ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ದೇಗುಲಕ್ಕೆ ಹೆಲಿಕಾಪ್ಟರ್ ಸೇವೆ ಪುನಾರಂಭಗೊಂಡಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಬಿಕ್ಕಟ್ಟಿನಿಂದಾಗಿ ಒಂದು ವಾರದಿಂದ ಹೆಲಿಕಾಪ್ಟರ್ ಸೇವೆ ಸ್ಥಗಿತಗೊಂಡಿತ್ತು ಬುಧವಾರದಿಂದ ಈ ಸೇವೆಗಳು ಪುನರಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೆರೆಯ ರಾಷ್ಟ್ರಗಳ ನಡುವಿನ ಯುದ್ಧ ಸ್ಥಗಿತಗೊಂಡ ನಂತರ ಜಮ್ಮು ಮತ್ತು ಶ್ರೀನಗರ ಸೇರಿದಂತೆ 32 ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಗಳು ಪುನರಾರಂಭವಾದ ಒಂದು ದಿನದ ನಂತರ ಹೆಲಿಕಾಪ್ಟರ್ ಸೇವೆಗಳನ್ನು ಆರಂಭಿಸಲಾಗಿದೆ.
"ಕಳೆದ ಏಳು ದಿನಗಳಿಂದ ಸ್ಥಗಿತಗೊಂಡಿದ್ದ ಮಾತಾ ವೈಷ್ಣೋದೇವಿ ದೇಗುಲದಲ್ಲಿ ಹೆಲಿಕಾಪ್ಟರ್ ಸೇವೆ ಇಂದು ಬೆಳಿಗ್ಗೆ ಪುನರಾರಂಭವಾಯಿತು" ಎಂದು ದೇವಾಲಯ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ತಿಂಗಳ ಆರಂಭದಿಂದ ತೀವ್ರ ಕುಸಿತ ಕಂಡ ನಂತರ ಯಾತ್ರಿಕರ ಸಂಖ್ಯೆಯೂ ಹೆಚ್ಚಾಗಿದೆ.
ಯಾತ್ರಿಕರಿಗೆ ಬ್ಯಾಟರಿ ಕಾರ್ ಸೇವೆಯೂ ಲಭ್ಯವಿದೆ ಎಂದು ಅಧಿಕಾರಿ ಹೇಳಿದ್ದಾರೆ. ಕಳೆದ ವರ್ಷ 94.84 ಲಕ್ಷದಷ್ಟಿದ್ದ ಈ ಸೇವೆ ಈ ವರ್ಷದ ಜನವರಿಯಿಂದ 30 ಲಕ್ಷಕ್ಕೂ ಹೆಚ್ಚು ಯಾತ್ರಿಕರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದರು ಮತ್ತು ಜನದಟ್ಟಣೆ ಹಲವು ಪಟ್ಟು ಹೆಚ್ಚಾಗುತ್ತದೆ ಎಂದು ಆಶಿಸಿದರು.
"ಹೆಲಿಕಾಪ್ಟರ್ ಸೇವೆ ಪುನರಾರಂಭ ಮತ್ತು ದೇವಾಲಯ ಮಂಡಳಿಯು ಮಾಡಿದ ವ್ಯವಸ್ಥೆಗಳ ಬಗ್ಗೆ ನಮಗೆ ಸಂತೋಷವಾಗಿದೆ" ಎಂದು ದೆಹಲಿಯ ಯಾತ್ರಿಕ ಶುಭಂ ಕುಮಾರ್ ಹೇಳಿದ್ದಾರೆ.