ರಾಮ್ ಸೇವಕ್ ಹಾಗೂ ಆತನ ಮನೆ 
ದೇಶ

Uttar Pradesh: 78 ವರ್ಷಗಳಲ್ಲಿ ಈ ಊರಿನಿಂದ 10ನೇ ತರಗತಿ ಪಾಸಾದ ಮೊದಲ ವ್ಯಕ್ತಿ ರಾಮ್ ಸೇವಕ್!

ಉತ್ತರ ಪ್ರದೇಶದ ಬಾರಾಬಂಕಿಯ ನಿಜಾಂಪುರ್ ಗ್ರಾಮದ ರಾಮ್ ಸೇವಕ್ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲಿಗರಾಗಿದ್ದಾರೆ. ಶೇ. 55 ರಷ್ಟು ಅಂಕಗಳೊಂದಿಗೆ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಲಖನೌ: ಉತ್ತರ ಪ್ರದೇಶದ ನಿಜಾಂಪುರದಲ್ಲಿ 78 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 16 ವರ್ಷದ ಬಾಲಕನೊಬ್ಬ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ. ಈತನ ಸಾಧನೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದು, ಜಿಲ್ಲಾಧಿಕಾರಿಗಳು ಗೌರವಿಸಿದ್ದಾರೆ. ನನ್ನನ್ನು ಸನ್ಮಾನಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಸಾಹೆಬ್ ಕರೆದಾಗ, ನನ್ನ ಬಳಿ ಸರಿಯಾದ ಬಟ್ಟೆ ಅಥವಾ ಬೂಟುಗಳು ಇರಲಿಲ್ಲ. ನಿಜವಾಗಿಯೂ, ನನ್ನ ಜೀವನದಲ್ಲಿ ಮೊದಲ ಬಾರಿಗೆ ಶೂ ಧರಿಸಿದ್ದಾಗಿ ರಾಮ್ ಸೇವಕ್ ಹೇಳಿದರು.

ಶೇ.55 ರಷ್ಟು ಅಂಕಗಳೊಂದಿಗೆ ಉತ್ತೀರ್ಣ: ದೇಶ ಸ್ವಾತಂತ್ರ್ಯಗೊಂಡು 78 ವರ್ಷವಾದರೂ ಉತ್ತರ ಪ್ರದೇಶದ ಬಾರಾಬಂಕಿಯ ನಿಜಾಂಪುರ್ ಗ್ರಾಮದ ರಾಮ್ ಸೇವಕ್ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲಿಗರಾಗಿದ್ದಾರೆ. ಶೇ. 55 ರಷ್ಟು ಅಂಕಗಳೊಂದಿಗೆ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬಹಿರ್ದೆಸೆ ವಿರುದ್ಧದ ಹೋರಾಟದಿಂದ ಅವರು ಗುರುತಿಸಿಕೊಂಡಿದ್ದು, ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡ ಅನೇಕರು ಕಲಿಕೆಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ ಸುಮಾರು 28 ಕಿಮೀ ಒಳಭಾಗದಲ್ಲಿರುವ ನಿಜಾಂಪುರವು 300 ಜನಸಂಖ್ಯೆಯನ್ನು ಹೊಂದಿದೆ. ಗ್ರಾಮವು ಸುಸಜ್ಜಿತ ರಸ್ತೆ, ಪ್ರಾಥಮಿಕ ಶಾಲೆ ಮತ್ತು ದೇವಸ್ಥಾನವನ್ನು ಒಳಗೊಂಡಿದೆ. ಹಳ್ಳಿಯ ಹೆಚ್ಚಿನ ಪುರುಷರು ದಿನಗೂಲಿಗಳಾಗಿದ್ದಾರೆ. ಹಾಗೆಯೇ ರಾಮ್ ಸೇವಕ್ ತಂದೆ ಜಗದೀಶ್ ಪ್ರಸಾದ್ ಕೂಡಾ ದಿನಗೂಲಿ ನೌಕರರಾಗಿದ್ದಾರೆ. ಕುಟುಂಬಕ್ಕಾಗಿ ಹೆಚ್ಚುವರಿ ಹಣ ಹೊಂದಿಸಲು ರಾಮ್ ಸೇವಕ್ ಮದುವೆಯ ಮೆರವಣಿಗೆಗಳಲ್ಲಿ ತಲೆಯ ಮೇಲೆ ಲೈಟ್ ಗಳನ್ನು ಹೊತ್ತೊಯ್ಯುತ್ತಾನೆ.

ಹಳೆಯ ಮನೆಯಲ್ಲಿ ಏಳು ಜನರು ವಾಸ: ಒಂದು ಹಳೆಯ ಮನೆಯಲ್ಲಿ ರಾಮ್ ಸೇವಕ್, ಅವರ ತಂದೆ ಜಗದೀಶ್ ಪ್ರಸಾದ್, ತಾಯಿ ಪುಷ್ಪಾ, ಇಬ್ಬರು ಕಿರಿಯ ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಒಳಗೊಂಡ ಏಳು ಜನರ ಕುಟುಂಬ ವಾಸಿಸುತ್ತಿದೆ. ಆ ಮನೆಯಲ್ಲಿ ಎರಡು ಕೊಠಡಿಗಳಿದ್ದು, ಹುಲ್ಲಿನ ಛಾವಣಿ ಹೊಂದಿದೆ. ಒಂದು ಕೊಠಡಿಯಲ್ಲಿ ಇಡೀ ಕುಟುಂಬ ವಾಸಿಸುತ್ತಿದ್ದರೆ ಮತ್ತೊಂದರಲ್ಲಿ ಜಾನುವಾರುಗಳಿಗೆ ಮೇವು ಇರಿಸಲು ಬಳಸಲಾಗುತ್ತದೆ.

ಬಟ್ಟೆ, ಪುಸ್ತಕ ಖರೀದಿಸಲು ಕೂಲಿ ಕೆಲಸ: ಬಡತನ ಒಬ್ಬ ವ್ಯಕ್ತಿಯನ್ನೂ ಎಲ್ಲವನ್ನೂ ಮಾಡುವಂತೆ ಮಾಡುತ್ತದೆ. ಮದುವೆ ಸೀಸನ್ ನಲ್ಲಿ ನನ್ನ ತಲೆಯ ಮೇಲೆ ಲೈಟ್ ಗಳನ್ನು ಹೊತ್ತುಕೊಂಡು ಮದುವೆಯ ಮೆರವಣಿಗೆಯೊಂದಿಗೆ ಹೋಗುತ್ತೇನೆ. ಒಂದು ರಾತ್ರಿಗೆ 200-300 ರೂ. ಬರುತ್ತದೆ. ಕೂಲಿಯಾಗಿ ಕೆಲಸ ಮಾಡುತ್ತೇನೆ. ಗಳಿಸಿದ್ದನ್ನು ಪುಸ್ತಕ, ಶಾಲಾ ಫೀಸ್ ಕಟ್ಟಲು ವೆಚ್ಚ ಮಾಡುತ್ತೇನೆ. ನಾನು ಕೂಡಿಟ್ಟ ಹಣದಲ್ಲಿ ರೂ. 2,100 ನ್ನು 10ನೇ ತರಗತಿಗಾಗಿ ಫೀಸ್ ಕಟ್ಟಿದ್ದಾಗಿ ರಾಮ್ ಸೇವಕ್ ತನ್ನ ಶ್ರಮ ಹಾಗೂ ವಿದ್ಯಾಭ್ಯಾಸ ಕುರಿತು ವಿವರಿಸಿದರು.

ಇಂಜಿನಿಯರ್ ಆಗುವ ಕನಸು: ಮನೆಗೆ ವಿದ್ಯುತ್ ಇಲ್ಲ, ಆದರೆ ಎಂಎಲ್ಎ ಕೋಟಾದಡಿ ಒದಗಿಸಲಾದ ಸೋಲಾರ್ ಲೈಟ್ ರಾತ್ರಿಯಲ್ಲಿ ಓದಲು ನೆರವಾಯಿತು. ಮುಂದೆ ಚೆನ್ನಾಗಿ ಓದಿ ಇಂಜಿನಿಯರ್ ಆಗುವ ಕನಸು ಹೊಂದಿದ್ದೇನೆ. ಹಳ್ಳಿಯ ಪ್ರಾಥಮಿಕ ಶಾಲೆಯಿಂದ ನನ್ನ ಅಧ್ಯಯನವನ್ನು ಪ್ರಾರಂಭಿಸಿದೆ. ಈಗ ಜೀವನದ ಮಹತ್ವದ ಘಟ್ಟ ತಲುಪಿದ್ದು. ಇಂಜಿನಿಯರ್ ಆಗುವುದು ನನ್ನ ಮುಂದಿನ ಕನಸು ಆಗಿದೆ ರಾಮ್ ಸೇವಕ್ ಹಂಚಿಕೊಂಡರು. ರಾಮ್ ಸೇವಕ್ ಅವರ ತಾಯಿ ಪುಷ್ಪಾ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟ ಮಾಡುವ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಾರೆ. ಐದನೇ ತರಗತಿಯವರೆಗೆ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ರಾಮ್ ಸೇವಕ್ ಗ್ರಾಮದಿಂದ 500 ಮೀಟರ್ ದೂರದಲ್ಲಿರುವ ಸರ್ಕಾರಿ ಇಂಟರ್ ಕಾಲೇಜಿನಲ್ಲಿ 6 ನೇ ತರಗತಿಗೆ ಪ್ರವೇಶ ಪಡೆದಿದ್ದರು.

ತಾಯಿಗೆ ಹೆಮ್ಮೆ ತಂದ ಮಗ: ಎಲ್ಲಾ ತರಗಳಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗೆಡೆಯಾಗುತ್ತಿದ್ದ ತನ್ನ ಮಗ ಈಗ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ತಮಗೆ ಹೆಮ್ಮೆಯನ್ನುಂಟು ಮಾಡಿದೆ ಎಂದು ರಾಮ್ ಸೇವಕಿ ತಾಯಿ ಪುಷ್ಪ ಹೇಳಿದರು. "ನಾನು 10 ನೇ ತರಗತಿಗೆ ತಯಾರಿ ನಡೆಸುತ್ತಿದ್ದಾಗ ಹಳ್ಳಿಯ ಎಲ್ಲರೂ ನನ್ನನ್ನು ತಡೆಯುತ್ತಿದ್ದರು, 'ಅಧ್ಯಯನಕ್ಕಾಗಿ ಸಮಯ ವ್ಯರ್ಥ ಮಾಡುತ್ತಿದ್ದೀಯಾ, ಎಂದಿಗೂ ಪರೀಕ್ಷೆಯಲ್ಲಿ ಪಾಸ್ ಆಗಲು ಸಾಧ್ಯವಿಲ್ಲ' ಎಂದು ಹೇಳುತ್ತಿದ್ದರು. ಅದು ತಪ್ಪು ಎಂದು ಸಾಬೀತುಪಡಿಸಲು ಸುಮ್ಮನಿದ್ದೆ ಎಂದು ರಾಮ್ ಸೇವಕ್ ತನ್ನ ಹೋರಾಟದ ಕಥೆ ಹೇಳಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT