ಪ್ರಧಾನಿ ಮೋದಿ  
ದೇಶ

ಬ್ರಿಟಿಷರ ಕಾಲದ ಬಳಕೆಯಲ್ಲಿಲ್ಲದ ಕಾನೂನುಗಳ ಬಗ್ಗೆ ವಿರೋಧ ಪಕ್ಷಗಳು ಏಕೆ ಮೌನವಾಗಿದ್ದವು: ಪ್ರಧಾನಿ ಮೋದಿ

'ನ್ಯೂಸ್ ಎಕ್ಸ್ ವರ್ಲ್ಡ್' ಚಾನೆಲ್ ನ್ನು ಉದ್ಘಾಟನೆಯ NXT ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದಶಕಗಳಿಂದ ಜಗತ್ತು ಭಾರತವನ್ನು ತನ್ನ ಬ್ಯಾಕ್ ಆಫೀಸ್ ಆಗಿ ನೋಡುತ್ತಿತ್ತು. ಆದರೆ ದೇಶವು ಈಗ ವಿಶ್ವದ ಕಾರ್ಖಾನೆಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.

ನವದೆಹಲಿ: ಭಾರತೀಯ ಸ್ವದೇಶಿ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿರುವುದರಿಂದ ಮತ್ತು ಪ್ರಪಂಚದಾದ್ಯಂತ ತಮ್ಮ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದ ಸ್ಥಳೀಯತೆಗೆ ಆದ್ಯತೆ ಅಭಿಯಾನವು ಫಲ ನೀಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

'ನ್ಯೂಸ್ ಎಕ್ಸ್ ವರ್ಲ್ಡ್' ಚಾನೆಲ್ ನ್ನು ಉದ್ಘಾಟನೆಯ NXT ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದಶಕಗಳಿಂದ ಜಗತ್ತು ಭಾರತವನ್ನು ತನ್ನ ಬ್ಯಾಕ್ ಆಫೀಸ್ ಆಗಿ ನೋಡುತ್ತಿತ್ತು. ಆದರೆ ದೇಶವು ಈಗ ವಿಶ್ವದ ಕಾರ್ಖಾನೆಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.

ಇಂದು ಭಾರತವು ಕಾರ್ಯಪಡೆಯಾಗಿ ಉಳಿದಿಲ್ಲ, ಬದಲಿಗೆ "ವಿಶ್ವ ಶಕ್ತಿ"ಯಾಗಿದೆ. ದೇಶವು ಸೆಮಿಕಂಡಕ್ಟರ್‌ಗಳು ಮತ್ತು ವಿಮಾನ ವಾಹಕಗಳನ್ನು ತಯಾರಿಸುತ್ತಿದೆ. ಮಖಾನಾ, ರಾಗಿ, ಆಯುಷ್ ಉತ್ಪನ್ನಗಳಂತಹ ಸೂಪರ್ ಫುಡ್ ಗಳನ್ನು ಮತ್ತು ಭಾರತೀಯ ಯೋಗ ಪರಂಪರೆಯನ್ನು ಇಂದು ಪ್ರಪಂಚದಾದ್ಯಂತ ಸ್ವೀಕರಿಸಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಭಾರತವು ಪ್ರಮುಖ ಆಟೋಮೊಬೈಲ್ ಉತ್ಪಾದಕವಾಗಿದೆ ಮತ್ತು ಅದರ ರಕ್ಷಣಾ ರಫ್ತು ಹೆಚ್ಚುತ್ತಿದೆ ಎಂದರು. ಭಾರತವನ್ನು ಯಾವುದೇ ಬೇಡಿಕೆಯಿಲ್ಲದೆ ಹಾಗೆಯೇ ಪ್ರಸ್ತುತಪಡಿಸಬೇಕು. ಇದಕ್ಕೆ ಯಾವುದೇ ಲೇಪನದ ಅಗತ್ಯವಿಲ್ಲ, ದೇಶದ ನೈಜ ಕಥೆಗಳು ಜಗತ್ತನ್ನು ತಲುಪಬೇಕು ಎಂದು ಹೇಳಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮೂರನೇ ಅವಧಿಗೆ ಮತ್ತೆ ಆಯ್ಕೆಯಾಗಿರುವುದು ಜನರ ನಂಬಿಕೆಯನ್ನು ತೋರಿಸಿದೆ ಮತ್ತು ಭಾರತದ ಹೊಸ ಜಾಗತಿಕ ಸುದ್ದಿ ಚಾನೆಲ್ ದೇಶದ ಸಾಧನೆಗಳನ್ನು ವಿದೇಶಗಳಿಗೆ ಕೊಂಡೊಯ್ಯುತ್ತದೆ ಎಂದರು.

21 ನೇ ಶತಮಾನದಲ್ಲಿ ಜಗತ್ತು ಭಾರತವನ್ನು ನೋಡುತ್ತಿದೆ. ದೇಶವು ನಿರಂತರವಾಗಿ ಸಕಾರಾತ್ಮಕ ಸುದ್ದಿಗಳನ್ನು ಉತ್ಪಾದಿಸುತ್ತಿದೆ. ಭಾರತವು ಈಗ ಅನೇಕ ಜಾಗತಿಕ ಉಪಕ್ರಮಗಳನ್ನು ಮುನ್ನಡೆಸುತ್ತಿದೆ ಎಂದು ಅವರು ಇತ್ತೀಚಿನ ಎಐ ಶೃಂಗಸಭೆ ಮತ್ತು ಭಾರತದ ಜಿ20 ಅಧ್ಯಕ್ಷತೆ ಸಹ-ಆತಿಥ್ಯ ವಹಿಸಿದ್ದನ್ನು ಉಲ್ಲೇಖಿಸಿ ಹೇಳಿದರು.

ಮಹಾ ಕುಂಭವನ್ನು ಉಲ್ಲೇಖಿಸಿದ ಪ್ರಧಾನಿ, ಇದು ಭಾರತದ ಸಂಘಟನಾ ಕೌಶಲ್ಯ ಮತ್ತು ನಾವೀನ್ಯತೆಯನ್ನು ಎತ್ತಿ ತೋರಿಸಿದೆ ಎಂದರು.

ತಮ್ಮ ಸರ್ಕಾರವು ಇಂದು ಅನೇಕ ಬಳಕೆಯಲ್ಲಿಲ್ಲದ ಬ್ರಿಟಿಷರ ಕಾನೂನುಗಳನ್ನು ರದ್ದುಗೊಳಿಸಿದೆ. 10 ಅಥವಾ ಅದಕ್ಕಿಂತ ಜನರು ಸೇರಿ ನೃತ್ಯ ಮಾಡುವುದನ್ನು ಅಪರಾಧೀಕರಿಸುವ ಬ್ರಿಟಿಷರು ಮಾಡಿದ ಕಾಯ್ದೆಯು ಇತ್ತೀಚಿನವರೆಗೂ ಜಾರಿಯಲ್ಲಿದ್ದು, ತಮ್ಮ ಸರ್ಕಾರ ಬಂದ ಮೇಲೆ ರದ್ದುಗೊಳಿಸಲಾಯಿತು ಎಂದರು.

'ಲುಟಿಯೆನ್ಸ್ ಜಮಾತ್' ಮತ್ತು 'ಖಾನ್ ಮಾರ್ಕೆಟ್ ಗ್ಯಾಂಗ್' ವಿರುದ್ಧ ವಾಗ್ದಾಳಿ ನಡೆಸಿದ ಮೋದಿಯವರು, ಮದುವೆಯಲ್ಲಿ 10 ಜನರು ಒಟ್ಟಿಗೆ ನೃತ್ಯ ಮಾಡಿದರೆ ಪೊಲೀಸರು ವರ ಮತ್ತು ಇತರರನ್ನು ಬಂಧಿಸಬಹುದು ಎಂಬ ಕಾನೂನು ಸೇರಿದಂತೆ ಕೆಲವು ಬ್ರಿಟಿಷ್ ಯುಗದ ಕಾನೂನುಗಳ ಬಗ್ಗೆ ವಿರೋಧ ಪಕ್ಷದವರ ಮೌನವನ್ನು ಪ್ರಶ್ನಿಸಿದರು.

ಇಷ್ಟು ವರ್ಷಗಳಿಂದ 'ಲುಟಿಯನ್ಸ್' ಜಮಾತ್ ಮತ್ತು 'ಖಾನ್ ಮಾರ್ಕೆಟ್ ಗ್ಯಾಂಗ್' ಮೌನವಾಗಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಆಗಾಗ ನ್ಯಾಯಾಲಯಗಳಿಗೆ ಭೇಟಿ ನೀಡುವವರು, ಅಂದು ಅವರ ಸ್ವಾತಂತ್ರ್ಯದ ಬಗ್ಗೆ ಏಕೆ ಚಿಂತಿಸಲಿಲ್ಲ ಎಂದು ನನಗೆ ಅಚ್ಚರಿಯಾಗುತ್ತಿದೆ ಎಂದರು.

ಬ್ರಿಟಿಷರು 150 ವರ್ಷಗಳ ಹಿಂದೆ ಈ ಕಾನೂನನ್ನು ತಂದಿದ್ದರು. ಸ್ವಾತಂತ್ರ್ಯದ ನಂತರ ಅದು 75 ವರ್ಷಗಳ ಕಾಲ ಇತ್ತು. ಮದುವೆಯಲ್ಲಿ ವರನ ಜೊತೆ 10 ಜನ ಸೇರಿ ನೃತ್ಯ ಮಾಡಿದರೆ ಬಂಧನಕ್ಕೆ ಕಾರಣವಾಗಬಹುದಾಗಿದ್ದ ಕಾನೂನನ್ನು ನಮ್ಮ ಸರ್ಕಾರ ರದ್ದುಗೊಳಿಸಿತು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT