ಲಖನೌ: ಬಿಹಾರದ ಆರ್ ಜೆಡಿ ಮುಖ್ಯಸ್ಥ ಹಾಗೂ ಮಾಜಿ ಡಿಸಿಎಂ ತೇಜಸ್ವಿ ಯಾದವ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ನೂಕು ನುಗ್ಗಲು ಸಂಭವಿಸಿ, ಸಂಗ್ರಹಿಸಿದ್ದ ಆಹಾರವನ್ನೇ ಲೂಟಿ ಮಾಡಿರುವ ಘಟನೆ ವರದಿಯಾಗಿದೆ.
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಾಟ್ನಾದ ರಾಬ್ರಿದೇವಿ ನಿವಾಸದಲ್ಲಿ ದಾವತ್-ಎ-ಇಫ್ತಾರ್ ಕೂಟವನ್ನು ಆಯೋಜಿಸಿತ್ತು. ಈ ಆಹಾರ ಕಾರ್ಯಕ್ರಮದ ವೇಳೆ ಜನ ಸಮೂಹ ಏಕಾಏಕಿ ನುಗ್ಗಿ ಆಹಾರವನ್ನು ಲೂಠಿ ಮಾಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಆರ್ ಜೆಡಿ ಈ ಇಫ್ತಾರ್ ಕೂಟವನ್ನು ಆಯೋಜಿಸಿತ್ತು ಎನ್ನಲಾಗಿದೆ.
ಪ್ರಮುಖವಾಗಿ ಮಿಥಿಲಾ ಕ್ಷೇತ್ರದ ಮತದಾರರನ್ನು ಕೇಂದ್ರವಾಗಿಟ್ಟುಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನ ಕೈಗೆ ಸಿಕ್ಕ ವಸ್ತುಗಳು ಮತ್ತು ಆಹಾರ ಪದಾರ್ಥಗಳನ್ನು ದೋಚಿ ಪರಾರಿಯಾಗಿದ್ದಾರೆ.
ಇಫ್ತಾರ್ ಕೂಟದಲ್ಲಿ ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮತ್ತು ಇತರೆ ನಾಯಕರು ಇರುವುದು ಕಂಡುಬರುತ್ತದೆ. ಒಬ್ಬ ಯುವಕ ಪ್ಯಾಕ್ ಮಾಡಿದ ಆಹಾರವನ್ನು ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಕಾರ್ಯಕ್ರಮಕ್ಕೆ ವಿವಾದದ ಬರೆ
ಇನ್ನು ಈ ಇಫ್ತಾರ್ ಕೂಟಕ್ಕೂ ಸಂಬಂಧಿಸಿದಂತೆ ತೇಜಸ್ವಿಯವರ ಸುತ್ತ ವಿವಾದಗಳು ಸುತ್ತುವರೆದಿವೆ. ಈ ಕಾರ್ಯಕ್ರಮಕ್ಕೆ ಹಾಜರಾಗುವ ಮೊದಲು, ತೇಜಸ್ವಿ ಯಾದವ್ ಅವರು ದರ್ಭಂಗಾದ ಪ್ರಾಚೀನ ದೇವಿ ಅಹಲ್ಯ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಪೂಜೆಯ ನಂತರ, ಅವರು ಇಫ್ತಾರ್ ಕೂಟಕ್ಕೆ ಹೊರಟರು ಮತ್ತು ತಿಲಕವನ್ನು ಅಳಿಸಿ ಹಾಕಿದ್ದರು.ನೆಟ್ ಕ್ಯಾಪ್‌ನಿಂದ ಬದಲಾಯಿಸಲಾಯಿತು.
ದರ್ಭಾಂಗದ ಇಫ್ತಾರ್ ಕೂಟ ತೇಜಸ್ವಿ ಯಾದವ್ ಅವರಿಗೆ ಸಂಪೂರ್ಣವಾಗಿ ವಿವಾದಾತ್ಮಕವಾಗಿತ್ತು. ಆಹಾರ ಲೂಟಿ ಮಾಡುವ ಮೊದಲು, ತೇಜಸ್ವಿ ಯಾದವ್ ನೆಟ್ ಕ್ಯಾಪ್ ಧರಿಸಿರುವುದು ಕಂಡುಬಂದಿತು, ಆದರೆ ಅವರ ಕೈಯಲ್ಲಿ ತಿಲಕ ಕಾಣೆಯಾಗಿತ್ತು. ಪೂಜೆಯ ನಂತರ, ಅವರು ಇಫ್ತಾರ್ ಕೂಟಕ್ಕೆ ಹೊರಟರು. ಆದರೆ ಈ ವೇಳೆ ತೇಜಸ್ವಿ ಹಣೆಯಲ್ಲಿ ಈ ತಿಲಕ ಇರಲಿಲ್ಲ. ಇದು ವಿವಾದಕ್ಕೀಡಾಗಿದೆ. ಮುಸ್ಲಿಮರನ್ನು ಓಲೈಸುವ ಸಲವಾಗಿಯೇ ತೇಜಸ್ವಿ ಯಾದವ್ ಈ ಇಫ್ತಾರ್ ಕೂಟ ಆಯೋಜಿಸಿದ್ದರು ಎಂದು ಆರೋಪಿಸಲಾಗಿದೆ.