ಅಣ್ಣಾಮಲೈ online desk
ದೇಶ

ಚಿನ್ನ ಕಳ್ಳಸಾಗಣೆ ಪ್ರಕರಣ: ರನ್ಯಾ ರಾವ್ ತಂದೆ ಬಗ್ಗೆ ಹಗುರವಾಗಿ ಮಾತಾಡಬೇಡಿ: ಬಿಜೆಪಿ ನಾಯಕ ಅಣ್ಣಾಮಲೈ

ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ತಮ್ಮ ಮಲ ತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಬೆಂಗಳೂರು: ರಾಜ್ಯದಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣ ಸದ್ದು ಮಾಡುತ್ತಿದ್ದು, ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ತಮ್ಮ ಮಲ ತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಈ ಮಧ್ಯೆ ಮಲ ಮಗಳಿಗೆ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಸೌಲಭ್ಯ ಕಲ್ಪಿಸಿದ ಆರೋಪ ಬೆನ್ನಲ್ಲೇ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರಿಗೆ ನೋಟಿಸ್ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ಬೆಳವಣಿಗೆಗಳ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅಣ್ಣಾಮಲೈ, ಪ್ರಕರಣ ತನಿಖೆಯನ್ನು ಸಿಬಿಐ ತನಿಖೆಯನ್ನು ಮಾಡುತ್ತಿರುವುದರಿಂದ ಏನೂ ಮಾತಾಡಲಾಗದು ಎಂದು ಅಣ್ಣಾಮಲೈ ಹೇಳಿದ್ದಾರೆ.

ಪ್ರಕರಣದ ಸಂಬಂಧ ಒಂದಷ್ಟು ಪ್ರಮುಖ ವಿಷಯಗಳತ್ತ ಗಮನ ಹರಿಸಬೇಕಾಗುತ್ತದೆ ಎಂದು ಹೇಳಿರುವ ಅಣ್ಣಾಮಲೈ, ರಾಜ್ಯ ಸರ್ಕಾರ ಸಿಐಡಿಗೆ ಪೊಲೀಸ್ ಆ್ಯಂಗಲ್ ತನಿಖೆ ಮಾಡಲು ಹೇಳಿ ಯಾಕೆ ತನಿಖೆಯನ್ನು ನಿಲ್ಲಿಸಲು ಹೇಳಿತೋ ಗೊತ್ತಿಲ್ಲ, ರನ್ಯಾ ರಾವ್ ಖುದ್ದು ಸೆಲಿಬ್ರಿಟಿಯಾಗಿದ್ದಾರೆ ಮತ್ತು ಅವರ ತಂದೆಯೂ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದಾರೆ, ಆದ್ದರಿಂದ ತನಿಖೆ ಮುಗಿಯುವವರೆಗೆ ರನ್ಯಾ ಮತ್ತು ಅವರ ತಂದೆ ಬಗ್ಗೆ ಹಗುರವಾಗಿ ಮಾತಾಡಬಾರದು ಎಂದಷ್ಟೇ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Hindenburg: Gautam Adani ಗೆ ಬಿಗ್ ರಿಲೀಫ್, SEBI ಕ್ಲೀನ್ ಚಿಟ್!

ವಿಜಯಪುರ ವಿಮಾನ ನಿಲ್ದಾಣಕ್ಕೆ 618 ಕೋಟಿ ರೂ. ಪರಿಷ್ಕೃತ ಅಂದಾಜುಗೆ ಸಚಿವ ಸಂಪುಟ ಅನುಮೋದನೆ

ಚಪ್ಪರ್, ಭಿಕಾರಿ, ಮರ್ಯಾದೇ ಇಲ್ವ: Bigg Boss ರಂಜಿತ್ ಮನೆಯಲ್ಲಿ ಜಗಳ, Video Viral

ಬೆಂಗಳೂರು - ಬ್ಯಾಂಕಾಕ್ ನಡುವೆ ನೇರ ವಿಮಾನ ಸೇವೆ ಆರಂಭಿಸಿದ ಏರ್ ಇಂಡಿಯಾ

BlackBuck: 'ಹೋಗೋರನ್ನ ತಡೆಯಲ್ಲ.. ಸರ್ಕಾರವನ್ನ ಬ್ಲ್ಯಾಕ್‌ಮೇಲ್‌ ಮಾಡೋಕೆ ಬರಬೇಡಿ'; DCM DK Shivakumar

SCROLL FOR NEXT