ಹೆಸರಾಂತ ಕಿಡ್ನಿ ಕಸಿ ಡಾಕ್ಟರ್ ಜಾರ್ಜ್ ಪಿ ಅಬ್ರಹಾಂ  
ದೇಶ

ಕೇರಳ: ಫಾರ್ಮ್‌ ಹೌಸ್‌ನಲ್ಲಿ ಹೆಸರಾಂತ ಕಿಡ್ನಿ ಕಸಿ ಡಾಕ್ಟರ್ ಶವವಾಗಿ ಪತ್ತೆ!

ನೇಣು ಬಿಗಿದುಕೊಂಡಿದ್ದ ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದ್ದು, ಅದೇ ಪ್ರಾವೀಣ್ಯತೆಯೊಂದಿಗೆ ವೈದ್ಯಕೀಯ ವೃತ್ತಿ ಮುಂದುವರಿಸಲು ಹೆಣಗಾಡುತ್ತಿರುವುದಾಗಿ ಸೂಸೈಡ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.

ಎರ್ನಾಕುಲಂ: ಕೇರಳದ ಪ್ರಸಿದ್ಧ ಮೂತ್ರಪಿಂಡಶಾಸ್ತ್ರಜ್ಞ ಮತ್ತು ಹಿರಿಯ ಶಸ್ತ್ರಚಿಕಿತ್ಸಕ ಡಾ. ಜಾರ್ಜ್ ಪಿ ಅಬ್ರಹಾಂ ಅವರು ಎರ್ನಾಕುಲಂ ಜಿಲ್ಲೆಯ ಅವರ ಫಾರ್ಮ್‌ಹೌಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಕೊಚ್ಚಿಯ ಪ್ರಮುಖ ಖಾಸಗಿ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಹಿರಿಯ ಶಸ್ತ್ರಚಿಕಿತ್ಸಕರಾಗಿದ್ದ ಡಾ. ಅಬ್ರಹಾಂ ಭಾನುವಾರ ಸಂಜೆ ತನ್ನ ಸಹೋದರನೊಂದಿಗೆ ನೆಡುಂಬಸ್ಸೆರಿ ಸಮೀಪದ ತುರುತಿಸ್ಸೆರಿಯಲ್ಲಿರುವ ಫಾರ್ಮ್‌ಹೌಸ್‌ಗೆ ಆಗಮಿಸಿದ್ದರು. ತದನಂತರ ತನ್ನ ಸಹೋದರನನ್ನು ಮನೆಗೆ ಬಿಟ್ಟು ಬಂದು, ತಡರಾತ್ರಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ನೇಣು ಬಿಗಿದುಕೊಂಡಿದ್ದ ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದ್ದು, ಅದೇ ಪ್ರಾವೀಣ್ಯತೆಯೊಂದಿಗೆ ವೈದ್ಯಕೀಯ ವೃತ್ತಿ ಮುಂದುವರಿಸಲು ಹೆಣಗಾಡುತ್ತಿರುವುದಾಗಿ ಸೂಸೈಡ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.

ಆರು ತಿಂಗಳ ಹಿಂದೆ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರ ಕೈ ನಡುಕ ಬರುತಿತ್ತು ಎಂದು ವರದಿಗಳು ಹೇಳಿವೆ.

ಡಾ. ಅಬ್ರಹಾಂ ಕಳೆದ 25 ವರ್ಷಗಳಲ್ಲಿ 2,500 ಕ್ಕೂ ಹೆಚ್ಚು ಕಿಡ್ನಿ ಕಸಿ ಮಾಡಿದ್ದರು. ಆಸ್ಪತ್ರೆಯ ದಾಖಲೆಗಳ ಪ್ರಕಾರ ಜೀವಂತ ದಾನಿಯೊಬ್ಬರ ಲ್ಯಾಪರೊಸ್ಕೋಪಿಕ್ ಮೂತ್ರಪಿಂಡ ಕಸಿ ನಡೆಸಿದ ವಿಶ್ವದ ಮೂರನೇ ಶಸ್ತ್ರಚಿಕಿತ್ಸಕರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ