ನ್ಯೂಯಾರ್ಕ್: ಹರಾಜು ಪ್ರಕ್ರಿಯೆ ಒಂದರಲ್ಲಿ ಮಾರಾಟವಾದ 1950 ರ ಅವಧಿಯ ಚಿತ್ರಕಲೆಯೊಂದು ಭಾರತದ ಅತ್ಯಂತ ದುಬಾರಿ ಚಿತ್ರಕಲೆ ಎಂಬ ಖ್ಯಾತಿ ಪಡೆದಿದೆ.
ಮಾರ್ಚ್ 19 ರಂದು ನ್ಯೂಯಾರ್ಕ್‌ನಲ್ಲಿ ನಡೆದ ಕ್ರಿಸ್ಟೀಸ್ ಹರಾಜಿನಲ್ಲಿ ನಡೆದ ಈ ಮಾರಾಟ, 2023 ರಲ್ಲಿ ಮುಂಬೈನಲ್ಲಿ ನಡೆದ ಹರಾಜಿನಲ್ಲಿ ಸುಮಾರು 7.4 ಮಿಲಿಯನ್ ಯುಎಸ್ ಡಾಲರ್ (ರೂ. 61.8 ಕೋಟಿ) ಗೆ ಮಾರಾಟವಾದ ಅಮೃತಾ ಶೇರ್-ಗಿಲ್ ಅವರ 1937 ರ 'ದಿ ಸ್ಟೋರಿ ಟೆಲ್ಲರ್' ಮೊತ್ತಕ್ಕಿಂತ ದುಪ್ಪಟ್ಟು ಮೊತ್ತಕ್ಕೆ ಮಾರಾಟವಾಗಿದ್ದು, ಅತ್ಯಂತ ದುಬಾರಿ ಚಿತ್ರಕಲೆಯ ದಾಖಲೆಯನ್ನು ಮುರಿದಿದೆ.
ಒಂದೇ ಕ್ಯಾನ್ವಾಸ್‌ನಲ್ಲಿ ಸುಮಾರು 14 ಅಡಿಗಳಷ್ಟು ವಿಸ್ತೀರ್ಣವನ್ನು ಹೊಂದಿರುವ 13 ವಿಶಿಷ್ಟ ಫಲಕಗಳನ್ನು ಒಳಗೊಂಡಿರುವ ಗ್ರಾಮ್ ಯಾತ್ರಾ (ಅಂದರೆ 'ಗ್ರಾಮ ತೀರ್ಥಯಾತ್ರೆ'), ಭಾರತದ ವೈವಿಧ್ಯತೆ ಮತ್ತು ಚೈತನ್ಯವನ್ನು ಪ್ರತಿನಿಧಿಸುತ್ತದೆ. ಖ್ಯಾತ ಚಿತ್ರಕಲಾವಿದ ಎಂಎಫ್ ಹುಸೇನ್ ಅವರ ಕೃತಿ ಇದಾಗಿದೆ.
"ಮಕ್ಬೂಲ್ ಫಿದಾ ಹುಸೇನ್ ಮತ್ತು ಇಡೀ ವರ್ಗದ ಕೆಲಸಕ್ಕೆ ಹೊಸ ಮಾನದಂಡ ಮೌಲ್ಯವನ್ನು ನಿಗದಿಪಡಿಸುವಲ್ಲಿ ನಾವು ಭಾಗವಾಗಿದ್ದೇವೆ ಎಂದು ನಮಗೆ ಸಂತೋಷವಾಗಿದೆ. ಇದು ಒಂದು ಹೆಗ್ಗುರುತಿನ ಕ್ಷಣವಾಗಿದೆ ಮತ್ತು ಆಧುನಿಕ ಮತ್ತು ಸಮಕಾಲೀನ ದಕ್ಷಿಣ ಏಷ್ಯಾದ ಕಲಾ ಮಾರುಕಟ್ಟೆಯ ಅಸಾಧಾರಣ ಮೇಲ್ಮುಖ ಪಥವನ್ನು ಮುಂದುವರೆಸಿದೆ" ಎಂದು ಕ್ರಿಸ್ಟೀಸ್ ಸೌತ್ ಏಷ್ಯನ್ ಮಾಡರ್ನ್ ಮತ್ತು ಸಮಕಾಲೀನ ಕಲೆಯ ಮುಖ್ಯಸ್ಥ ನಿಶಾದ್ ಅವರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಹುಸೇನ್ ಅವರ ಅತ್ಯಂತ ದುಬಾರಿ ಚಿತ್ರಕಲೆ, ಅನ್‌ಟೈಲ್ಡ್ (ಪುನರ್ಜನ್ಮ) ಕಳೆದ ವರ್ಷ ಲಂಡನ್‌ನಲ್ಲಿ USD 3.1 ಮಿಲಿಯನ್ (ಸುಮಾರು ರೂ 25.7 ಕೋಟಿ) ಗೆ ಮಾರಾಟವಾಗಿತ್ತು
ಸೆಪ್ಟೆಂಬರ್ 17, 1915 ರಂದು ಮಹಾರಾಷ್ಟ್ರದ ಪಂಢರಪುರದಲ್ಲಿ ಜನಿಸಿದ ಹುಸೇನ್, ಭಾರತದ ಅತ್ಯಂತ ಪ್ರಮುಖ ಮತ್ತು ಬೇಡಿಕೆಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ.