ಮುಂಬೈ: ಮಹಾರಾಷ್ಟ್ರದಲ್ಲಿ ಮರಾಠಿ ಅಲ್ಲದ ಭಾಷಿಕರ ವಿರುದ್ಧ ತನ್ನ ಕಾರ್ಯಕರ್ತರು ನಡೆಸಿರುವ ಹಿಂಸಾಚಾರದ ಘಟನೆಗಳು ಉದ್ದೇಶಪೂರ್ವಕವಾಗಿಲ್ಲ ಎಂದು ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್‌ಎಸ್) ಶನಿವಾರ ಹೇಳಿದೆ.
ಮಹಾರಾಷ್ಟ್ರದಲ್ಲಿ ವಾಸಿಸುತ್ತಿರುವ ಕರ್ನಾಟಕ ಅಥವಾ ಬಿಹಾರದಿಂದ ಬಂದಂತಹ ಜನರು ಸ್ಥಳೀಯ ಭಾಷೆಗೆ ಗೌರವ ನೀಡಿದರೆ ಅವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಎಂಎನ್‌ಎಸ್ ಉಪಾಧ್ಯಕ್ಷ ಮತ್ತು ವಕ್ತಾರ ವಾಗೀಶ್ ಸಾರಸ್ವತ್ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
"ಮರಾಠಿಯು ಮುಂಬೈ ಮತ್ತು ಇತರ ಮಹಾರಾಷ್ಟ್ರದ ಭಾಷೆಯಾಗಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡಿದೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಭಾಷೆಗೆ ಅಗೌರವ ಮತ್ತು ಅವಮಾನ ಮಾಡಿದ್ದಾರೆ. ಇಂತಹ ಅಂಶಗಳಿಗೆ ಪಾಠ ಕಲಿಸುವಾಗ ಹಿಂಸಾಚಾರ ನಡೆಯುತ್ತದೆ. ಆದರೆ ಇದು ಉದ್ದೇಶಪೂರ್ವಕವಲ್ಲ. ಬಿಹಾರದವರಾಗಲಿ ಅಥವಾ ಕರ್ನಾಟಕದವರಾಗಲಿ ಮರಾಠಿಗೆ ಗೌರವ ಕೊಡಿ, ನಮಗೆ ಯಾವುದೇ ಸಮಸ್ಯೆ ಇರಲ್ಲ ಎಂದಿದ್ದಾರೆ.
ಲೋಕಸಭೆಯಲ್ಲಿ ಮಹಾರಾಷ್ಟ್ರದಲ್ಲಿ ಎಂಎನ್‌ಎಸ್ ಕಾರ್ಯಕರ್ತರು ಹಿಂದಿ ಭಾಷಿಕರ ಮೇಲೆ ನಡೆಸುತ್ತಿರುವ ದಾಳಿಯ ವಿಷಯವನ್ನು ಪ್ರಸ್ತಾಪಿಸುವುದಾಗಿ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಸಂಸದ ರಾಜೇಶ್ ವರ್ಮಾ ಅವರ ಹೇಳಿಕೆಗೆ ಸಾರಸ್ವತ್ ಪ್ರತಿಕ್ರಿಯಿಸಿದರು. ಹಿಂದಿ ಭಾಷಿಕರನ್ನು ಗುರಿಯಾಗಿಸಿಕೊಂಡು ಎಂಎನ್‌ಎಸ್ ತನ್ನ ರಾಜಕೀಯ ಶಕ್ತಿಯನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದೆ ಎಂದು ವರ್ಮಾ ಆರೋಪಿಸಿದ್ದರು.
ಹಿಂದಿ ಭಾಷಿಕರು ಮಹಾರಾಷ್ಟ್ರದ ಆರ್ಥಿಕತೆಗೆ ಕೊಡುಗೆ ನೀಡುತ್ತಾರೆ, ಅವರು ಮಠಾಠಿ ಭಾಷೆ ಮಾತನಾಡಲು ಬಾರದ ಕಾರಣ ಅವರ ಮೇಲೆ MNS ದಾಳಿ ಮಾಡುತ್ತಿದೆ. ಹಿಂದಿ ಭಾಷಿಕರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರು ಗೌರವಕ್ಕೆ ಅರ್ಹರೇ ಹೊರತು ಅವರಿಗೆ ಹಿಂಸೆ, ಅವಮಾನ ಮಾಡಬಾರದು ಎಂದು ವರ್ಮಾ ಹೇಳಿದ್ದರು.