ಮಣಿಪುರದ ಇಂಫಾಲ್‌ನಲ್ಲಿ ಸೇನಾ ಸಿಬ್ಬಂದಿ ಕಾವಲು ಕಾಯುತ್ತಿರುವುದು  
ದೇಶ

ಮಣಿಪುರ ಹಿಂಸಾಚಾರ ತಡೆಗೆ ಕೇಂದ್ರ ಸರ್ಕಾರದಿಂದ ಶಾಂತಿಯ ಮಾರ್ಗಸೂಚಿ: FOCS ವಕ್ತಾರರು

ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಮಾರ್ಗಸೂಚಿಯ ಮೊದಲ ಹಂತವನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಎ ಕೆ ಮಿಶ್ರಾ ತಮಗೆ ತಿಳಿಸಿದ್ದಾರೆ ಎಂದು ನಾಗರಿಕ ಸಮಾಜ ಒಕ್ಕೂಟದ ವಕ್ತಾರ ನ್ಗಾಂಗ್‌ಬಮ್ ಚಮ್ಚನ್ ಸಿಂಗ್ ಇಂದು ಸುದ್ದಿಗಾರರಿಗೆ ತಿಳಿಸಿದರು.

ಇಂಫಾಲ್: ಜನಾಂಗೀಯ ಕಲಹ ಪೀಡಿತ ಮಣಿಪುರ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಕೇಂದ್ರ ಸರ್ಕಾರವು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ ಎಂದು ಈಶಾನ್ಯ ವಲಯ ಗೃಹ ಸಚಿವಾಲಯದ ಸಲಹೆಗಾರ ಎ.ಕೆ. ಮಿಶ್ರಾ ದೃಢಪಡಿಸಿದ್ದಾರೆ ಎಂದು ಮೈತೀಸ್‌ ನಾಗರಿಕ ಸಮಾಜ ಸಂಘಟನೆ ಗುರುವಾರ ಹೇಳಿದೆ.

ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಮಾರ್ಗಸೂಚಿಯ ಮೊದಲ ಹಂತವನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಎ ಕೆ ಮಿಶ್ರಾ ತಮಗೆ ತಿಳಿಸಿದ್ದಾರೆ ಎಂದು ನಾಗರಿಕ ಸಮಾಜ ಒಕ್ಕೂಟದ ವಕ್ತಾರ ನ್ಗಾಂಗ್‌ಬಮ್ ಚಮ್ಚನ್ ಸಿಂಗ್ ಇಂದು ಸುದ್ದಿಗಾರರಿಗೆ ತಿಳಿಸಿದರು.

ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಕೇಂದ್ರವು ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದು, ಅದನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ನಿನ್ನೆ ಭೇಟಿ ಮಾಡಿದ ನಾಗರಿಕ ಸಮಾಜದ ನಿಯೋಗಕ್ಕೆ ಭರವಸೆ ನೀಡಲಾಗಿದೆ ಎಂದು ಎ ಕೆ ಮಿಶ್ರಾ ತಿಳಿಸಿರುವುದಾಗಿ ನ್ಗಾಂಗ್‌ಬಮ್ ಚಮ್ಚನ್ ಸಿಂಗ್ ತಿಳಿಸಿದ್ದಾರೆ.

ಕೇಂದ್ರದ ಮಾರ್ಗಸೂಚಿಯಲ್ಲಿ ಶಸ್ತ್ರಾಸ್ತ್ರಗಳ ಶರಣಾಗತಿ, ರಸ್ತೆಗಳನ್ನು ಪುನಃ ತೆರೆಯುವುದು ಮತ್ತು ಸಶಸ್ತ್ರ ಗುಂಪುಗಳ ಚಟುವಟಿಕೆಗಳನ್ನು ತಡೆಯುವುದು ಸೇರಿವೆ ಎಂದು ಮಿಶ್ರಾ ನಮಗೆ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ, ಫೆಬ್ರವರಿ 20 ರಂದು, ರಾಜ್ಯಪಾಲರು ಎಲ್ಲಾ ಶಸ್ತ್ರಾಸ್ತ್ರಗಳ ಶರಣಾಗತಿಗೆ ಕರೆ ನೀಡಿದ್ದರು. ರಾಜ್ಯದ ಎಲ್ಲಾ ರಸ್ತೆಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಜನರ ಚಲನೆಗೆ ಅನುವು ಮಾಡಿಕೊಡಬೇಕು. ಗೃಹ ಸಚಿವಾಲಯ ಪ್ರಕಾರ ಇವು ಮಾರ್ಗಸೂಚಿಯ ಆರಂಭಿಕ ಹಂತದ ಭಾಗವಾಗಿದೆ.

ಕೇಂದ್ರ ಮತ್ತು ಕುಕಿ ಸಶಸ್ತ್ರ ಗುಂಪುಗಳ ನಡುವಿನ ಕಾರ್ಯಾಚರಣೆ (SOO) ಸ್ಥಗಿತ ಒಪ್ಪಂದ ಮರು ಮಾರ್ಪಡಿಸಲಾಗುತ್ತದೆ ಮತ್ತು ಸರಿಯಾದ ಸಮಯದಲ್ಲಿ ಪರಿಷ್ಕರಿಸಲಾಗುತ್ತದೆ. ಯಾವುದೇ ಅಡೆತಡೆಯಿಲ್ಲದೆ ರಾಜ್ಯದ ಎಲ್ಲಾ ಜನರ ಮುಕ್ತ ಸಂಚಾರ ಸೇರಿದಂತೆ ಐದು ಅಂಶಗಳನ್ನು ನಾವು ಅವರಿಗೆ ಪ್ರಸ್ತುತಪಡಿಸಿದ್ದೇವೆ ಎಂದು FOCS ವಕ್ತಾರರು ಹೇಳಿದರು.

ಮೇ 2023 ರಿಂದ ಮೈತೀಸ್ ಮತ್ತು ಕುಕಿ-ಜೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 250 ಕ್ಕೂ ಹೆಚ್ಚು ಜನರು ಮೃತಪಟ್ಟು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

2027 ರವರೆಗೆ ಅಧಿಕಾರಾವಧಿಯನ್ನು ಹೊಂದಿರುವ ರಾಜ್ಯ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ ಕೇಂದ್ರ ಸರ್ಕಾರವು ಫೆಬ್ರವರಿ 13 ರಂದು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT