ವಾಯುದಾಳಿ ನಡುವೆ ಗುರಾಣಿಯಾಗಿ ನಾಗರಿಕ ವಿಮಾನ ಬಳಸಿದ ಪಾಕಿಸ್ತಾನ 
ದೇಶ

ಡ್ರೋನ್ ದಾಳಿ ವಿಫಲಗೊಳಿಸಲು ನಾಗರಿಕ ವಿಮಾನಗಳನ್ನು 'ರಕ್ಷಾ ಕವಚ'ವಾಗಿ ಬಳಸಿಕೊಂಡ ಪಾಕಿಸ್ತಾನ: Indian Army ಮಾಹಿತಿ

ಪಾಕಿಸ್ತಾನವು ತನ್ನ ಅಪ್ರಚೋದಿತ ವೈಮಾನಿಕ ಒಳನುಸುಳುವಿಕೆಗೆ ನಾಗರಿಕ ವಿಮಾನಗಳನ್ನು ಗುರಾಣಿಯಾಗಿ ಬಳಸಿಕೊಂಡಿದೆ ಮತ್ತು ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸುವ ಉದ್ದೇಶದಿಂದ ಗುರುವಾರ ಸಂಜೆ ವಿಫಲ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ನಡೆಸಿದೆ ಎಂದು ಭಾರತ ಆರೋಪಿಸಿದೆ.

ಇಸ್ಲಾಮಾಬಾದ್: ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಭಾರತದ ವಿರುದ್ದ ಅಪ್ರಚೋದಿತ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡುತ್ತಿರುವಂತೆಯೇ ಅತ್ತ 'ಪಾಪಿ'ಸ್ತಾನ ಭಾರತೀಯ ಸೇನೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಆಗಸದಲ್ಲಿ ನಾಗರಿಕ ವಿಮಾನಗಳನ್ನು 'ರಕ್ಷಾ ಕವಚ'ದಂತೆ ಉಪಯೋಗಿಸುತ್ತಿದೆ.

ಹೌದು.. ಪಾಕಿಸ್ತಾನವು ತನ್ನ ಅಪ್ರಚೋದಿತ ವೈಮಾನಿಕ ಒಳನುಸುಳುವಿಕೆಗೆ ನಾಗರಿಕ ವಿಮಾನಗಳನ್ನು ಗುರಾಣಿಯಾಗಿ ಬಳಸಿಕೊಂಡಿದೆ ಮತ್ತು ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸುವ ಉದ್ದೇಶದಿಂದ ಗುರುವಾರ ಸಂಜೆ ವಿಫಲ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ನಡೆಸಿದೆ ಎಂದು ಭಾರತ ಆರೋಪಿಸಿದೆ.

"ಮೇ 7 ರಂದು ಸಂಜೆ 8.30ಕ್ಕೆ ವಿಫಲವಾದ ಅಪ್ರಚೋದಿತ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ನಡೆಸಿದ್ದರೂ ಪಾಕಿಸ್ತಾನವು ತನ್ನ ನಾಗರಿಕ ವಾಯುಪ್ರದೇಶವನ್ನು ಮುಚ್ಚಲಿಲ್ಲ. ಮಾತ್ರವಲ್ಲದೇ ಕರಾಚಿ ಮತ್ತು ಲಾಹೋರ್ ವಾಯುಪ್ರದೇಶಗಳನ್ನು ನಾಗರೀಕ ವಿಮಾನಗಳಿಗೆ ಮುಚ್ಚಿದ್ದರೂ ಅಲ್ಲಿ ನಾಗರಿಕ ಪ್ರಯಾಣಿಕ ವಿಮಾನಗಳನ್ನು ನಿಯೋಜಿಸುವ ಮೂಲಕ ಭಾರತದ ವಿರುದ್ಧ ರಕ್ಷಾ ಕವಚವಾಗಿ ಬಳಸುತ್ತಿದೆ ಎಂದು ಸೇನೆ ಆರೋಪಿಸಿದೆ.

ಭಾರತದ ಮೇಲಿನ ದಾಳಿಯು ತ್ವರಿತ ವಾಯು ರಕ್ಷಣಾ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ ಎಂದು ಸಂಪೂರ್ಣವಾಗಿ ತಿಳಿದಿದ್ದ ಪಾಕಿಸ್ತಾನವು ನಾಗರಿಕ ವಿಮಾನಗಳನ್ನು ಗುರಾಣಿಯಾಗಿ ಬಳಸಿತು. ಭಾರತೀಯ ಸೇನೆ ವಾಯುದಾಳಿ ಮುಂದುವರೆಸಿರುವಂತೆಯೇ ಅದರಿಂದ ತಪ್ಪಿಸಿಕೊಳ್ಳಲು ಮತ್ತು ಭಾರತದ ಮೇಲೆ ತನ್ನ ಡ್ರೋನ್ ದಾಳಿ ನಡೆಸಲು ನಾಗರಿಕ ವಿಮಾನಗಳನ್ನು ಗುರಾಣಿಯಾಗಿ ಬಳಸುತ್ತಿದೆ ಭಾರತೀಯ ಸೇನೆ ಆರೋಪಿಸಿದೆ.

ಸಂಘರ್ಷದ ನಡುವೆ ನಾಗರಿಕ ವಿಮಾನಗಳ ನಿಯೋಜನೆ

ಭಾರತ ಮತ್ತು ಪಾಕಿಸ್ತಾನದ ನಡುವಿನ IB ಬಳಿ ಹಾರಾಟ ನಡೆಸುತ್ತಿದ್ದ ಅಂತಾರಾಷ್ಟ್ರೀಯ ವಿಮಾನಗಳು ಸೇರಿದಂತೆ ಅನುಮಾನಾಸ್ಪದ ನಾಗರಿಕ ವಿಮಾನಗಳಿಗೆ ಇದು ಸುರಕ್ಷಿತವಲ್ಲ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಗಡಿಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ತಮ್ಮ ಬ್ರೀಫಿಂಗ್‌ನಲ್ಲಿ ಹೇಳಿದರು. ಬ್ರೀಫಿಂಗ್ ಸಮಯದಲ್ಲಿ, ಭಾರತದ ವಿರುದ್ಧ ವಿಫಲವಾದ ವೈಮಾನಿಕ ದಾಳಿಯ ಸಮಯದಲ್ಲಿ ಕರಾಚಿ ಮತ್ತು ಲಾಹೋರ್ ನಡುವಿನ ವಾಯು ಮಾರ್ಗದಲ್ಲಿ ನಾಗರಿಕ ವಿಮಾನಯಾನ ಸಂಸ್ಥೆಗಳು ಹಾರಾಟ ನಡೆಸಿದ ಪುರಾವೆಗಳನ್ನು ಭಾರತ ತೋರಿಸಿದೆ.

ಆದಾಗ್ಯೂ, ಕರಾಚಿ ಮತ್ತು ಲಾಹೋರ್ ನಡುವಿನ ವಾಯು ಮಾರ್ಗದಲ್ಲಿ ಹಾರುವ ನಾಗರಿಕ ವಿಮಾನಯಾನ ಸಂಸ್ಥೆಗಳಿವೆ. ನೀವು ನೋಡಬಹುದಾದ ಇತರ ನಾಗರಿಕ ವಿಮಾನಗಳಲ್ಲಿ, ಫ್ಲೈನಾಸ್ ಏವಿಯೇಷನ್‌ನ ಏರ್‌ಬಸ್ 320 ವಿಮಾನವನ್ನು ನಾವು ಹೈಲೈಟ್ ಮಾಡಿದ್ದೇವೆ, ಅದು ಸಂಜೆ 5 ಗಂಟೆಗೆ ದಮ್ಮಾಮ್‌ನಿಂದ ಹೊರಟು ರಾತ್ರಿ 11:10 ಕ್ಕೆ ಲಾಹೋರ್‌ಗೆ ಇಳಿಯಿತು. ಭಾರತೀಯ ವಾಯುಪಡೆಯು ತನ್ನ ಪ್ರತಿಕ್ರಿಯೆಯಲ್ಲಿ ಗಣನೀಯ ಸಂಯಮವನ್ನು ಪ್ರದರ್ಶಿಸಿತು. ಇದರಿಂದಾಗಿ ಅಂತಾರಾಷ್ಟ್ರೀಯ ನಾಗರಿಕ ವಾಹಕಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT