ಎಕ್ಸ್ ಲೋಗೋ 
ದೇಶ

ಜಾಗತಿಕವಾಗಿ X ಸೇವೆಯಲ್ಲಿ ವ್ಯತ್ಯಯ: ಸಹ್ರಸಾರು ಬಳಕೆದಾರರ ಪರದಾಟ!

ಅಮೆರಿಕದಲ್ಲಿ 20,000 ಮತ್ತು ಯುಕೆಯಲ್ಲಿ 10, 000 ವರದಿಗಳೊಂದಿಗೆ ಇದರ ಪ್ರಭಾವ ಜಾಗತಿಕವಾಗಿಯೂ ಹೆಚ್ಚಾಗಿತ್ತು.

ನವದೆಹಲಿ: ಬಿಲಿಯನೇರ್ ಎಲೋನ್ ಮಸ್ಕ್-ಮಾಲೀಕತ್ವದ X ಸೇವೆಯಲ್ಲಿ ಸೋಮವಾರ ವ್ಯತ್ಯಯ ಕಂಡುಬಂದಿತು. ಜಾಗತಿಕವಾಗಿ ಸಹಸ್ರಾರು ಬಳಕೆದಾರರು ಈ ವ್ಯತ್ಯಯದಿಂದ ಪರದಾಡಿದ್ದಾರೆ.

Downdetector ಪ್ರಕಾರ, ಮಧ್ಯಾಹ್ನ 3:30 ರ ಸುಮಾರಿಗೆ ಭಾರತೀಯ ಬಳಕೆದಾರರಿಂದ ವ್ಯತ್ಯಯ ಬಗ್ಗೆ ಸುಮಾರು 2,200 ವರದಿಗಳು ಬಂದಿತ್ತು. ರಾತ್ರಿ 7-30ರ ಸುಮಾರಿಗೆ ಇಂತಹ1,500ವರದಿಗಳು ಬಂದಿದ್ದವು.

ಸ್ವಲ್ಪ ಸಮಯದ ನಂತರ ಸೇವೆಗಳು ಸಹಜ ಸ್ಥಿತಿಗೆ ಮರಳುತ್ತಿರುವಂತೆ ತೋರಿತ್ತು. ಆದರೆ, ಮತ್ತೆ ಸೇವೆಯಲ್ಲಿ ವ್ಯತ್ಯಯವಾಯಿತು. ಅಮೆರಿಕದಲ್ಲಿ 20,000 ಮತ್ತು ಯುಕೆಯಲ್ಲಿ 10, 000 ವರದಿಗಳೊಂದಿಗೆ ಇದರ ಪ್ರಭಾವ ಜಾಗತಿಕವಾಗಿಯೂ ಹೆಚ್ಚಾಗಿತ್ತು.

ಶೇ.53 ರಷ್ಟು ಸಮಸ್ಯೆಗಳು ವೆಬ್‌ಸೈಟ್‌ಗೆ ಸಂಬಂಧಿಸಿವೆ. ಶೇ. 41 ರಷ್ಟು APP ಗೆ ಮತ್ತು ಶೇ. 6 ರಷ್ಟು ಸರ್ವರ್ ಸಂಪರ್ಕ ಸಮಸ್ಯೆಗಳಿಗೆ ಸಂಬಂಧಿಸಿದೆ ಎಂದು Downdetector ತಿಳಿಸಿದೆ.

ಸೇವೆಯಲ್ಲಿ ವ್ಯತ್ಯಯವಾದ ಸಂದರ್ಭದಲ್ಲಿ ಬಳಕೆದಾರರಿಗೆ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ ಮತ್ತು 'ಏನೋ ತಪ್ಪಾಗಿದೆ, ಮರುಲೋಡ್ ಮಾಡಲು ಪ್ರಯತ್ನಿಸಿ' ಎಂಬ ಸಂದೇಶ ಕಾಣಿಸುತಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!