ಸಾಂದರ್ಭಿಕ ಚಿತ್ರ 
ದೇಶ

ಗುಜರಾತ್: ಭೀಬತ್ಸ ಕೃತ್ಯ, 5 ವರ್ಷದ ಬಾಲಕಿಯ ಕುತ್ತಿಗೆ ಸೀಳಿ, ದೇವಾಲಯಕ್ಕೆ ರಕ್ತ ತರ್ಪಣ!

ಬಾಲಕಿಯ ಕುತ್ತಿಗೆಯಿಂದ ಕೋಡಿಯಂತೆ ಹರಿಯುತ್ತಿದ್ದ ರಕ್ತವನ್ನು ಸಂಗ್ರಹಿಸಿದ್ದು, ತನ್ನ ಮನೆ ಸಮೀಪದ ಚಿಕ್ಕ ದೇವಾಲಯದ ಮೆಟ್ಟಿಲುಗಳಿಗೆ ತರ್ಪಣ ಮಾಡಿದ್ದಾನೆ

ಗುಜರಾತ್: ವ್ಯಕ್ತಿಯೊಬ್ಬ ಐದು ವರ್ಷದ ಬಾಲಕಿಯ ಕುತ್ತಿಗೆ ಸೀಳಿಗೆ ದೇವಾಲಯದ ಮೆಟ್ಟಿಲುಗಳಿಗೆ ರಕ್ತ ತರ್ಪಣ ಮಾಡಿರುವ ಭೀಬತ್ಸ ಘಟನೆ ಗುಜರಾತಿನ ಛೋಟೌದೇಪುರ ಜಿಲ್ಲೆಯಲ್ಲಿ ನಡೆದಿದೆ. ಇದು ನರಬಲಿ ಪ್ರಕರಣವಾಗಿರಬಹುದು ಎಂದು ಪೊಲೀಸರು ಸೋಮವಾರ ಶಂಕಿಸಿದ್ದಾರೆ.

ಬುಡಕಟ್ಟು ಸಮುದಾಯ ಪ್ರಾಬಲ್ಯವಿರುವ ಜಿಲ್ಲೆಯ ಪಣೆಜ್ ಗ್ರಾಮದ ಮನೆಯಿಂದ ತಾಯಿಯ ಸಮ್ಮುಖದಲ್ಲಿಯೇ ಬಾಲಕಿಯನ್ನು ಇಂದು ಬೆಳಗ್ಗೆ ಆರೋಪಿ ಲಾಲಾ ತಾಡ್ವಿ ಅಪಹರಿಸಿದ್ದಾನೆ. ನಂತರ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಕೊಡಲಿಯಿಂದ ಆಕೆಯ ಕುತ್ತಿಗೆಗೆ ಸೀಳಿ ಹತ್ಯೆ ಮಾಡಿದ್ದಾನೆ ಎಂದು ASP ಗೌರವ್ ಅಗರ್ ವಾಲ್ ತಿಳಿಸಿದ್ದಾರೆ.

ನಂತರ ದುಷ್ಕರ್ಮಿ, ಬಾಲಕಿಯ ಕುತ್ತಿಗೆಯಿಂದ ಕೋಡಿಯಂತೆ ಹರಿಯುತ್ತಿದ್ದ ರಕ್ತವನ್ನು ಸಂಗ್ರಹಿಸಿದ್ದು, ತನ್ನ ಮನೆ ಸಮೀಪದ ಚಿಕ್ಕ ದೇವಾಲಯದ ಮೆಟ್ಟಿಲುಗಳಿಗೆ ತರ್ಪಣ ಮಾಡಿದ್ದಾನೆ. ಬಾಲಕಿಯ ತಾಯಿ ಮತ್ತು ಗ್ರಾಮದ ಇತರರು ಈ ಭೀಬತ್ಸ ಕೃತ್ಯವನ್ನು ನೋಡಿ ಶಾಕ್ ಆಗಿದ್ದಾರೆ. ಆದರೆ, ಆರೋಪಿ ಬಳಿ ಕೊಡಲಿ ಇದುದ್ದರಿಂದ ಏನೂ ಮಾಡದೇ ಮೂಕ ಪ್ರೇಕ್ಷಕರಾಗಿದ್ದಾರೆ.

ಕೊಲೆಯ ಹಿಂದಿನ ನಿಖರವಾದ ಉದ್ದೇಶವು ಇನ್ನೂ ಸ್ಪಷ್ಟವಾಗಿಲ್ಲ. ಆರೋಪಿಯು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವಂತೆ ತೋರುತ್ತಿದೆ ಎಂದು ಅಗರ್ ವಾಲ್ ಹೇಳಿದರು.

ಬಾಲಕಿಯ ಕುಟುಂಬದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಕೊಲೆ ಮತ್ತು ಅಪಹರಣದ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಗರವಾಲ್ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT