ಸುಧಾರಿತ ಸ್ಫೋಟಕ ಸಾಧನಗಳು 
ದೇಶ

ಜಮ್ಮ-ಕಾಶ್ಮೀರ: ಪೂಂಚ್'ನಲ್ಲಿ ಉಗ್ರರ ಅಡಗುತಾಣಗಳು ಪತ್ತೆ; IED-wireless ರೇಡಿಯೋ ಸೆಟ್​ಗಳು ವಶಕ್ಕೆ

ಅರ್ಧ ಕೆಜಿಯಿಂದ ಐದು ಕೆಜಿ ತೂಕದ ಬಳಸಲು ಸಿದ್ಧವಾಗಿದ್ದ ಐಇಡಿಗಳನ್ನು ಸ್ಥಳದಲ್ಲೇ ನಾಶಪಡಿಸಲಾಗಿದೆ.

ಮೆಂಧರ್/ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಾರತೀ ಸೇನಾ ಪಡೆಗಳು ಭಯೋತ್ಪಾದಕರ ಅಡಗುತಾಣಗಳನ್ನು ಪತ್ತೆಹಚ್ಚಿದ್ದು, 5 ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು) ಮತ್ತು ಎರಡು ವೈರ್‌ಲೆಸ್ ರೇಡಿಯೋ ಸೆಟ್​ಗಳನ್ನು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಅರ್ಧ ಕೆಜಿಯಿಂದ ಐದು ಕೆಜಿ ತೂಕದ ಬಳಸಲು ಸಿದ್ಧವಾಗಿದ್ದ ಐಇಡಿಗಳನ್ನು ಸ್ಥಳದಲ್ಲೇ ನಾಶಪಡಿಸಲಾಗಿದೆ, ಈ ಮೂಲಕ ಗಡಿ ಜಿಲ್ಲೆಯಲ್ಲಿ ವಿಧ್ವಂಸಕ ಕೃತ್ಯ ಎಸಗುವ ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಭಾನುವಾರ ಸಂಜೆ ಸುರಂಕೋಟ್‌ನ ಮರ್ಹೋಟೆ ಪ್ರದೇಶದ ಸುರಂತಲ್‌ನಲ್ಲಿ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ ವಿಶೇಷ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರ ಅಡಗು ತಾಣಗಳನ್ನು ಪತ್ತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸ್ಟೀಲ್ ಬಕೆಟ್ ನಲ್ಲಿ 2 ಹಾಗೂ ಟಿಫಿನ್ ಬಾಕ್ಸ್ ಗಳಲ್ಲಿ ಮೂರು ಐಡಿಗಳನ್ನು ಇರಿಸಿರುವುದು ಕಂಡು ಬಂದಿದೆ. ಇದಲ್ಲದೆ, ಎರಡು ವೈರ್‌ಲೆಸ್ ಸೆಟ್‌ಗಳು, ಯೂರಿಯಾ ಹೊಂದಿರುವ ಐದು ಪ್ಯಾಕೆಟ್‌ಗಳು, ಐದು ಲೀಟರ್ ಗ್ಯಾಸ್ ಸಿಲಿಂಡರ್ 1, ಒಂದು ಬೈನಾಕ್ಯುಲರ್, ಮೂರು ಕ್ಯಾಪ್‌ಗಳು, ಮೂರು ಕಂಬಳಿಗಳು, ಪ್ಯಾಂಟ್ ಮತ್ತು ಪಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಭಾರತವನ್ನ ನರಕದ ಕೂಪ ಅಂದಿದ್ರಲ್ಲಾ ಆ ಬಗ್ಗೆ ಏನ್ ಹೇಳ್ತಿರಾ?; ಪತ್ರಕರ್ತನ ಪ್ರಶ್ನೆಗೆ ರುಬಿಯೊ ಗಲಿಬಿಲಿ!

CM ಬದಲಾವಣೆ ಚರ್ಚೆ ಮಧ್ಯೆ ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಬದಲಾವಣೆ

ಗುಲ್ಮಾರ್ಗ್: ಕೈಕೊಟ್ಟ ವಿಶ್ವದ 2ನೇ ಅತಿ ಎತ್ತರದ ಕೇಬಲ್ ಕಾರ್; ಆಕಾಶದಲ್ಲೇ ಸಿಲುಕಿದ 300 ಪ್ರವಾಸಿಗರು! Video ನೋಡಿ

ಅಪ್ರಾಪ್ತ ಬಾಲಕಿ ಅತ್ಯಾಚಾರ, ಕೊಲೆಯಾಗಿದ್ರೂ ಪ್ರೆಸ್ ಮೀಟ್ ನಲ್ಲಿ ಪೊಲೀಸರ 'ಲಲ್ಲೆ': Video ವೈರಲ್, ಜನಾಕ್ರೋಶ!

ಅಕ್ರಮ ಸಂಬಂಧಕ್ಕೆ ಮೂವರು ಬಲಿ: ಪತ್ನಿ ಕೊಂದು ಪತಿ ಆತ್ಮಹತ್ಯೆ; ಮಹಿಳೆಯ ಪ್ರಿಯಕರನೂ ಸಾವಿಗೆ ಶರಣು!

SCROLL FOR NEXT