ಶುಭಂ ದ್ವಿವೇದಿ ಪತ್ನಿ ಅಶಾನ್ಯಾ 
ದೇಶ

ಹಣ ಅಥವಾ ಉದ್ಯೋಗ ಬೇಡ, ನನ್ನ ಪತಿಗೆ ಕೇವಲ ಹುತಾತ್ಮ ಸ್ಥಾನಮಾನ ನೀಡಿ: ಪಹಲ್ಗಾಮ್ ದಾಳಿಗೆ ಬಲಿಯಾದ ಶುಭಂ ಪತ್ನಿ!

ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರರ ದಾಳಿಯಲ್ಲಿ ಬಲಿಯಾದವರಲ್ಲಿ 31 ವರ್ಷದ ಶುಭಂ ದ್ವಿವೇದಿ ಕೂಡ ಸೇರಿದ್ದಾರೆ.

ಕಾನ್ಪುರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದು 10 ದಿನ ಕಳೆದರೂ ಇಲ್ಲಿಯವರೆಗೂ ಸರ್ಕಾರ ದುಷ್ಕರ್ಮಿಗಳ ವಿರುದ್ಧ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ದಾಳಿಯಲ್ಲಿ ಬಲಿಯಾದ ಉತ್ತರ ಪ್ರದೇಶದ ಶುಭಂ ದ್ವಿವೇದಿ ಪತ್ನಿ ಅಶಾನ್ಯಾ ಹೇಳಿದ್ದಾರೆ.

ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರರ ದಾಳಿಯಲ್ಲಿ ಬಲಿಯಾದವರಲ್ಲಿ 31 ವರ್ಷದ ಶುಭಂ ದ್ವಿವೇದಿ ಕೂಡ ಸೇರಿದ್ದಾರೆ. ಪಿಟಿಐ ಜೊತೆ ಮಾತನಾಡಿದ ಅಶಾನ್ಯಾ, ನಾನು ಉದ್ಯೋಗ ಅಥವಾ ಪರಿಹಾರವನ್ನು ಬಯಸುತ್ತಿಲ್ಲ, ಆದರೆ ನನ್ನ ಪತಿಗೆ ಹುತಾತ್ಮ ಸ್ಥಾನಮಾನ ನೀಡಬೇಕೆಂದು ಬಯಸುತ್ತೇನೆ ಎಂದರು.

ಶುಭಂಗೆ ಹುತಾತ್ಮ ಸ್ಥಾನಮಾನ ಸಿಕ್ಕಿಲ್ಲ ಅಥವಾ ಹತ್ಯೆಗೆ ಕಾರಣರಾದ ಭಯೋತ್ಪಾದಕರನ್ನು ಸರ್ಕಾರ ನಿರ್ಮೂಲನೆ ಮಾಡಿಲ್ಲ."ನನಗೆ ಕೆಲಸ ಅಥವಾ ಹಣ ಬೇಡ. ನನ್ನ ಪತಿಗೆ ಹುತಾತ್ಮನ ಸ್ಥಾನಮಾನ ಮಾತ್ರ ಬೇಕು. ಈ ನೋವನ್ನು ನಾನು ನನ್ನ ಜೀವನದುದ್ದಕ್ಕೂ ಹೊತ್ತುಕೊಳ್ಳುತ್ತೇನೆ ಎಂದು ಹೇಳಿದರು.

ಮನೆಯಿಂದ ಹೊಗಲು ಭಯಪಡುತ್ತಿರುವ ಅಶಾನ್ಯಾ, ಮನೆಯ ಕೊಠಡಿಯಲ್ಲಿ ಶುಭಂ ಫೋಟೋ ಮತ್ತು ದಾಳಿಯ ಸಮಯದಲ್ಲಿ ಆತ ಧರಿಸಿದ್ದ ಶರ್ಟ್ ನೋಡುತ್ತಲೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.ದಾಳಿಯ ಆಘಾತವನ್ನು ನೆನಪಿಸಿಕೊಂಡ ಅವರು ಟೈರ್ ಸಿಡಿಯುವ ಅಥವಾ ದೊಡ್ಡ ಶಬ್ದವೂ ನನ್ನನ್ನು ನಡುಗಿಸುತ್ತದೆ ಎಂದು ಹೇಳಿದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚಿಗೆ ಶುಭಂ ದ್ವಿವೇದಿ ಅವರ ಕುಟುಂಬವನ್ನು ಭೇಟಿಯಾದಾಗ, ಆಶಾನ್ಯಾ ಬೇಡಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದರು. ಸಂಸತ್ತಿನಲ್ಲೂ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ರಾಹುಲ್‌ ಭರವಸೆ ನೀಡಿದ್ದಾರೆ ಎಂದು ಆಶಾನ್ಯಾ ಪಿಟಿಐಗೆ ತಿಳಿಸಿದರು.

ಹತ್ಯೆಯ ಹಿಂದೆ ಭಯೋತ್ಪಾದಕರ ವಿರುದ್ಧ ಸೂಕ್ತ ಮತ್ತು ತಕ್ಷಣದ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು ಮತ್ತೆ ಎಂದಾದರೂ ಕಾಶ್ಮೀರಕ್ಕೆ ಭೇಟಿ ನೀಡುವ ಬಗ್ಗೆ ಯೋಚಿಸುತ್ತೀರಾ ಎಂದು ಕೇಳಿದಾಗ, "ಎಂದಿಗೂ ಇಲ್ಲ. ಒಮ್ಮೆಯೂ ಅಲ್ಲಿಗೆ ಹೋಗಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT