ವಿದೇಶಾಂಗ ಸಚಿವ ಎಸ್ ಜೈಶಂಕರ್ 
ದೇಶ

ಭಾರತದ ಮೇಲೆ ಪಾಕಿಸ್ತಾನ ಮಿಲಿಟರಿ ದಾಳಿ ನಡೆಸಿದರೆ ತಕ್ಕ ಉತ್ತರ ನೀಡಲಾಗುವುದು: ವಿದೇಶಾಂಗ ಸಚಿವ ಎಸ್ ಜೈಶಂಕರ್

ನೆರೆಯ ಮತ್ತು ನಿಕಟ ಪಾಲುದಾರನಾಗಿ, ಇರಾನ್ ಪರಿಸ್ಥಿತಿಯ ಬಗ್ಗೆ ತಿಳಿವಳಿಕೆ ಹೊಂದಿರುವುದು ಮುಖ್ಯ ಎಂದು ಜೈಶಂಕರ್ ಹೇಳಿದರು.

ನವದೆಹಲಿ: ಪಾಕಿಸ್ತಾನದೊಂದಿಗೆ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಉದ್ದೇಶ ಭಾರತಕ್ಕೆ ಇಲ್ಲ. ಆದರೆ, ದೇಶದ ಮೇಲೆ ಪಾಕ್‌ನಿಂದ ಯಾವುದೇ ರೀತಿಯ ಮಿಲಿಟರಿ ದಾಳಿಗಳು ನಡೆದರೂ, ಅದಕ್ಕೆ ತಕ್ಕ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಗುರುವಾರ ಹೇಳಿದ್ದಾರೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರೊಂದಿಗಿನ ಸಭೆಯಲ್ಲಿ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಅನಾಗರಿಕ ದಾಳಿಯು ಭಾರತವನ್ನು 'ಗಡಿಯಾಚೆಗಿನ' ಭಯೋತ್ಪಾದಕ ನೆಲೆಗಳ ಮೇಲೆ ಬುಧವಾರ ದಾಳಿ ನಡೆಸುವಂತೆ ಒತ್ತಾಯಿಸಿತು ಎಂದು ವಿದೇಶಾಂಗ ಸಚಿವರು ಹೇಳಿದರು.

'ಬೈಸರನ್ ಕಣಿವೆ ಮೇಲೆ ದಾಳಿ ನಡೆಸಿ 26 ಮಂದಿ ಸಾವಿಗೆ ಕಾಣವಾದ ಉಗ್ರ ದಾಳಿಯು ಮೇ 7ರಂದು ಗಡಿಯಾಚೆಗಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಪ್ರತಿಕ್ರಿಯಿಸಲು ನಮ್ಮನ್ನು ಒತ್ತಾಯಿಸಿತು. ನಾವು ನೀಡಿರುವುದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಷ್ಟೇ' ಎಂದು ಅವರು ಹೇಳಿದರು.

'ಪಾಕ್ ಜೊತೆಗಿನ ಪರಿಸ್ಥಿತಿಯನ್ನು ಉಲ್ಬಣಗೊಳಿಸುವುದು ನಮ್ಮ ಉದ್ದೇಶವಲ್ಲ. ಆದಾಗ್ಯೂ, ನಮ್ಮ ಮೇಲೆ ಮಿಲಿಟರಿ ದಾಳಿಗಳು ನಡೆದರೆ, ಅದಕ್ಕೆ ಅತ್ಯಂತ ದೃಢವಾದ ಪ್ರತಿಕ್ರಿಯೆ ನೀಡಲಾಗುವುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ' ಎಂದು ಅವರು ಹೇಳಿದರು.

ನೆರೆಯ ಮತ್ತು ನಿಕಟ ಪಾಲುದಾರನಾಗಿ, ಇರಾನ್ ಪರಿಸ್ಥಿತಿಯ ಬಗ್ಗೆ ತಿಳಿವಳಿಕೆ ಹೊಂದಿರುವುದು ಮುಖ್ಯ ಎಂದು ಜೈಶಂಕರ್ ಹೇಳಿದರು.

ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಇರಾನ್ ವಿದೇಶಾಂಗ ಸಚಿವರು ನಿನ್ನೆ ಮಧ್ಯರಾತ್ರಿಯ ಸುಮಾರಿಗೆ ನವದೆಹಲಿಗೆ ಬಂದಿಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಲ್ಲ; ಅಮೆರಿಕದ ಕ್ರಮ "ಕಡಲ್ಗಳ್ಳತನ"ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

LPG Crisis: ಹೃದಯ ಶ್ರೀಮಂತಿಕೆ ಮೆರೆದ ಧ್ರುವ ಸರ್ಜಾ; ಆಟೋ ಚಾಲಕರಿಗೆ 25 ಲಕ್ಷ ರೂ. ನೆರವು - ಸರ್ಕಾರಕ್ಕೆ ಆಕ್ಷನ್‌ ಪ್ರಿನ್ಸ್‌ ಹೇಳಿದ್ದೇನು?

ಗರ್ಭಕೋಶವನ್ನೇ ಕೈಯಿಂದ ಕಿತ್ತು ಬಿಸಾಕೋಣ ಅನಿಸಿತ್ತು; ವಿಪರೀತ ಮೂಡ್ ಸ್ವಿಂಗ್ಸ್: 'ಆ' ದಿನಗಳ ಭೀಕರತೆ ಬಿಚ್ಚಿಟ್ಟ ನಟಿ ಐಶ್ವರ್ಯಾ!

Video: ಅಭಿಮಾನಿ ಎಸೆದ ಹೂವಿನ ಚೆಂಡನ್ನು ಬಾಂಬ್ ಎಂದು ಭಾವಿಸಿ ಹೆದರಿ ಓಡಿದ Thalapathy Vijay?

ಮಹಿಳಾ ಮೀಸಲಾತಿ ಕುರಿತ ಚರ್ಚೆ: ಏ.15 ಕ್ಕೆ ಎಲ್ಲಾ ವಿರೋಧ ಪಕ್ಷಗಳ ಸಭೆ- ಮಲ್ಲಿಕಾರ್ಜುನ ಖರ್ಗೆ

SCROLL FOR NEXT