ಸಿಆರ್‌ಪಿಎಫ್ ಯೋಧ ಮುನೀರ್ ಅಹ್ಮದ್  
ದೇಶ

ಅನುಮತಿ ಪಡೆದೇ ಪಾಕ್ ಮಹಿಳೆಯೊಂದಿಗೆ ವಿವಾಹವಾಗಿದ್ದೆ, ನ್ಯಾಯ ಸಿಗುವ ವಿಶ್ವಾಸವಿದೆ: CRPF ಯೋಧ ಮುನೀರ್ ಅಹ್ಮದ್

ವಜಾ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದು, ನನಗೆ ನ್ಯಾಯ ಸಿಗುವ ವಿಶ್ವಾಸವಿದೆ.

ಜಮ್ಮು: ಕಳೆದ ವರ್ಷ ಸೇನಾ ಪ್ರಧಾನ ಕಚೇರಿಯಿಂದ ಅನುಮತಿ ಪಡೆದುಕೊಂಡೇ ಪಾಕಿಸ್ತಾನದ ಮಹಿಳೆಯೊಂದಿಗೆ ವಿವಾಹವಾಗಿದ್ದೆ ಎಂದು ಸಿಆರ್‌ಪಿಎಫ್ ಯೋಧ ಮುನೀರ್ ಅಹ್ಮದ್ ಶನಿವಾರ ಹೇಳಿದ್ದಾರೆ.

ಪಾಕಿಸ್ತಾನಿ ಮಹಿಳೆಯೊಂದಿಗಿನ ವಿವಾಹವಾಗಿದ್ದು, ಈ ವಿಚಾರವನ್ನು ಮುಚ್ಚಿಟ್ಟಿದ್ದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂಬ ವಿಚಾರ ಕುರಿತು ಪ್ರತಿಕ್ರಿಯೆ ನೀಡಿರುವ ಮುನೀರ್ ಅಹ್ಮದ್ ಅವರು, ಸೇನಾ ಪ್ರಧಾನ ಕಚೇರಿಯಿಂದ ಅನುಮತಿ ಪಡೆದುಕೊಂಡಿದ್ದೆ. ಅನುಮತಿ ಪಡೆದ 1 ತಿಂಗಳ ನಂತರ ಪಾಕಿಸ್ತಾನಿ ಮಹಿಳೆ ಮಿನಾಲ್ ಖಾನ್ ಅವರೊಂದಿಗಿನ ವಿವಾಹವಾಗಿದ್ದೆ. ವಜಾ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದು, ನನಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ವಜಾಗೊಂಡಿರುವ ವಿಚಾರ ನನಗೆ ತಿಳಿದಿರಲಿಲ್ಲ. ಮಾಧ್ಯಮಗಳ ವರದಿಗಳ ಬಳಿಕವೇ ತಿಳಿದಿತ್ತು. ಬಳಿಕ ಸಿಆರ್‌ಪಿಎಫ್‌ನಿಂದ ಪತ್ರ ಬಂದಿತ್ತು. ಇದು ನನಗೆ ಹಾಗೂ ನನ್ನ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಸೇನಾ ಪ್ರಧಾನ ಕಚೇರಿಗೆ 2022ರ ಡಿಸೆಂಬರ್ 31 ರಂದು ಪತ್ರ ಬರೆದಿದ್ದೆ. ಪಾಕಿಸ್ತಾನದ ಮಹಿಳೆಯೊಂದಿಗೆ ವಿವಾಹವಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದೆ. ಬಳಿಕ ಪಾಸ್ ಪೋರ್ಟ್, ವಿವಾಹ ಆಮಂತ್ರಣ ಪತ್ರಿಕೆ ಹಾಗೂ ಅಫಿಡವಿಟ್‌ಗಳ ಪ್ರತಿಗಳನ್ನು ಲಗತ್ತಿಸುವಂತೆ ನನಗೆ ಸೂಚಿಸಲಾಗಿತ್ತು.

ನನ್ನ, ಪೋಶಕರು, ಸರಪಂಚ್ ಮತ್ತು ಜಿಲ್ಲಾ ಅಭಿವೃದ್ಧಿ ಮಂಡಳಿ ಸದಸ್ಯರ ಅಫಿಡವಿಟ್‌ಗಳನ್ನು ಸೂಕ್ತ ಮಾರ್ಗಗಳ ಮೂಲಕ ಸಲ್ಲಿಸಲಾಯಿತು. ಅಂತಿಮವಾಗಿ ಏಪ್ರಿಲ್ 30, 2024 ರಂದು ಪ್ರಧಾನ ಕಚೇರಿಯಿಂದ ಅನುಮತಿ ದೊರೆಯಿತು. ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ)ಕ್ಕಾಗಿಯೂ ಅರ್ಜಿ ಸಲ್ಲಿಸಿದ್ದೆ. ಆದರೆ, ಅದರ ಅಗತ್ಯವಿಲ್ಲ ಎಂದು ತಿಳಿಸಲಾಗಿತ್ತು. ನಿಯಮಗಳ ಅನುಸಾರವಾಗಿಯೇ ವಿದೇಶಿ ಪ್ರಜೆಯೊಂದಿಗೆ ವಿವಾಹವಾಗಿದ್ದೆ. ಕಳೆದ ವರ್ಷ ಮೇ 24 ರಂದು ವೀಡಿಯೊ ಕರೆಯ ಮೂಲಕ ನಾವು ಆನ್‌ಲೈನ್‌ನಲ್ಲಿ ವಿವಾಹವಾದೆವು. ನಂತರ, ನನ್ನ 72 ನೇ ಬೆಟಾಲಿಯನ್‌ಗೆ ಮದುವೆ ಚಿತ್ರಗಳು, 'ನಿಕ್ಕಾ' ಪತ್ರಿಕೆಗಳು ಮತ್ತು ವಿವಾಹ ಪ್ರಮಾಣಪತ್ರವನ್ನು ಸಲ್ಲಿಸಿದ್ದೆ.

ನನ್ನ ಪತ್ನಿ ಫೆಬ್ರವರಿ 28 ರಂದು ಮೊದಲ ಬಾರಿಗೆ 15 ದಿನಗಳ ವೀಸಾದಲ್ಲಿ ಭಾರತಕ್ಕೆ ಬಂದಿದ್ದರು. ಬಳಿಕ ಮಾರ್ಚ್‌ನಲ್ಲಿಯೇ ದೀರ್ಘಾವಧಿಯ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದೆವು. ಬುಧವಾರ ಕೊನೆಯ ಕ್ಷಣದಲ್ಲಿ ತನ್ನ ಪತ್ನಿಯ ಗಡೀಪಾರು ತಡೆಯಲಾಗಿದೆ. ರಜೆಯ ಅವಧಿ ಮುಗಿದ ಬಳಿಕ ಮಾರ್ಚ್ 25 ರಂದು ಸುಂದರ್‌ಬಾನಿಯಲ್ಲಿರುವ ಬೆಟಾಲಿಯನ್ ಪ್ರಧಾನ ಕಚೇರಿಗೆ ವರದಿ ಮಾಡಲು ಕೇಳಲಾಗಿತ್ತು. ಆದರೆ, ಮಾರ್ಚ್ 27 ರಂದು, "ನನಗೆ ವರ್ಗಾವಣೆ ಆದೇಶವನ್ನು ನೀಡಲಾಯಿತು. 15 ದಿನಗಳ ಕಡ್ಡಾಯ ಸೇರ್ಪಡೆ ಅವಧಿಯನ್ನು ಒದಗಿಸದೆ ಭೋಪಾಲ್ (ಮಧ್ಯಪ್ರದೇಶ) ದಲ್ಲಿರುವ 41 ನೇ ಬೆಟಾಲಿಯನ್‌ಗೆ ನಿಯೋಜಿಸಲಾಯಿತು. ಆದೇಶದ ಪ್ರತಿಯನ್ನು ನೀಡಲಾಯಿತು. ತಕ್ಷಣವೇ ಸೇವೆಯಿಂದ ಬಿಡುಗಡೆ ಮಾಡಲಾಯಿತು,

ಮಾರ್ಚ್ 29 ರಂದು ಭೋಪಾಲ್‌ಗೆ ಕರ್ತವ್ಯಕ್ಕೆ ಸೇರ್ಪಡೆಯಾದೆ. ಇದನ್ನು ಬಿಟ್ಟು ನನಗೆ ಬೇರೆ ದಾರಿಯಿರಲಿಲ್ಲ. ನಾನು ಅಲ್ಲಿಗೆ ಹೋದಾಗ ಕಮಾಂಡಿಂಗ್ ಅಧಿಕಾರಿ ಮತ್ತು ಉಪ ಅಧಿಕಾರಿ ಸಂದರ್ಶನ ನಡೆಸಿದರು. ಪಾಕಿಸ್ತಾನಿ ಮಹಿಳೆಯೊಂದಿಗಿನ ನನ್ನ ವಿವಾಹವನ್ನು ಸ್ಪಷ್ಟವಾಗಿ ಉಲ್ಲೇಖಿಸಿ ದಾಖಲಾತಿ ಪ್ರಕ್ರಿಯೆಯನ್ನು ಸಹ ಪೂರ್ಣಗೊಳಿಸಿದೆ" ಬೆಟಾಲಿಯನ್ ಡೇಟಾ ರೆಕಾರ್ಡ್ ಪುಸ್ತಕದಲ್ಲಿಯೂ ಇದನ್ನು ನಮದೂ ಮಾಡಲಾಗಿದೆ. ನಾನು ನಿಯಮಗಳನ್ನು ಪಾಲನೆ ಮಾಡಿದ್ದು, ಇದೀಗ ಸೇವಾ ವಜಾ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇನೆ. ನ್ಯಾಯಾಲಯದಿಂದ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT