ನವದೆಹಲಿ: ದೆಹಲಿಯಿಂದ ಜಮ್ಮು ಮೂಲಕ ಶ್ರೀನಗರಕ್ಕೆ ಹಾರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸೋಮವಾರ ಮಧ್ಯಾಹ್ನ ಅಲ್ಲಿ ಲ್ಯಾಂಡ್ ಆಗದೆ ವಾಪಸ್ ರಾಷ್ಟ್ರ ರಾಜಧಾನಿ ವಿಮಾನ ನಿಲ್ದಾಣಕ್ಕೆ ಮರಳಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ದೆಹಲಿಗೆ ಮರಳಲು ತಾಂತ್ರಿಕ ದೋಷ ಕಾರಣ ಎಂದು ತಕ್ಷಣಕ್ಕೆ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.
ವಿಮಾನವು ರಾಷ್ಟ್ರ ರಾಜಧಾನಿಗೆ ಮರಳುವ ಮೊದಲು ವಿಮಾನ ನಿಲ್ದಾಣವನ್ನು ಹಲವು ಬಾರಿ ಸುತ್ತುವರೆದಿದೆ ಎಂದು ವರದಿಯೊಂದು ತಿಳಿಸಿದೆ.
ಏರ್ ಇಇಂಡಿಯಾ ವಿಮಾನ IX-2564 ಇಂದು ಮಧ್ಯಾಹ್ನ ಶ್ರೀನಗರಕ್ಕೆ ಹೊರಡುವ ಮುನ್ನ ಜಮ್ಮುವಿನಲ್ಲಿ ಲ್ಯಾಂಡ್ ಆದಬೇಕಿತ್ತು. ಆದರೆ ಅದರ ಪೈಲಟ್ ವಿಮನ ಇಳಿಸದೆ ದೆಹಲಿಗೆ ಹಿಂತಿರುಗಲು ನಿರ್ಧರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಇಳಿಯಲು ರನ್‌ವೇ ಸ್ಪಷ್ಟವಾಗಿತ್ತು. ಆದರೆ ಪೈಲಟ್ ವಿಮಾನ ಲ್ಯಾಂಡ್ ಆಗುವುದಿಲ್ಲ ಮತ್ತು ಬದಲಾಗಿ ದೆಹಲಿಗೆ ಹಿಂತಿರುಗುತ್ತಿದೆ ಎಂದು ಘೋಷಿಸಿದರು.
ಹವಾಮಾನ ಮತ್ತು ರನ್‌ವೇ ಸ್ಪಷ್ಟವಾಗಿತ್ತು. ಆದರೆ ಪೈಲಟ್‌ಗೆ ಸೂಕ್ತವಾದ ಲ್ಯಾಂಡಿಂಗ್ ಪ್ರದೇಶ ಕಂಡುಹಿಡಿಯಲು ಸಾಧ್ಯವಾಗಲಿಲ್ಲ ಎಂದು ಪಿಟಿಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.