ಗಂಡನ ತಮ್ಮನ ಜೊತೆಗೆ ಮಹಿಳೆ ಪರಾರಿ! online desk
ದೇಶ

ಪದೇಪದೇ ಹೇಳಿದರೂ ಗಡ್ಡ ತೆಗೆಯದ ಪತಿ, ಬೇಸತ್ತು ಗಂಡನ ತಮ್ಮನ ಜೊತೆಗೆ ಮಹಿಳೆ ಪರಾರಿ!

ಪದೇ ಪದೇ ಗಡ್ಡ ತೆಗೆಯುವಂತೆ ಮನವಿ ಮಾಡಿಕೊಂಡರೂ ತನ್ನ ಮಾತು ಕೇಳದ ಗಂಡನ ವಿರುದ್ಧ ಮುನಿಸಿಕೊಂಡ ಮಹಿಳೆಯೊಬ್ಬರು ಗಂಡನ ತಮ್ಮನ ಜೊತೆಯೇ ಪರಾರಿಯಾಗಿದ್ದಾರೆ.

ಮೀರತ್: ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನ ಅತ್ಯಂತ ದುರ್ಬಲವಾಗುತ್ತಿದೆ. ಸಣ್ಣ ಪುಟ್ಟ ವಿಷಯಗಳಿಗೆ ವಿಚ್ಛೇದನ ಪಡೆಯುವುದು ಬೇರೆ ಮಾತು ಆದರೆ ಕೊಲೆ, ಮನೆ ಬಿಟ್ಟು ಪರಾರಿಯಾಗುವಂತಹ ಘಟನೆಗಳು ಹೆಚ್ಚುತ್ತಿದ್ದು ಆತಂಕ ಮೂಡಿಸುತ್ತಿದೆ. ಇಂಥಹದ್ದೇ ಘಟನೆ ಮೀರತ್ ನಲ್ಲಿ ನಡೆದಿದೆ.

ಪದೇ ಪದೇ ಗಡ್ಡ ತೆಗೆಯುವಂತೆ ಮನವಿ ಮಾಡಿಕೊಂಡರೂ ತನ್ನ ಮಾತು ಕೇಳದ ಗಂಡನ ವಿರುದ್ಧ ಮುನಿಸಿಕೊಂಡ ಮಹಿಳೆಯೊಬ್ಬರು ಗಂಡನ ತಮ್ಮನ ಜೊತೆಯೇ ಪರಾರಿಯಾಗಿದ್ದಾರೆ.

ಉತ್ತರ ಪ್ರದೇಶದ ಮೀರತ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಮೀರತ್‌ನ ಉಜ್ವಲ್ ಗಾರ್ಡನ್ ಕಾಲೋನಿಯಲ್ಲಿ ವಾಸಿಸುವ ಮುಸ್ಲಿಂ ಧರ್ಮಗುರು ಶಕೀರ್ ಎಂಬ ವ್ಯಕ್ತಿ ಜೊತೆ, ಏಳು ತಿಂಗಳ ಹಿಂದೆ ಅರ್ಷಿ ಎಂಬ ಯುವತಿಯ ವಿವಾಗವಾಗಿತ್ತು. ಮದುವೆಯಾದ ಕೂಡಲೇ ಕ್ಲೀನ್ ಶೇವ್ ಮಾಡುವಂತೆ ತನಗೆ ಪತ್ನಿಯಿಂದ ಒತ್ತಡ ಎದುರಾಗಿತ್ತು ಎಂದು ಶಕೀರ್ ಹೇಳಿದ್ದಾರೆ.

ಕುಟುಂಬದ ಒತ್ತಡದಿಂದ ತಾನು ಆತನನ್ನು ಮದುವೆಯಾಗಿದ್ದು, ಗಡ್ಡ ತೆಗೆಯಲು ಒಪ್ಪಿದರೆ ಮಾತ್ರ ಆತನೊಂದಿಗೆ ವಾಸಿಸುವುದಾಗಿ ಅರ್ಷಿ ಹೇಳಿದ್ದಾರೆ ಎನ್ನಲಾಗಿದೆ. ಇದೇ ವಿಷಯದ ಬಗ್ಗೆ ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು. ಶಕೀರ್ ತನ್ನ ಪತ್ನಿ ಗಡ್ಡ ತೆಗೆಯುವಂತೆ ಕಿರಿಕಿರಿ ಮಾಡುತ್ತಿದ್ದಾಳೆ ಎಂದು ಆಕೆಯ ಕುಟುಂಬಕ್ಕೂ ದೂರು ನೀಡಿದ್ದಾರೆ.

ಗಡ್ಡ ತೆಗೆಯುವಂತೆ ತನ್ನ ಗಂಡನಿಗೆ ಎಷ್ಟೇ ಹೇಳಿದರೂ ಆತ ಒಪ್ಪದ ಕಾರಣ ಕ್ಲೀನ್ ಶೇವ್ ಮಾಡುತ್ತಿದ್ದ ಗಂಡನ ತಮ್ಮನತ್ತ ಅರ್ಷಿ ಆಕರ್ಷಿತಳಾಗಿದ್ದು ಇಬ್ಬರೂ ಮನೆಯಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಗಂಡನ ಕಿರಿಯ ಸಹೋದರನ ಜೊತೆ ಮಹಿಳೆ ಅರ್ಷಿ ಓಡಿಹೋದ ಘಟನೆ ಶಕೀರ್ ಮತ್ತು ಅವನ ಕುಟುಂಬಕ್ಕೆ ಆಘಾತ ಉಂಟುಮಾಡಿದೆ. ಹೆಂಡತಿ ಮತ್ತು ಸಹೋದರ ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಈ ವಿಷಯದ ಬಗ್ಗೆ ಅರ್ಷಿಯ ಕುಟುಂಬಕ್ಕೆ ಕೂಡ ಮಾಹಿತಿ ನೀಡಿದ್ದಾನೆ. ಆದರೆ, ಆಕೆಯ ಕುಟುಂಬ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT