ರಾಹುಲ್ ಗಾಂಧಿ 
ದೇಶ

1984 riots: 'ಕಾಂಗ್ರೆಸ್‌ನ ತಪ್ಪುಗಳು ನಾನು ಪಕ್ಷದಲ್ಲಿ ಇಲ್ಲದಿದ್ದಾಗ ಸಂಭವಿಸಿವೆ.. ಆದರೂ ನಾನೇ ಜವಾಬ್ದಾರಿ ವಹಿಸುವೆ'- Rahul Gandhi

1984ರ ಸಿಖ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮುಕ್ತ ಮನಸ್ಸಿನಿಂದ ಮಾತನಾಡಿರುವ ರಾಹುಲ್ ಗಾಂಧಿ, '80ರ ದಶಕದಲ್ಲಿ ನಡೆದದ್ದು "ತಪ್ಪು" ಎಂದು ತಾವು ಸಾರ್ವಜನಿಕವಾಗಿ ಹೇಳಿ ಗಮನಸೆಳೆದರು.

ನವದೆಹಲಿ: 'ಕಾಂಗ್ರೆಸ್ ಮಾಡಿದ ಬಹಳಷ್ಟು ತಪ್ಪುಗಳು ನಾನು ಪಕ್ಷದಲ್ಲಿ ಇಲ್ಲದಿದ್ದಾಗ ಸಂಭವಿಸಿವೆ. ಪಕ್ಷವು ತನ್ನ ಇತಿಹಾಸದಲ್ಲಿ ಮಾಡಿದ ಎಲ್ಲ ತಪ್ಪುಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ' ಎಂದು 1984 ಸಿಖ್ ಗಲಭೆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

1984 ರ ಗಲಭೆಗಳು ಮತ್ತು ಸಿಖ್ ಸಮುದಾಯದೊಂದಿಗಿನ ಕಾಂಗ್ರೆಸ್ ಸಂಬಂಧಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, 'ಕಾಂಗ್ರೆಸ್ ಮಾಡಿದ ಬಹಳಷ್ಟು "ತಪ್ಪುಗಳು" ನಾನು ಇಲ್ಲದಿದ್ದಾಗ ನಡೆದಿವೆ. ಆದರೆ ಪಕ್ಷವು ತನ್ನ ಇತಿಹಾಸದಲ್ಲಿ ಮಾಡಿದ ಎಲ್ಲ ತಪ್ಪುಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾನು ಸಂತೋಷಪಡುತ್ತೇನೆ ಎಂದು ಹೇಳಿದರು.

1984ರ ಸಿಖ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮುಕ್ತ ಮನಸ್ಸಿನಿಂದ ಮಾತನಾಡಿರುವ ರಾಹುಲ್ ಗಾಂಧಿ, '80ರ ದಶಕದಲ್ಲಿ ನಡೆದದ್ದು "ತಪ್ಪು" ಎಂದು ತಾವು ಸಾರ್ವಜನಿಕವಾಗಿ ಹೇಳಿ ಗಮನಸೆಳೆದರು. ಏಪ್ರಿಲ್ 21 ರಂದು ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ವ್ಯಾಟ್ಸನ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್‌ನ್ಯಾಷನಲ್ ಅಂಡ್ ಪಬ್ಲಿಕ್ ಅಫೇರ್ಸ್‌ನಲ್ಲಿ ನಡೆದ ಸಂವಾದಾತ್ಮಕ ಅಧಿವೇಶನದಲ್ಲಿ ರಾಹುಲ್ ಗಾಂಧಿ ಈ ಹೇಳಿಕೆಗಳನ್ನು ನೀಡಿದ್ದರು.

ಸಂವಾದದ ವೀಡಿಯೊವನ್ನು ಶನಿವಾರ ವ್ಯಾಟ್ಸನ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್‌ನ್ಯಾಷನಲ್ ಅಂಡ್ ಪಬ್ಲಿಕ್ ಅಫೇರ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಸಿಖ್ ಸಮುದಾಯದೊಂದಿಗೆ ಸಮನ್ವಯ ಸಾಧಿಸಲು ನೀವು ಯಾವ ಪ್ರಯತ್ನಗಳನ್ನು ಮಾಡುತ್ತಿದ್ದೀರಿ ಎಂದು ಸಿಖ್ ವಿದ್ಯಾರ್ಥಿಯೊಬ್ಬರು ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, "ಸಿಖ್ಖರನ್ನು ಏನೂ ಹೆದರಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ.

ನಾನು ಮಾಡಿದ ಹೇಳಿಕೆಯೆಂದರೆ, ಜನರು ತಮ್ಮ ಧರ್ಮವನ್ನು ವ್ಯಕ್ತಪಡಿಸಲು ಅನಾನುಕೂಲವಾಗಿರುವ ಭಾರತವನ್ನು ನಾವು ಬಯಸುತ್ತೇವೆಯೇ? ಕಾಂಗ್ರೆಸ್ ಪಕ್ಷದ ತಪ್ಪುಗಳಿಗೆ ಸಂಬಂಧಿಸಿದಂತೆ, ಆ ತಪ್ಪುಗಳಲ್ಲಿ ಬಹಳಷ್ಟು ನಾನು ಅಲ್ಲಿ ಇಲ್ಲದಿದ್ದಾಗ ಸಂಭವಿಸಿವೆ, ಆದರೆ ಕಾಂಗ್ರೆಸ್ ಪಕ್ಷವು ತನ್ನ ಇತಿಹಾಸದಲ್ಲಿ ಮಾಡಿರುವ ಎಲ್ಲದಕ್ಕೂ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾನು ಸಂತೋಷಪಡುತ್ತೇನೆ" ಎಂದು ಹೇಳಿದರು.

'80ರ ದಶಕದಲ್ಲಿ ನಡೆದದ್ದು ತಪ್ಪು ಎಂದು ನಾನು ಸಾರ್ವಜನಿಕವಾಗಿ ಹೇಳಿದ್ದೇನೆ. ನಾನು ಹಲವಾರು ಬಾರಿ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದೇನೆ. ಸಿಖ್ ಸಮುದಾಯದೊಂದಿಗೆ ನನಗೆ ಅತ್ಯಂತ ಉತ್ತಮ ಸಂಬಂಧವಿದೆ. ನೀವು 3000 ವರ್ಷಗಳ ಹಿಂದಕ್ಕೆ ಹೋಗಿ ನೋಡಿದರೆ ಕರ್ನಾಟಕದಲ್ಲಿ ಬಸವ, ಬುದ್ಧ, ಗುರುನಾನಕ್, ಕೇರಳದಲ್ಲಿ ನಾರಾಯಣ ಗುರು, ಫುಲೆ, ಮಹಾತ್ಮ ಗಾಂಧಿ, ಅಂಬೇಡ್ಕರ್ ಇವರೆಲ್ಲರೂ ಸಮಾನತೆಗಾಗಿ ಸಮಾಜ ಸುಧಾರಣೆಗಾಗಿ ಹೋರಟ ನಡೆಸಿದರು.

ಇವರು ಧರ್ಮಾಂಧರಾಗಿರಲಿಲ್ಲ. ಇವರಲ್ಲಿ ಯಾರೂ ‘ನಾವು ಜನರನ್ನು ಕೊಲ್ಲಲು ಬಯಸುತ್ತೇವೆ, ಜನರನ್ನು ಪ್ರತ್ಯೇಕಿಸಲು ಬಯಸುತ್ತೇವೆ, ಜನರನ್ನು ಪುಡಿಮಾಡಲು ಬಯಸುತ್ತೇವೆ’ ಎಂದು ಹೇಳುತ್ತಿರಲಿಲ್ಲ. ನಮ್ಮ ಸಂವಿಧಾನದಲ್ಲಿರುವ ಈ ಎಲ್ಲ ಜನರು, ಅವರ ಧ್ವನಿಗಳು ಮೂಲಭೂತವಾಗಿ ಒಂದೇ ವಿಷಯವನ್ನು ಹೇಳುತ್ತಿವೆ. ಅದು ಎಲ್ಲರನ್ನೂ ಸತ್ಯ ಮತ್ತು ಅಹಿಂಸೆಗೆ ಒತ್ತು ನೀಡುತ್ತದೆ” ಎಂದು ರಾಹುಲ್‌ ಗಾಂಧಿ ಸಂವಾದದಲ್ಲಿ ತಿಳಿಸಿದ್ದಾರೆ.

ಪ್ರತಿಯೊಂದು ರಾಜ್ಯ ಮತ್ತು ಪ್ರತಿಯೊಂದು ಸಮುದಾಯದಲ್ಲಿ ಸತ್ಯ, ಅಹಿಂಸೆ, ಸಮಾನತೆಯ ವಿಚಾರಗಳ ಪರವಾಗಿ ನಿಂತ, ಆ ವಿಚಾರಗಳಿಗಾಗಿ ಬದುಕಿದ ಹಾಗೂ ಆ ವಿಚಾರಗಳಿಗಾಗಿಯೇ ಪ್ರಾಣತೆತ್ತ ಅನೇಕ ಜನರಿದ್ದಾರೆ. ಅವರಲ್ಲಿ ಮಹಾತ್ಮ ಗಾಂಧಿ ಕೂಡ ಒಬ್ಬರು ಎಂದು ರಾಹುಲ್‌ ಗಾಂಧಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT