ಸಾಂದರ್ಭಿಕ ಚಿತ್ರ 
ದೇಶ

ವಿಶ್ವ ಹ್ಯಾಪಿನೆಸ್ ವರದಿ: ಭಾರತಕ್ಕಿಂತ ಪಾಕಿಸ್ತಾನವೇ ಹೆಚ್ಚು ಸುಖಿ ದೇಶ; ಫಿನ್ಲ್ಯಾಂಡ್ ಗೆ ಅಗ್ರಸ್ಥಾನ!

ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದರೂ, ಒಟ್ಟಾರೆ ಸಂತೋಷದ ಸ್ಕೋರ್ ಅತ್ಯಂತ ಕಡಿಮೆಯಾಗಿದೆ.

ಯುಎನ್ ಸಸ್ಟೈನಬಲ್ ಡೆವಲಪ್‌ಮೆಂಟ್ ಸೊಲ್ಯೂಷನ್ಸ್ ನೆಟ್‌ವರ್ಕ್ ಗ್ಯಾಲಪ್ ಮತ್ತು ಸ್ವತಂತ್ರ ಸಂಪಾದಕೀಯ ಮಂಡಳಿಯ ಸಹಯೋಗದೊಂದಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಯೋಗಕ್ಷೇಮ ಸಂಶೋಧನಾ ಕೇಂದ್ರ ಗುರುವಾರ ವಿಶ್ವ ಸಂತೋಷ ಸೂಚ್ಯಂಕ ವರದಿ 2025 ಅನ್ನು ಬಿಡುಗಡೆ ಮಾಡಿದ್ದು, 147 ದೇಶಗಳಲ್ಲಿ ಭಾರತವು 118ನೇ ಸ್ಥಾನ ಪಡೆದಿದೆ.

ಫಿನ್ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿ ಹೊರಹೊಮ್ಮಿದೆ. ಡೆನ್ಮಾರ್ಕ್ ಮತ್ತು ಐಸ್ಲ್ಯಾಂಡ್ ನಂತರದ ಸ್ಥಾನಗಳಲ್ಲಿವೆ.

ಯೋಗಕ್ಷೇಮದ ಮೇಲೆ ಪ್ರಭಾವ ಬೀರುವ ಸಾಮಾಜಿಕ, ದೈಹಿಕ ಮತ್ತು ಭಾವನಾತ್ಮಕ ಬೆಂಬಲದ ಅಂಶಗಳ ಆಧಾರದ ಮೇಲೆ ವಿಶ್ವ ಹ್ಯಾಪಿನೆಸ್ ವರದಿಯನ್ನು ಸಿದ್ಧಪಡಿಸಲಾಗುತ್ತದೆ.

ಹ್ಯಾಪಿನೆಸ್ ವರದಿಯಲ್ಲಿ ಅಫ್ಘಾನಿಸ್ತಾನ ಅತ್ಯಂತ ಕಡಿಮೆ ಸುಖಿ ದೇಶವಾಗಿದ್ದು, 147ನೇ ಸ್ಥಾನ ಪಡೆದಿದೆ. ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್ (146) ಮತ್ತು ಲೆಬನಾನ್ (145) ಹಿಂದಿನ ಸ್ಥಾನದಲ್ಲಿವೆ. ಹಮಾಸ್ ಜೊತೆ ಯುದ್ಧ ನಡೆಸಿದ್ದರೂ ಕೂಡ ಇಸ್ರೇಲ್ ದೇಶವು ಎಂಟನೇ ಸ್ಥಾನದಲ್ಲಿದೆ. ಕೋಸ್ಟಾರಿಕಾ ಮತ್ತು ಮೆಕ್ಸಿಕೊ ಕೂಡ ಮೊದಲ ಬಾರಿಗೆ ಅಗ್ರ ಹತ್ತು ಸ್ಥಾನಗಳಲ್ಲಿದ್ದು, ಈ ದೇಶಗಳು ಕ್ರಮವಾಗಿ 6 ​​ಮತ್ತು 10ನೇ ಶ್ರೇಯಾಂಕದಲ್ಲಿವೆ.

ಭಾರತ ಈ ಬಾರಿ ಎಂಟು ಸ್ಥಾನಗಳ ಏರಿಕೆ ಕಂಡು 118ನೇ ಸ್ಥಾನದಲ್ಲಿದೆ. 2024ರ ಹ್ಯಾಪಿನೆಸ್ ವರದಿಯಲ್ಲಿ, ಭಾರತ 2023 ರಂತೆಯೇ 126ನೇ ಸ್ಥಾನದಲ್ಲಿತ್ತು. 2012 ರಲ್ಲಿ ದೇಶದ ಅತ್ಯಂತ ಕಡಿಮೆ ಶ್ರೇಯಾಂಕ ಅಂದರೆ 144ನೇ ಸ್ಥಾನದಲ್ಲಿತ್ತು. ಆದರೆ 2022ರಲ್ಲಿ ಭಾರತ 94ನೇ ಸ್ಥಾನದಲ್ಲಿತ್ತು.

ಪಾಕಿಸ್ತಾನ ಗಮನಾರ್ಹ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸುತ್ತಿದ್ದರೂ ಹ್ಯಾಪಿನೆಸ್ ಸೂಚ್ಯಂಕದಲ್ಲಿ 109ನೇ ಸ್ಥಾನದಲ್ಲಿದ್ದು, ಭಾರತಕ್ಕಿಂತ ಮುಂದಿದೆ.

ತಲಾವಾರು ಜಿಡಿಪಿ, ಸಾಮಾಜಿಕ ಬೆಂಬಲ, ಜೀವಿತಾವಧಿ, ಸ್ವಾತಂತ್ರ್ಯ, ಔದಾರ್ಯ ಮತ್ತು ಭ್ರಷ್ಟಾಚಾರ ಸೇರಿದಂತೆ ಹಲವಾರು ಅಂಶಗಳ ಆಧಾರದ ಮೇಲೆ ಹ್ಯಾಪಿನೆಸ್ ಸೂಚ್ಯಂಕ ವರದಿ ಸಿದ್ಧಪಡಿಸಲಾಗುತ್ತದೆ. ಪ್ರತಿ ದೇಶದಿಂದ ಒಂದರಿಂದ ಮೂರು ಸಾವಿರ ಜನರ ಮಾದರಿ ಗಾತ್ರವನ್ನು ಆಯ್ಕೆ ಮಾಡಲಾಗುತ್ತದೆ. ಅವರಿಗೆ ಕೇಳಲಾದ ಪ್ರಶ್ನೆಗಳ ಆಧಾರದ ಮೇಲೆ ಡೇಟಾವನ್ನು ರಚಿಸಲಾಗುತ್ತದೆ. ಈ ಪ್ರಶ್ನೆಗಳಿಗೆ 0 ರಿಂದ 10 ರವರೆಗಿನ ರೇಟಿಂಗ್​ನಲ್ಲಿ ಉತ್ತರಿಸಬೇಕು. 0 ಎಂದರೆ ಕೆಟ್ಟದು, 10 ಎಂದರೆ ಅತ್ಯುತ್ತಮ ಅನುಭವ.

ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದರೂ, ಒಟ್ಟಾರೆ ಸಂತೋಷದ ಸ್ಕೋರ್ ಅತ್ಯಂತ ಕಡಿಮೆಯಾಗಿದೆ.

ಇನ್ನು ಸಂತೋಷ ಸೂಚ್ಯಂಕ​ ವರದಿಯಲ್ಲಿ ಅಮೆರಿಕ, ಯುಕೆ ಮತ್ತು ಫ್ರಾನ್ಸ್ ಕ್ರಮವಾಗಿ 24, 23 ಮತ್ತು 33ನೇ ಸ್ಥಾನಗಳಲ್ಲಿವೆ. ಕಳೆದ ವರ್ಷ 23ನೇ ಸ್ಥಾನದಲ್ಲಿದ್ದ ಅಮೆರಿಕ ಈ ಬಾರಿ ಒಂದು ಸ್ಥಾನ ಕೆಳಗೆ ಕುಸಿದಿದೆ. 2012ರಲ್ಲಿ 11ನೇ ಸ್ಥಾನದಲ್ಲಿದ್ದ ಅಮೆರಿಕ ಈಗ 24ನೇ ಸ್ಥಾನಕ್ಕೆ ಕುಸಿದಿರುವುದು ಗಮನಾರ್ಹ. ಕಳೆದ ಎರಡು ದಶಕಗಳಲ್ಲಿ ಅಮೆರಿಕದಲ್ಲಿ ಒಂಟಿಯಾಗಿ ಊಟ ಮಾಡುವವರ ಸಂಖ್ಯೆ ಶೇ.53ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಏಷ್ಯಾ ಸಂಘರ್ಷ: ಭಾರತ ಸೇರಿ 5 ದೇಶಗಳಿಗೆ Hormuz ಮೂಲಕ ಸುರಕ್ಷಿತ ಸಂಚಾರಕ್ಕೆ Iran ಅನುಮತಿ!

Hormuz ಅಷ್ಟೇ ಅಲ್ಲ.. ಬಾಲ ಬಿಚ್ಚಿದ್ರೆ Bab al mandeb ಜಲಸಂಧಿಯನ್ನೂ ಮುಚುತ್ತೇವೆ: ಹೌತಿಗಳು ಬರ್ತಾರೆ ಎಂದು Iran ಎಚ್ಚರಿಕೆ

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

ಉಗ್ರರೊಂದಿಗೆ ನಂಟು ಆರೋಪ: ಬಳ್ಳಾರಿ ಯುವಕ ಸೇರಿ ದೇಶಾದ್ಯಂತ 12 ಮಂದಿ ಬಂಧನ

ಯುದ್ದದಲ್ಲಿ ಗೆದ್ದು ಕೂಡ ಸೋಲುತ್ತಿರುವ ಅಮೇರಿಕಾ ಮತ್ತು ಚೀನಾ! (ಹಣಕ್ಲಾಸು)

SCROLL FOR NEXT