ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದ ನಂತರ ಕಮೋಡೋರ್ ರಘು ಆರ್ ನಾಯರ್, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. (Photo | ANI)
ದೇಶ

S-400 ಧ್ವಂಸ, ಬ್ರಹ್ಮೋಸ್ ಕ್ಷಿಪಣಿ ನೆಲೆ ಹಾನಿ: ಪಾಕ್‌ನ ಹಸಿ ಹಸಿ ಸುಳ್ಳನ್ನು ಜಗತ್ತಿನ ಮುಂದೆ ತೆರೆದಿಟ್ಟ ಸೋಫಿಯಾ-ವ್ಯೋಮಿಕಾ ಸಿಂಗ್!

ಪಾಕಿಸ್ತಾನವು ತನ್ನ JF 17 ಯುದ್ಧ ವಿಮಾನದ ಮೂಲಕ ನಮ್ಮ ಎಸ್ 400 ಮತ್ತು ಬ್ರಹ್ಮೋಸ್ ಕ್ಷಿಪಣಿ ನೆಲೆಯನ್ನು ಹಾನಿಗೊಳಿಸಿದೆ ಎಂದು ಹೇಳಿಕೊಂಡಿದೆ. 'ಇದು ಹಸಿ ಸುಳ್ಳು' ಎಂದು ಕರ್ನಲ್ ಸೋಫಿಯಾ ಖುರೇಷಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯ ನಂತರ ರಕ್ಷಣಾ ಸಚಿವಾಲಯ ಶನಿವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿತು. ಪಾಕಿಸ್ತಾನದಿಂದ ತಪ್ಪು ಮಾಹಿತಿ ಹರಡುವ ಬಗ್ಗೆ ಮಾಹಿತಿ ನೀಡಿದರು. ಏತನ್ಮಧ್ಯೆ, ಭಾರತೀಯ ಪಡೆಗಳು ಸಂಪೂರ್ಣವಾಗಿ ಜಾಗರೂಕವಾಗಿವೆ ಮತ್ತು ಸಿದ್ಧವಾಗಿವೆ. ಮತ್ತೊಮ್ಮೆ ದಾಳಿ ನಡೆದರೆ, ನಾವು ಸೂಕ್ತ ಪ್ರತ್ಯುತ್ತರ ನೀಡುತ್ತೇವೆ ಎಂದು ನೌಕಾಪಡೆಯ ಕಮೋಡೋರ್ ರಘು ಆರ್ ನಾಯರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿ ಸೇನೆಯ ಕರ್ನಲ್ ಸೋಫಿಯಾ ಖುರೇಷಿ, ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ನೌಕಾಪಡೆಯ ಕಮೋಡೋರ್ ರಘು ಆರ್ ನಾಯರ್ ಉಪಸ್ಥಿತರಿದ್ದರು. ರಕ್ಷಣಾ ಸಚಿವಾಲಯದ ಬ್ರೀಫಿಂಗ್ ಒಟ್ಟು 9 ನಿಮಿಷಗಳ ಕಾಲ ನಡೆಯಿತು. ಪಾಕಿಸ್ತಾನವು ತನ್ನ JF 17 ಯುದ್ಧ ವಿಮಾನದ ಮೂಲಕ ನಮ್ಮ ಎಸ್ 400 ಮತ್ತು ಬ್ರಹ್ಮೋಸ್ ಕ್ಷಿಪಣಿ ನೆಲೆಯನ್ನು ಹಾನಿಗೊಳಿಸಿದೆ ಎಂದು ಹೇಳಿಕೊಂಡಿದೆ. 'ಇದು ಹಸಿ ಸುಳ್ಳು' ಎಂದು ಕರ್ನಲ್ ಸೋಫಿಯಾ ಖುರೇಷಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಎರಡನೆಯದಾಗಿ, ಸಿರ್ಸಾ, ಜಮ್ಮು, ಪಠಾಣ್‌ಕೋಟ್, ಭಟಿಂಡಾ, ನಲಿಯಾ ಮತ್ತು ಭುಜ್‌ನಲ್ಲಿರುವ ನಮ್ಮ ವಾಯುನೆಲೆಗಳು ಹಾನಿಗೊಳಗಾಗಿವೆ ಎಂದು ಪಾಕ್ ಹೇಳಿಕೊಂಡಿದ್ದು ಆ ಮಾಹಿತಿಯೂ ಸಂಪೂರ್ಣವಾಗಿ ಸುಳ್ಳು ಎಂದು ಅವರು ಒತ್ತಿ ಹೇಳಿದರು. ಮೂರನೆಯದಾಗಿ, ಪಾಕಿಸ್ತಾನದ ತಪ್ಪು ಮಾಹಿತಿ ಅಭಿಯಾನದ ಪ್ರಕಾರ, ಚಂಡೀಗಢ ಮತ್ತು ವ್ಯಾಸ್‌ನಲ್ಲಿರುವ ನಮ್ಮ ಯುದ್ಧಸಾಮಗ್ರಿ ಡಿಪೋಗಳು ಹಾನಿಗೊಳಗಾಗಿವೆಯಂತೆ, ಇದು ಸಂಪೂರ್ಣವಾಗಿ ಸುಳ್ಳು ಎಂದು ಅವರು ಹೇಳಿದರು.

ಅಷ್ಟೇ ಅಲ್ಲದೆ ಭಾರತೀಯ ಸೇನೆಯು ಮಸೀದಿಗಳನ್ನು ಹಾನಿಗೊಳಿಸಿದೆ ಎಂದು ಪಾಕಿಸ್ತಾನ ಸುಳ್ಳು ಆರೋಪಗಳನ್ನು ಮಾಡಿದೆ. ಭಾರತವು ಜಾತ್ಯತೀತ ರಾಷ್ಟ್ರ ಮತ್ತು ನಮ್ಮ ಸೇನೆಯು ಭಾರತದ ಸಾಂವಿಧಾನಿಕ ಮೌಲ್ಯದ ಅತ್ಯಂತ ಸುಂದರವಾದ ಪ್ರತಿಬಿಂಬವಾಗಿದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಅವರು ಹೇಳಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರತೀಕಾರದ ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ಸೇನೆಯು ಮಸೀದಿಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಪಾಕಿಗರು ಸುಳ್ಳು ಹೇಳಿಕೆಗಳನ್ನು ಹರಡಿದ್ದರು.

ವಿದೇಶಾಂಗ ಕಾರ್ಯದರ್ಶಿ ಹೇಳಿದಂತೆ, ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ನಾವು ಒಮ್ಮತಕ್ಕೆ ಬಂದಿದ್ದೇವೆ ಎಂದು ಕಮೋಡೋರ್ ರಘು ಆರ್ ನಾಯರ್ ಹೇಳಿದರು. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಮಾತೃಭೂಮಿಯನ್ನು ರಕ್ಷಿಸಲು ಬದ್ಧವಾಗಿವೆ' ಎಂದು ಕಮೋಡೋರ್ ರಘು ಆರ್ ನಾಯರ್ ಹೇಳಿದರು. ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಮತ್ತು ಎಚ್ಚರವಾಗಿದ್ದೇವೆ. ಪಾಕಿಸ್ತಾನದ ಯಾವುದೇ ಧೈರ್ಯಕ್ಕೆ ಬಲವಾಗಿ ಪ್ರತಿಕ್ರಿಯಿಸಲಾಗಿದೆ. ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸಿದರೆ ಅವರಿಗೆ ನಿರ್ಣಾಯಕ ಪ್ರತ್ಯುತ್ತರ ನೀಡಲಾಗುವುದು ಎಂದರು.

ವಿದೇಶಾಂಗ ಕಾರ್ಯದರ್ಶಿ ಮಿಶ್ರಿ ಶನಿವಾರ ಸಂಜೆ 6 ಗಂಟೆಗೆ ಕದನ ವಿರಾಮ ಸಂಜೆ 5 ಗಂಟೆಯಿಂದ ಜಾರಿಗೆ ಬರಲಿದೆ ಎಂದು ಹೇಳಿದರು. ಈಗ ಎರಡೂ ದೇಶಗಳು ಭೂಮಿ, ಆಕಾಶ ಮತ್ತು ಸಮುದ್ರದಿಂದ ಪರಸ್ಪರ ದಾಳಿ ಮಾಡುವುದಿಲ್ಲ. ಭಾರತ-ಪಾಕಿಸ್ತಾನ ಡಿಜಿಎಂಒಗಳು ಮೇ 12 ರಂದು ಮಧ್ಯಾಹ್ನ 12 ಗಂಟೆಗೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT