ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಯೇ ಎಂಬುದು ಪ್ರಶ್ನೆ  
ದೇಶ

ಕದನವಿರಾಮ ಒಪ್ಪಿಕೊಂಡ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಉಲ್ಲಂಘಿಸಿದ್ದು ಹೇಗೆ? ಇದು ಏನು ಸಂದೇಶ ಸಾರುತ್ತದೆ?

ಗುಜರಾತ್ ಗೃಹ ಸಚಿವ ಹರ್ಷ್ ಸಾಂಘವಿ ಕೂಡ ಕಚ್ ಜಿಲ್ಲೆಯಲ್ಲಿ ಹಲವಾರು ಡ್ರೋನ್‌ಗಳು ಪತ್ತೆಯಾಗಿವೆ ಎಂದು ಟ್ವೀಟ್ ಮಾಡಿದ್ದಾರೆ.

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಅದನ್ನು ಉಲ್ಲಂಘಿಸಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಒಪ್ಪಂದಕ್ಕೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಹೇಳಿದ ಕೆಲವು ಗಂಟೆಗಳಲ್ಲಿ ಈ ಘಟನೆ ನಡೆದಿದೆ.

ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಶ್ರೀನಗರ ಮತ್ತು ಗುಜರಾತ್‌ನಲ್ಲಿ ಡ್ರೋನ್‌ಗಳು ಮತ್ತೆ ಕಾರ್ಯಾಚರಣೆಗೆ ಇಳಿದಿವೆ. ಭಾರತದ ವಾಯುವ್ಯ ಗಡಿಯಲ್ಲಿ ವಿವೇಚನೆಯಿಲ್ಲದ ಶೆಲ್‌ಗಳ ದಾಳಿ ನಡೆಯುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.

ಹಾಗಾದರೆ ಕದನ ವಿರಾಮಕ್ಕೆ ಏನಾಯಿತು, ಶ್ರೀನಗರದಾದ್ಯಂತ ಸ್ಫೋಟಗಳು ಕೇಳಿಬಂದಿವೆ ಎಂದು ಆಘಾತಕ್ಕೊಳಗಾದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಗುಜರಾತ್ ಗೃಹ ಸಚಿವ ಹರ್ಷ್ ಸಾಂಘವಿ ಕೂಡ ಕಚ್ ಜಿಲ್ಲೆಯಲ್ಲಿ ಹಲವಾರು ಡ್ರೋನ್‌ಗಳು ಪತ್ತೆಯಾಗಿವೆ ಎಂದು ಟ್ವೀಟ್ ಮಾಡಿದ್ದಾರೆ. ಈಗ ಸಂಪೂರ್ಣ ಬ್ಲ್ಯಾಕೌಟ್ ಜಾರಿಗೆ ತರಲಾಗುವುದು. ದಯವಿಟ್ಟು ಸುರಕ್ಷಿತವಾಗಿರಿ, ಭಯಪಡಬೇಡಿ ಎಂದು ಬರೆದುಕೊಂಡಿದ್ದರು.

ಕಚ್ ಪ್ರದೇಶದಲ್ಲಿ, ಸಂಜೆ ಕದನ ವಿರಾಮದ ಸುದ್ದಿಯನ್ನು ಸ್ವಾಗತಿಸಿದ ಜನರು, ನಂತರ ಅದು ಏಕೆ ಉಲ್ಲಂಘನೆಯಾಯಿತು ಎಂದು ಅಚ್ಚರಿಪಡುತ್ತಿದ್ದರು.

ಕದನ ವಿರಾಮದ ಬಗ್ಗೆ ಏನು? ಪಾಕಿಸ್ತಾನ ಈಗ ಅದನ್ನು ಪಾಲಿಸುತ್ತದೆ ಎಂದು ನಾವು ಹೇಗೆ ನಂಬುವುದು? ಇಲ್ಲಿ ಅಸಹನೀಯವಾಗಿ ಬಿಸಿಲಿದ್ದರೂ ಎರಡು ದೇಶಗಳ ನಡುವಿನ ಜಟಾಪಟಿಯಿಂದ ವಿದ್ಯುತ್ ಕಡಿತದಿಂದ ನಾವು ಸೆಖೆಯಿಂದ ಬಳಲಬೇಕಾಗಿದೆ ಎಂದು ಭುಜ್‌ನ ಬನ್ವಾರಿ ಲಾಲ್ ಹೇಳುತ್ತಾರೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಡರಾತ್ರಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಯನ್ನು ದೃಢಪಡಿಸಿ ಖಂಡಿಸಿದ್ದಾರೆ. ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಈ ಅತಿಕ್ರಮಣವು ಅತ್ಯಂತ ಖಂಡನೀಯ ಮತ್ತು ಪಾಕಿಸ್ತಾನ ಇದಕ್ಕೆ ಕಾರಣವಾಗಿದೆ. ಪಾಕಿಸ್ತಾನ ಈ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು, ಅತಿಕ್ರಮಣವನ್ನು ತಡೆಯಲು ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕದನ ವಿರಾಮ ಹೇಗೆ ಬಂತು ಮತ್ತು ಅದನ್ನು ಏಕೆ ಉಲ್ಲಂಘಿಸಲಾಗುತ್ತಿದೆ

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಕಾರ್ಯತಂತ್ರದ ತಜ್ಞ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಗಲ್ಫ್ ಅಧ್ಯಯನಗಳ ಮಾಜಿ ನಿರ್ದೇಶಕ ಮತ್ತು ಅಧ್ಯಕ್ಷ ಅಫ್ತಾಬ್ ಕಮಲ್ ಪಾಷಾ, ಕದನ ವಿರಾಮ ಉಲ್ಲಂಘನೆಯು ಪಾಕಿಸ್ತಾನದಲ್ಲಿ ನಾಗರಿಕ ಸರ್ಕಾರ ಮತ್ತು ಮಿಲಿಟರಿ ನಾಯಕತ್ವದ ನಡುವಿನ ಸಂಬಂಧ ಹದಗೆಟ್ಟದ್ದರ ಪರಿಣಾಮವಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದರು.

ಗಲ್ಫ್ ರಾಷ್ಟ್ರಗಳು ಮತ್ತು ಟರ್ಕಿಯ ಒತ್ತಡದ ಪರಿಣಾಮವಾಗಿ ಈ ಕದನ ವಿರಾಮ ಉಂಟಾಗಿದೆ. ಒಂದು ವೇಳೆ ಪಾಕಿಸ್ತಾನವು ಭಾರತದ ವಿರುದ್ಧ ಪರಮಾಣು ಯುದ್ಧತಂತ್ರದ ಅಸ್ತ್ರಗಳನ್ನು ಸಹ ಬಳಸಬಹುದು. ಪರಿಸ್ಥಿತಿ ಕೈ ಮೀರಿಹೋಗಬಹುದು ಎಂಬ ಭಯವಿದೆ ಎಂದಿದ್ದಾರೆ.

ಯುಎಇ, ಸೌದಿ ಅರೇಬಿಯಾ, ಈಜಿಪ್ಟ್ ಮತ್ತು ಟರ್ಕಿಯ ರಾಷ್ಟ್ರಗಳು ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವೇಷವನ್ನು ತಕ್ಷಣವೇ ಕೊನೆಗೊಳಿಸಲು ಅಮೆರಿಕದ ಮಧ್ಯಸ್ಥಿಕೆಯನ್ನು ಕೋರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಂಪರ್ಕಿಸಿದವು. ಸಂಘರ್ಷ ಈಗಾಗಲೇ ಉಲ್ಬಣಗೊಳ್ಳುತ್ತಿತ್ತು ಎಲ್ಲರೂ ಮಧ್ಯಪ್ರವೇಶಿಸದಿದ್ದರೆ ಅಪಾಯಕಾರಿ ತಿರುವು ಪಡೆಯಬಹುದಿತ್ತು ಎಂಬುದು ಅವರ ನಂಬಿಕೆಯಾಗಿದೆ.

ಟ್ರಂಪ್ ಮಧ್ಯಪ್ರವೇಶಿಸಿ ಎರಡೂ ದೇಶಗಳು ಸಂಘರ್ಷವನ್ನು ತಕ್ಷಣವೇ ಕೊನೆಗೊಳಿಸುವಂತೆ ಕೇಳಿಕೊಂಡಿದ್ದಾರೆ. ದೀರ್ಘಕಾಲದವರೆಗೆ ಪಾಕಿಸ್ತಾನಕ್ಕೆ ನೀಡಬೇಕಾದ ಐಎಂಎಫ್ (ಅಂತರರಾಷ್ಟ್ರೀಯ ಹಣಕಾಸು ನಿಧಿ) ಸಾಲವನ್ನು ತಡೆಹಿಡಿದಿದ್ದ ಅಮೆರಿಕ, ಭಾರತದೊಂದಿಗೆ ಕದನ ವಿರಾಮಕ್ಕೆ ಒಪ್ಪುವ ಷರತ್ತಿನ ಮೇಲೆ ಮೊನ್ನೆ ಶುಕ್ರವಾರ ಅದನ್ನು ವಿತರಿಸಲು ಒಪ್ಪಿಕೊಂಡಿರಬಹುದು.

ಪಾಕಿಸ್ತಾನದಲ್ಲಿ ಆರ್ಥಿಕ ಸ್ಥಿತಿ ಅಸ್ತವ್ಯಸ್ತವಾಗಿದೆ. ಇದರಿಂದಾಗಿ ಅಲ್ಲಿನ ಜನರಲ್ಲಿ ಹೆಚ್ಚುತ್ತಿರುವ ಅಶಾಂತಿ ಒಪ್ಪಂದವನ್ನು ಕದನ ವಿರಾಮವನ್ನು ಒಪ್ಪಿಕೊಳ್ಳಲು ಪ್ರೇರೇಪಿಸಿರಬೇಕು ಎಂದು ಪ್ರೊಫೆಸರ್ ಪಾಷಾ ಹೇಳುತ್ತಾರೆ. ಆದರೆ ಕದನ ವಿರಾಮದ ವಿಷಯಕ್ಕೆ ಬಂದಾಗ ನಾಗರಿಕ ಮತ್ತು ಮಿಲಿಟರಿ ನಾಯಕತ್ವದ ನಡುವೆ ಇರುವ ಅಭಿಪ್ರಾಯ ವ್ಯತ್ಯಾಸಗಳನ್ನು ಮಧ್ಯವರ್ತಿಗಳು ಪರಿಗಣಿಸಲು ವಿಫಲರಾಗಿರಬಹುದು.

ಚೀನಾ ಅಂಶ

ಕುತೂಹಲಕಾರಿಯಾಗಿ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕದನ ವಿರಾಮ ಉಲ್ಲಂಘನೆಯ ನಂತರ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಸಮಾಲೋಚನೆಯ ಮೂಲಕ ಸಮಗ್ರ ಮತ್ತು ಶಾಶ್ವತವಾದ ಕದನ ವಿರಾಮವನ್ನು ಸಾಧಿಸಬೇಕೆಂದು ಚೀನಾ ಬೆಂಬಲಿಸುತ್ತದೆ ಮತ್ತು ನಿರೀಕ್ಷಿಸುತ್ತದೆ ಎಂದು ಚೀನಾದ ಅಧಿಕೃತ ಸಂಸ್ಥೆ ಕ್ಸಿನ್ಹುವಾ ದೋವಲ್ ಅವರೊಂದಿಗಿನ ಮಾತುಕತೆ ನಡೆಸುವಾಗ ವಾಂಗ್ ಹೇಳಿರುವುದಾಗಿ ಉಲ್ಲೇಖಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

SCROLL FOR NEXT