ಜಗನ್ ಮೋಹನ್ ರೆಡ್ಡಿ-ಶರ್ಮಿಳಾ PTI
ದೇಶ

ತಲೆ ಮೇಲೆ ಕಾರು ಹರಿದು ಸಾವು: 'ಸಿಂಗಯ್ಯ ಸಾವಿಗೆ Jagan Mohan Reddy ನಿರ್ಲಕ್ಷ್ಯವೇ ಕಾರಣ'; ಅಣ್ಣನ ವಿರುದ್ಧ YS Sharmila!

ಬೆಟ್ಟಿಂಗ್‌ನಲ್ಲಿ ಮೃತಪಟ್ಟವರ ಪ್ರತಿಮೆಯನ್ನು ನಿರ್ಮಿಸುವುದೇ ತಪ್ಪು.. ಅಂತಹವರ ವಿಗ್ರಹ ಲೋಕಾರ್ಪಣೆಗೆ ಹೋಗಿ ರೋಡ್ ಶೋ ಮಾಡಿ ಇಬ್ಬರ ಬಲಿ ಪಡೆದಿರುವುದು ಅಕ್ಷಮ್ಯ ಎಂದು ಶರ್ಮಿಳಾ ಹೇಳಿದರು.

ತಿರುಪತಿ: ರೋಡ್ ಶೋ ವೇಳೆ ತಲೆ ಮೇಲೆ ಕಾರು ಹರಿದು ವ್ಯಕ್ತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಂತ ಅಣ್ಣ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ವೈಎಸ್ ಶರ್ಮಿಳಾ ವಾಗ್ದಾಳಿ ನಡೆಸಿದ್ದು, ಸಿಂಗಯ್ಯ ಸಾವಿಗೆ ಜಗನ್ ನಿರ್ಲಕ್ಷ್ಯವೇ ಕಾರಣ ಎಂದು ಆಂಧ್ರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಕೂಡ ಆಗಿರುವ ಶರ್ಮಿಳಾ ಆರೋಪಿಸಿದ್ದಾರೆ.

ತಿರುಪತಿಯ ಶ್ರೀಕಾಳಹಸ್ತಿಯಲ್ಲಿ ನಡೆದ ತಿರುಪತಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾತನಾಡಿದ ವೈಎಸ್ ಶರ್ಮಿಳಾ, 'ಬೆಟ್ಟಿಂಗ್‌ನಲ್ಲಿ ಮೃತಪಟ್ಟವರ ಪ್ರತಿಮೆಯನ್ನು ನಿರ್ಮಿಸುವುದೇ ತಪ್ಪು.. ಅಂತಹವರ ವಿಗ್ರಹ ಲೋಕಾರ್ಪಣೆಗೆ ಹೋಗಿ ರೋಡ್ ಶೋ ಮಾಡಿ ಇಬ್ಬರ ಬಲಿ ಪಡೆದಿರುವುದು ಅಕ್ಷಮ್ಯ ಎಂದು ಶರ್ಮಿಳಾ ಹೇಳಿದರು.

ಇದೇ ವೇಳೆ ಜಗನ್ ಕ್ಷಮೆಯಾಚಿಸದೆ ವಿಡಿಯೋ ನಕಲಿ ಎಂದು ನಟಿಸುವುದು ಕ್ರೂರ.. ಜಗನ್ ಅವರಿಗೆ ಮಾನವೀಯತೆ ಇದ್ದರೆ ಸಿಂಗಯ್ಯ ಅವರ ಕುಟುಂಬವನ್ನು ಏಕೆ ಭೇಟಿ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಜಗನ್ ಮತ್ತು ವೈ.ಎಸ್.ಆರ್.ಸಿಪಿ ನಾಯಕರಿಗೆ ಮಾನವೀಯತೆ ಇದ್ದರೆ, ಅಪಘಾತದ ನಂತರ ಅವರು ಸಿಂಗಯ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಜಗನ್ ಅವರಿಗೆ ಇನ್ನೂ ಮಾನವೀಯತೆ ಇದ್ದರೆ, ಸಿಂಘಯ್ಯ ಅವರ ಕುಟುಂಬಕ್ಕೆ 5-10 ಕೋಟಿ ರೂ. ಪರಿಹಾರವನ್ನು ನೀಡಬೇಕು ಮತ್ತು ಕ್ಷಮೆ ಕೇಳಬೇಕು ಎಂದು ವೈ.ಎಸ್. ಶರ್ಮಿಳಾ ಹೇಳಿದರು.

ಅಧಿಕಾರದಲ್ಲಿದ್ದಾಗ ಕುಂಭಕರ್ಣನಂತೆ ಮಲಗಿದ್ದ

ಜಗನ್ ಅಧಿಕಾರದಲ್ಲಿದ್ದಾಗ ಐದು ವರ್ಷಗಳ ಕಾಲ ಕುಂಭಕರ್ಣನಂತೆ ಮಲಗಿದ್ದ, ಈಗ ಸಾರ್ವಜನಿಕ ಸಮಸ್ಯೆಗಳನ್ನು ಹೇಳುತ್ತಾ ಹೊರಬರುತ್ತಿರುವುದು ವಿಚಿತ್ರವಾಗಿದೆ. ಜಗನ್ ಅವರ ಶಕ್ತಿ ಪ್ರದರ್ಶನ ಮತ್ತು ಸಾರ್ವಜನಿಕ ಜನಾಂದೋಲನ ಕಾರ್ಯಕ್ರಮಗಳು ಜನರಿಗಾಗಿ ಅಲ್ಲ. ಜಗನ್ ತನ್ನ ಬಳಿ ಹಣ ಮತ್ತು ಶಕ್ತಿ ಇದೆ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ.

ಜಗನ್ ಮತ್ತು ಅವರ ಪಕ್ಷದ ಸಾರ್ವಜನಿಕ ಜನಾಂದೋಲನ ಸಭೆಗಳಿಗೆ ಅನುಮತಿ ನೀಡಬಾರದು. ಜನರನ್ನು ಕೊಲ್ಲಬಾರದು ಎಂದು ಶರ್ಮಿಳಾ ಒತ್ತಾಯಿಸಿದರು.

ಅಂತೆಯೇ ಸಿಂಘಯ್ಯ ಅಪಘಾತಕ್ಕೀಡಾದಾಗ ಜಗನ್ ಕಾರಿನಲ್ಲಿದ್ದ ಎಲ್ಲರನ್ನೂ ವಿಚಾರಣೆಗೆ ಕರೆಯುವಂತೆ ವೈಎಸ್ ಶರ್ಮಿಳಾ ಆಂಧ್ರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT