ಡೆಹ್ರಾಡೂನ್: ಭಾರೀ ಹಿಮಪಾತ ಸಂಭವಿಸಿರುವ ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾದ ಗಡಿ ರಸ್ತೆ ಸಂಸ್ಥೆ (BRO) ಶಿಬಿರ ಬಳಿ ನಾಪತ್ತೆಯಾಗಿರುವ ನಾಲ್ವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಉತ್ತಮ, ಸ್ಪಷ್ಟ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲಾಗಿದ್ದು, ದೆಹಲಿಯಿಂದ ನೆಲಕ್ಕೆ ನುಗ್ಗುವ ರಾಡಾರ್ (GPR) ವ್ಯವಸ್ಥೆಯು ಶೀಘ್ರದಲ್ಲಿಯೇ ಬರುವ ನಿರೀಕ್ಷೆಯಿದೆ.
ಭಾನುವಾರ ಸ್ನಿಫರ್ ಡಾಗ್‌ಗಳು ಮತ್ತು ಹೆಲಿಕಾಪ್ಟರ್‌ಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ಪುನರ್ ಆರಂಭವಾಯಿತು. ಜಿಪಿಆರ್ ವ್ಯವಸ್ಥೆಯನ್ನು ಹಿಮಪಾತ ಸಂಭವಿಸಿರುವ ಸ್ಥಳಕ್ಕೆ ಕೊಂಡೊಯ್ಯಲು ಡೆಹ್ರಾಡೂನ್ ನಲ್ಲಿ Mi-17 ಹೆಲಿಕಾಪ್ಟರ್ ಕಾಯುತ್ತಿದೆ ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂದೀಪ್ ತಿವಾರಿ ತಿಳಿಸಿದ್ದಾರೆ.
ಶುಕ್ರವಾರ ಮಾನಾ ಮತ್ತು ಬದರಿನಾಥ್ ನಡುವಿನ ಗಡಿ ರಸ್ತೆ ಸಂಸ್ಥೆ(ಬಿಆರ್‌ಒ) ಶಿಬಿರ ಬಳಿ ಉಂಟಾಗಿರುವ ಹಿಮಪಾತದಲ್ಲಿ ಎಂಟು ಕಂಟೈನರ್‌ಗಳು ಮತ್ತು ಶೆಡ್‌ನಲ್ಲಿ 55 ಕಾರ್ಮಿಕರು ಸಿಲುಕಿದ್ದರು. ಈ ಪೈಕಿ ಐವತ್ತು ಕಾರ್ಮಿಕರನ್ನು ಹಿಮದಿಂದ ಹೊರತೆಗೆಯಲಾಗಿದ್ದು, ಅವರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನೂ ಪತ್ತೆಯಾಗದ ಕಾರ್ಮಿಕರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಜೋಶಿಮಠ ಸೇನಾ ಆಸ್ಪತ್ರೆ ಬಳಿ ಬ್ರಿಗೇಡ್ ಜಿಎಸ್ ಒ ಲೆಪ್ಟಿನೆಂಟ್ ಕರ್ನಲ್ ದೇವೇಂದ್ರ ತಿಳಿಸಿದರು.
ಇನ್ನೂ ಪತ್ತೆಯಾಗದ ಕಾರ್ಮಿಕರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.