ಮದುವೆ ಪಾರ್ಟಿಯಲ್ಲಿ ಯುವತಿ ಜೊತೆ 'ಅಶ್ಲೀಲ ಆಟ' 
ದೇಶ

Video: ಮದುವೆ ಪಾರ್ಟಿಯಲ್ಲಿ ಯುವತಿ ಜೊತೆ 'ಅಶ್ಲೀಲ ಆಟ'; BJP ನಾಯಕನ ವಿರುದ್ಧ ವ್ಯಾಪಕ ಆಕ್ರೋಶ

ಮೂಲಗಳ ಪ್ರಕಾರ ವೈರಲ್ ಆಗಿರುವ ವಿಡಿಯೋ ಸುಮಾರು 20-25 ದಿನಗಳ ಹಳೆಯದು ಎಂದು ಹೇಳಲಾಗಿದ್ದು, ಇದು ಬಿಹಾರದ ವಿವಾಹ ಸಮಾರಂಭದ ವಿಡಿಯೋ ಎನ್ನಲಾಗಿದೆ.

ಲಖನೌ: ನಾಡು ಹೋಗು ಅಂದ್ರೆ... ಕಾಡು ಬಾ ಎನ್ನುವ ವಯಸ್ಸಲ್ಲಿ ಬಿಜೆಪಿ ಪಕ್ಷದ ಹಿರಿಯ ನಾಯಕನೊಬ್ಬ ತನ್ನ ಅಶ್ಲೀಲ ವರ್ತನೆಯಿಂದ ಇದೀಗ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಹೌದು.. ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಹಿರಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ರಾಸ್ರಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬಬ್ಬನ್ ಸಿಂಗ್ ರಘುವಂಶಿ ಅವರ ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ, ಬಬ್ಬನ್ ಸಿಂಗ್ ವಿವಾಹ ಸಮಾರಂಭದಲ್ಲಿ ಮಹಿಳಾ ನರ್ತಕಿಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದು, ಈ ವಿಡಿಯೋ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ ವೈರಲ್ ಆಗಿರುವ ವಿಡಿಯೋ ಸುಮಾರು 20-25 ದಿನಗಳ ಹಳೆಯದು ಎಂದು ಹೇಳಲಾಗಿದ್ದು, ಇದು ಬಿಹಾರದ ವಿವಾಹ ಸಮಾರಂಭದ ವಿಡಿಯೋ ಎನ್ನಲಾಗಿದೆ.

ಇದರಲ್ಲಿ, ಬಬ್ಬನ್ ಸಿಂಗ್ ರಘುವಂಶಿ ಮಹಿಳಾ ನರ್ತಕಿಯೊಂದಿಗೆ ಅಶ್ಲೀಲ ಕೃತ್ಯಗಳನ್ನು ಮಾಡುವುದನ್ನು ಕಾಣಬಹುದು. ಬಿಜೆಪಿ ನಾಯಕ ಬಬನ್ ಸಿಂಗ್ ರಘುವಂಶಿ ಮಹಿಳಾ ಡ್ಯಾನ್ಸರ್ ಜೊತೆ ಅಶ್ಲೀಲವಾಗಿ ವರ್ತಿಸಿ ಆಕೆಯ ಖಾಸಗಿ ಅಂಗಳನ್ನು ಮುಟ್ಟಿ ವಿಕೃತ ಆನಂದ ಪಡೆಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ವಿಡಿಯೋ ಬಿಡುಗಡೆಯಾದ ನಂತರ, ಬಲ್ಲಿಯಾ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಶಾಸಕ ಬಬನ್ ಸಿಂಗ್ ರಘುವಂಶಿ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ. ಬಬ್ಬನ್ ಸಿಂಗ್ ಇದನ್ನು ಬನ್ಸ್‌ದಿಹ್ ಶಾಸಕ ಕೇತ್ಕಿ ಸಿಂಗ್ ಅವರ ಬೆಂಬಲಿಗರ ಪಿತೂರಿ ಎಂದು ಕರೆದಿದ್ದಾರೆ ಮತ್ತು ಪೊಲೀಸರಿಗೆ ದೂರು ನೀಡುವ ಬಗ್ಗೆ ಮಾತನಾಡಿದ್ದಾರೆ. ಆದರೆ ಕೇತ್ಕಿ ಸಿಂಗ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ.

ಅಂದಹಾಗೆ ಬಬ್ಬನ್ ಸಿಂಗ್ ರಘುವಂಶಿ ಉತ್ತರ ಪ್ರದೇಶ ಸರ್ಕಾರದ ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಅವರ ಸಂಬಂಧಿಯಾಗಿದ್ದು, ಬಿಜೆಪಿ ಅವರನ್ನು ಬನ್ಸ್‌ದಿಹ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ ಎಂದು ಅವರು ಹೇಳಿದರು. ಅವರ ರಾಜಕೀಯ ಸಾಧನೆಗಳಿಗೆ ಮಸಿ ಬಳಿಯಲು, ಬನ್ಸ್ದಿಹ್ ಶಾಸಕ ಕೇತ್ಕಿ ಸಿಂಗ್ ಅವರ ಬೆಂಬಲಿಗರು ಈ ಸುಳ್ಳು ವೀಡಿಯೊವನ್ನು ವೈರಲ್ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ದೂರು ನೀಡುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ