ಚಂಡೀಗಢ: ವಯಸ್ಸಾದ ವೃದ್ದ ಮಹಿಳೆಯೊಬ್ಬರನ್ನು ಆಕೆಯ ಮಗಳೇ ಹಿಗ್ಗಾ ಮುಗ್ಗ ಥಳಿಸುತ್ತಿರುವ ದಾರುಣ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಹರ್ಯಾಣದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಮಹಿಳೆಯೊಬ್ಬರು ತನ್ನ ವೃದ್ಧತಾಯಿಗೆ ಮನಸೋ ಇಚ್ಛೆ ಥಳಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಕ್ಲಿಪ್‌ನಲ್ಲಿ ಮಗಳು ಅಸಹಾಯಕ ವೃದ್ಧ ನಾಗರಿಕನಿಗೆ ಕಪಾಳಮೋಕ್ಷ ಮಾಡುವುದು, ಹೊಡೆಯುವುದು ಮತ್ತು ಕಚ್ಚುವುದನ್ನು ಸೆರೆಹಿಡಿಯಲಾಗಿದೆ.
ಮಹಿಳೆಯೊಬ್ಬರು ತನ್ನ ವೃದ್ಧ ತಾಯಿಯನ್ನು ಹೊಡೆಯುವ ಗೊಂದಲದ ವೈರಲ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಭೀಕರ ವೀಡಿಯೊದಲ್ಲಿ, ವೃದ್ಧ ಮಹಿಳೆ ಹಾಸಿಗೆಯ ಮೇಲೆ ಕುಳಿತಿದ್ದು, ಆಕೆಯ ಮಗಳು ನಿರ್ದಯವಾಗಿ ಕಚ್ಚುತ್ತಾಳೆ. ಮಹಿಳೆ ಒಂದು ಹಂತದಲ್ಲಿ ತನ್ನ ತಾಯಿಯನ್ನು ಪದೇ ಪದೇ ಹೊಡೆಯುವುದನ್ನು ಮತ್ತು ಅವಳ ಕೂದಲನ್ನು ಎಳೆಯುವುದನ್ನು ಕಾಣಬಹುದು.
ದಯವಿಟ್ಟು ಬಿಟ್ಟು ಬಿಡು ಎಂದರೂ ಬಿಡದ ದೂರ್ತೆ
ವಿಡಿಯೋದಲ್ಲಿ ವೃದ್ಧೆ ತನಗೆ ಹೊಡೆಯಬೇಡ. ನಾನೇನು ತಪ್ಪು ಮಾಡಿಲ್ಲ. ದಯಮಾಡಿ ನನ್ನ ಬಿಟ್ಟುಬಿಡು ಎಂದು ಗೋಗರೆದರೂ ಪುತ್ರಿ ಮಾತ್ರ ಆಕೆಯ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಲೇ ಇರುವುದು ದಾಖಲಾಗಿದೆ.
ಪುತ್ರಿ ವಿರುದ್ಧ ಕ್ರಮಕ್ಕೆ ಆಗ್ರಹ
ಇನ್ನು ಘಟನೆಯ ಸ್ಥಳ ಮತ್ತು ದಿನಾಂಕ ತಿಳಿದಿಲ್ಲ. ಆದರೆ ವೈರಲ್ ಆಗಿರುವ ಈ ಕ್ಲಿಪ್ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಹರಿಯಾಣ ಮುಖ್ಯಮಂತ್ರಿ ನಯಾಬ್ ಸೈನಿ ಮತ್ತು ಹರಿಯಾಣ ಪೊಲೀಸರಿಗೆ ಈ ವಿಡಿಯೋ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ದೇಶದಲ್ಲಿ ದಿನೇ ದಿನೇ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಯಸ್ಸಾದ ಪೋಷಕರನ್ನು ಬೀದಿಗಟ್ಟುವ ಮತ್ತು ಮನೆಯಲ್ಲಿ ಅವರಿಗೆ ಹಲ್ಲೆ ಮಾಡುವ ಪ್ರಕರಣಗಳು ವರದಿಯಾಗುತ್ತಲೇ ಇದೆ. ತಾಯಂದಿರು ತಮ್ಮ ರಕ್ಷಣೆಗಾಗಿ ಉದ್ದೇಶಿಸಲಾದ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವ ಯುವತಿಯರಿಂದ ತಮ್ಮ ಮನೆಗಳಲ್ಲಿ ಚಿತ್ರಹಿಂಸೆಗೊಳಗಾಗುತ್ತಿದ್ದಾರೆ ಎಂದು ಮತ್ತೋರ್ವ ನೆಟ್ಟಿಗ ಕಮೆಂಟ್ ಮಾಡಿದ್ದಾರೆ. ಅಂತೆಯೇ ಅನೇಕರು ಕಠಿಣ ಕಾನೂನುಗಳು ಮತ್ತು ಹಿರಿಯ ನಾಗರಿಕರಿಗೆ ಹೆಚ್ಚಿನ ರಕ್ಷಣೆಯನ್ನು ಕೋರಿದ್ದಾರೆ.