಸೂರ್ಯ ನಮಸ್ಕಾರ ಇಸ್ಲಾಂನ ಭಾಗವಲ್ಲ. ಹಾಗಾಗಿ ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಬಾರದು ಎಂದರು.

ಇಸ್ಲಾಂನಲ್ಲೂ ಯೋಗ ಅಭ್ಯಾಸ ಇದೆ. ಯೋಗ ಧರ್ಮದ ಭಾಗವಲ್ಲ. ಅದರೊಂದಿಗೆ ಯಾವುದೇ ಧರ್ಮವನ್ನು ಬೇಕಾದರೆ ಸೇರಿಕೊಳ್ಳಬಹುದು. ಆದರೆ ಸೂರ್ಯ ನಮಸ್ಕಾರ ಸನಾತನ ಧರ್ಮದ ಭಾಗವಾಗಿದೆ. ಅರ್ಥಾತ್ ಹಿಂದೂ ಪೂಜೆಯಾಗಿದೆ. ಇದಕ್ಕೆ ಇಸ್ಲಾಂ ಧರ್ಮದಲ್ಲಿ ಅನುಮತಿ ಇಲ್ಲ. ಸೂರ್ಯ ನಮಸ್ಕಾರ ಇಸ್ಲಾಂ ಧರ್ಮಕ್ಕೆ ಹಾನಿಕಾರಕವಾದದ್ದು ಎಂದು ಮೌಲಾನಾ ಶಹಾಬುದ್ದೀನ್ ರಜ್ವಿ ಹೇಳಿದರು.

ಇಸ್ಲಾಂ ಧರ್ಮಗುರುವಿಗೆ ತಿರುಗೇಟು ನೀಡಿದ ಸಚಿವ ರಾಥೋರ್: ಇದೇ ವೇಳೆ ಇಸ್ಲಾಂ ಧರ್ಮ ಗುರು ಹೇಳಿಕೆಗೆ ತಿರುಗೇಟು ನೀಡಿದ ಉತ್ತರ ಪ್ರದೇಶದ ಸಚಿವ ಜೆಪಿಎಸ್ ರಾಥೋರ್, "ನಮ್ಮ ಸೂರ್ಯ ಹೇಗೆ ಸತ್ಯವೋ, ಹಾಗೆಯೇ ಸೂರ್ಯ ನಮಸ್ಕಾರವೂ ಹೌದು, ಸೂರ್ಯೋದಯವಾದರೆ, ಸೂರ್ಯ ನಮಸ್ಕಾರವೂ ಮುಂದುವರಿಯುತ್ತದೆ. ಸೂರ್ಯನಿಗೆ ಉಗುಳಿದರೆ ಅಂತಿಮವಾಗಿ ಅವರ ಮುಖದ ಮೇಲೆಯೇ ಉಗುಳು ಬೀಳುತ್ತದೆ. ಸೂರ್ಯ ನಮಸ್ಕಾರ ವಿರೋಧಿಸುವವರಿಗೆ ಅದೇ ಭವಿಷ್ಯವು ಕಾಯುತ್ತಿದೆ. ಇದು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕಾದ ಪುರಾತನ ಯೋಗಾಭ್ಯಾಸವಾಗಿದೆ. ಅದನ್ನು ವಿರೋಧಿಸುವವರು ಸಂಕುಚಿತ ಮನೋಭಾವವುಳ್ಳವರು ಎಂದು ಟೀಕಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ramnath Goenka Sahithya Samman 2025: ಸಾಹಿತಿ ಚಂದ್ರಶೇಖರ ಕಂಬಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

'ನೆರೆಹೊರೆಯವರು ಕೆಟ್ಟವ್ರು, ನಾವೇನ್ ಮಾಡ್ಬೇಕು ಅನ್ನೋದನ್ನ ಬೇರೆಯವ್ರು ಹೇಳೋದ್ ಬೇಡ: ಜೈಶಂಕರ್‌ ಖಡಕ್ ವಾರ್ನಿಂಗ್

ಮುಂಬೈ ಮೇಯರ್ ಹಿಂದೂ-ಮರಾಠಿ ಆಗಿರುತ್ತಾರೆ: ಮಹಾ ಸಿಎಂ ಫಡ್ನವೀಸ್

Bangladesh ವಿವಾದ: 'ಇತಿಹಾಸ ಮರೆತಿದ್ದಾರೆ.. ತಲೆ ತೆಗೆಯೋದ್ರಲ್ಲಿ ನಮ್ಮನ್ನು ಮೀರಿಸೋರಿಲ್ಲ'..: BJP ನಾಯಕ ಟೆಮ್ಜೆನ್

Ballari banner row: ಯಾರ ಗನ್ ನಿಂದ ಗುಂಡು ಹಾರಿತ್ತು ಎಂದು ತನಿಖೆ ಮಾಡಲು ಹೇಳಿದ್ದೇನೆ: ಸಿಎಂ ಸಿದ್ದರಾಮಯ್ಯ

SCROLL FOR NEXT