Security Guard ಮೇಲೆ ಕಾರು ಹರಿಸಿದ 'ಧೂರ್ತ' 
ದೇಶ

ಭೀಕರ: ಹಾರ್ನ್ ಮಾಡಬೇಡಿ ಎಂದಿದ್ದಕ್ಕೆ Security Guard ಮೇಲೆ ಕಾರು ಹರಿಸಿದ 'ಧೂರ್ತ'!

ಕಾರು ಹರಿದ ಪರಿಣಾಮ ಸಿಬ್ಬಂದಿಯ ಎರಡೂ ಕಾಲುಗಳಲ್ಲಿ 10 ಕ್ಕೂ ಹೆಚ್ಚು ಸ್ಥಳಗಳಲ್ಲಿ ಮೂಳೆಗಳು ಮುರಿದಿವೆ. ಗಾಯಾಳುವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ನವದೆಹಲಿ: ಹಾರ್ನ್ ಮಾಡಬೇಡಿ ಎಂದಿದ್ದತ್ತೇ ಭದ್ರತಾ ಸಿಬ್ಬಂದಿ ಮೇಲೆ THAR ಚಾಲಕ ಕಾರು ಹರಿಸಿರುನ ಭೀಕರ ಘಟನೆ ದೆಹಲಿಯಲ್ಲಿ ನಡೆದಿದೆ.

ನೈಋತ್ಯ ದೆಹಲಿ ವಸಂತ್ ಕುಂಜ್ ನಲ್ಲಿ, ಥಾರ್ ಕಾರು ಚಾಲಕನೊಬ್ಬ ಹಾರ್ನ್ ಮಾಡಬೇಡಿ ಎಂದು ಹೇಳಿದ ಭದ್ರತಾ ಸಿಬ್ಬಂದಿ ಮೇಲೆ ಕಾರು ಹರಿಸಿರುವ ಭೀಕರ ಘಟನೆ ನಡೆದಿದೆ.

ಕಾರು ಹರಿದ ಪರಿಣಾಮ ಸಿಬ್ಬಂದಿಯ ಎರಡೂ ಕಾಲುಗಳಲ್ಲಿ 10 ಕ್ಕೂ ಹೆಚ್ಚು ಸ್ಥಳಗಳಲ್ಲಿ ಮೂಳೆಗಳು ಮುರಿದಿವೆ. ಗಾಯಾಳುವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ವಸಂತ್ ಕುಂಜ್ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಥಾರ್ ಕಾರು ಚಾಲಕನನ್ನು ಪ್ರಸ್ತುತ ಬಂಧಿಸಲಾಗಿದೆ.

ಸಂತ್ರಸ್ತೆನ ಹೇಳಿಕೆಯ ಮೇರೆಗೆ ಪೊಲೀಸರು ಥಾರ್ ಕಾರು ಚಾಲಕ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಘಟನೆ ನಡೆದ 6 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಥಾರ್ ಚಾಲಕನನ್ನು ರಂಗಪುರಿ ನಿವಾಸಿ ವಿಜಯ್ ಅಲಿಯಾಸ್ ಲಾಲಾ (24) ಎಂದು ಗುರುತಿಸಲಾಗಿದೆ.

ಏನಿದು ಘಟನೆ?

ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ಥ ಭದ್ರತಾ ಸಿಬ್ಬಂದಿ ರಾಜೀವ್ ಕುಮಾರ್ ತನ್ನ ಕುಟುಂಬದೊಂದಿಗೆ ಮಹಿಪಾಲ್‌ಪುರದಲ್ಲಿ ವಾಸಿಸುತ್ತಿದ್ದಾರೆ. ಅವರು ಮೂಲತಃ ಬಿಹಾರದವರಾಗಿದ್ದು, ದೆಹಲಿ ವಿಮಾನ ನಿಲ್ಜಾಣದಲ್ಲಿ ಟರ್ಮಿನಲ್ 3ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ನಿನ್ನೆ ಕೂಡ ರಾತ್ರಿಪಾಳಿ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ ಮಹಿಪಾಲ್‌ಪುರ ಕ್ರಾಸಿಂಗ್‌ನಲ್ಲಿ ಕ್ಯಾಬ್ ಅವನನ್ನು ಇಳಿಸಿದೆ. ಈ ವೇಳೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಥಾರ್ ಕಾರು ಜೋರಾಗಿ ಹಾರ್ನ್ ಮಾಡಿದೆ.

ಈ ವೇಳೆ ರಾಜೀವ್ ಕುಮಾರ್ ಥಾರ್ ಕಾರು ಚಾಲಕನಿಗೆ ಹಾರ್ನ್ ಮಾಡದಂತೆ ಗದರಿದ್ದಾನೆ. ಇದರಿಂದ ಆಕ್ರೋಶಗೊಂಡ ಕಾರು ಚಾಲಕ ವಿಜಯ್ ಅಲಿಯಾಸ್ ಲಾಲಾ ಮಾತಿನ ಚಕಮಕಿ ನಡೆಸಿದ್ದಾನೆ. ಬಳಿಕ ನೋಡ ನೋಡುತ್ತಲೇ ಕಾರನ್ನು ಆತನ ಮೇಲೆಯೇ ಹರಿಸಿದ್ದಾನೆ. ಈ ವಿಡಿಯೋ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ರಾಜೀವ್ ಕುಮಾರ್ ಮೇಲೆ ಉದ್ದೇಶಪೂರ್ವಕವಾಗಿಯೇ ಚಾಲಕ ವಿಜಯ್ ಹರಿಸಿರುವುದು ಕಂಡುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!