ಅಮೃತಸರ ಗಡಿ ಚಿತ್ರ 
ದೇಶ

ಅಮೃತಸರ: ಭಯೋತ್ಪಾದನಾ ಸಂಚು ವಿಫಲ; ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು ಗುಂಡು ವಶ!

ಅಮೃತಸರ ಜಿಲ್ಲೆಯ ಭರೋಪಾಲ್ ಗ್ರಾಮದ ಬಳಿ ಪಂಜಾಬ್ ಪೊಲೀಸರ ಸಮನ್ವಯದಲ್ಲಿ ಗಡಿ ಭದ್ರತಾ ಪಡೆ (BSF) ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದ್ದು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹವನ್ನು ವಶಪಡಿಸಿಕೊಂಡಿದೆ.

ಅಮೃತಸರ: ಪಹಲ್ಗಾಮ್ ಉಗ್ರರ ದಾಳಿ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ದೊಡ್ಡ ಭಯೋತ್ಪಾದನಾ ಸಂಚನ್ನು ಗಡಿ ಭದ್ರತಾ ಪಡೆ ಅಮೃತಸರ ಗಡಿಯಲ್ಲಿ ವಿಫಲಗೊಳಿಸಿದೆ.

ಹೌದು, ಅಮೃತಸರ ಜಿಲ್ಲೆಯ ಭರೋಪಾಲ್ ಗ್ರಾಮದ ಬಳಿ ಪಂಜಾಬ್ ಪೊಲೀಸರ ಸಮನ್ವಯದಲ್ಲಿ ಗಡಿ ಭದ್ರತಾ ಪಡೆ (BSF) ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದ್ದು, ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳ ಸಂಗ್ರಹವನ್ನು ವಶಪಡಿಸಿಕೊಂಡಿದೆ.

ಬಿಎಸ್‌ಎಫ್ ಇಂಟಲಿಜೆನ್ಸ್ ವಿಂಗ್ ನೀಡಿದ ನಂಬಲಾರ್ಹ, ಗುಪ್ತಚರ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಬುಧವಾರ ಸಂಜೆ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದು, ಎರಡು ಹ್ಯಾಂಡ್ ಗ್ರೆನೇಡ್‌ಗಳು, ಮೂರು ಪಿಸ್ತೂಲ್‌ಗಳು, ಆರು ಮ್ಯಾಗಜೀನ್‌ಗಳು ಮತ್ತು 50 ಸುತ್ತಿನ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

ವಶಕ್ಕೆ ಪಡೆದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಹೆಚ್ಚಿನ ತನಿಖೆಗಾಗಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಈ ಜಂಟಿ ಕಾರ್ಯಾಚರಣೆ BSF ನ ಉನ್ನತ ಮಟ್ಟದ ಸನ್ನದ್ಧತೆ ಮತ್ತು ಜಾಗರೂಕತೆಯನ್ನು ಪ್ರತಿಬಿಂಬಿಸುತ್ತದೆ. ಪಂಜಾಬ್ ಪೊಲೀಸರೊಂದಿಗೆ ತ್ವರಿತ ಮತ್ತು ಸಂಘಟಿತ ಕ್ರಮವು ಸಂಭವನೀಯ ದೊಡ್ಡ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ನಾಗರಿಕರ ರಕ್ಷಣೆಗೆ ಅದರ ಬದ್ಧತೆಯನ್ನು ತೋರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್

ದೀದಿಗೆ ಮತ್ತೊಂದು ಶಾಕ್; ಮಮತಾ ನೇತೃತ್ವದ TMC ಬಣದ 12 ಬ್ಯಾಂಕ್ ಖಾತೆ ಫ್ರೀಜ್ ಮಾಡಿದ ಪೋಲೀಸರು!