ಸಾಂದರ್ಭಿಕ ಚಿತ್ರ 
ದೇಶ

ಭಾರತದ ನಿರುದ್ಯೋಗ ಪ್ರಮಾಣ ಏಪ್ರಿಲ್‌ನಲ್ಲಿ ಶೇ. 5.1: ಕೇಂದ್ರ ಸರ್ಕಾರ ಮಾಹಿತಿ

ಪುರುಷರಲ್ಲಿ ನಿರುದ್ಯೋಗ ಪ್ರಮಾಣ ಶೇ. 5.2 ರಷ್ಟಿದ್ದು, ಮಹಿಳೆಯರ ನಿರುದ್ಯೋಗ ಪ್ರಮಾಣ ಶೇ 5 ರಷ್ಟಿದ್ದೆ. ಮಹಿಳೆಯರಿಗಿಂತ ಪುರುಷರ ನಿರುದ್ಯೋಗ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ ಎಂದು ತೋರಿಸಲಾಗಿದೆ.

ಬೆಂಗಳೂರು: ಭಾರತದಲ್ಲಿ ಏಪ್ರಿಲ್ ನಲ್ಲಿ ನಿರುದ್ಯೋಗ ಪ್ರಮಾಣ ಶೇ. 5.1 ಕ್ಕೆ ತಗ್ಗಿದೆ. ಇದೇ ಮೊದಲ ಬಾರಿಗೆ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ, ಮಾಸಿಕ ಕಾರ್ಮಿಕರ ಸಮೀಕ್ಷೆಯನ್ನು (PLFS) ಬಿಡುಗಡೆ ಮಾಡಿದೆ.

ಇದರಲ್ಲಿ ಪುರುಷರಲ್ಲಿ ನಿರುದ್ಯೋಗ ಪ್ರಮಾಣ ಶೇ. 5.2 ರಷ್ಟಿದ್ದು, ಮಹಿಳೆಯರ ನಿರುದ್ಯೋಗ ಪ್ರಮಾಣ ಶೇ 5 ರಷ್ಟಿದ್ದೆ. ಮಹಿಳೆಯರಿಗಿಂತ ಪುರುಷರ ನಿರುದ್ಯೋಗ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ ಎಂದು ತೋರಿಸಲಾಗಿದೆ.

ಇಲ್ಲಿಯವರೆಗೆ ಸಮೀಕ್ಷೆಯನ್ನು ತ್ರೈಮಾಸಿಕ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತಿತ್ತು. ಇನ್ನು ಮುಂದೆ ಮಾಸಿಕ PLFS ಬಿಡುಗಡೆಯಿಂದ ಸಮಯೋಚಿತ ನೀತಿ ರೂಪಿಸುವಲ್ಲಿ ನೆರವಾಗುತ್ತದೆ. 15-29 ವಯಸ್ಸಿನವರಲ್ಲಿ ನಿರುದ್ಯೋಗ ಪ್ರಮಾಣ ಶೇ. 13.8 ರಷ್ಟಿದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗದ ಪ್ರಮಾಣ ಶೇ. 12. 3 ರಷ್ಟಿದೆ. ನಗರ ಪ್ರದೇಶಗಳಲ್ಲಿ ಇದು ಶೇ. 17.2 ರಷ್ಟಿದೆ.

ಏಪ್ರಿಲ್ 2025 ರ ಮಾಸಿಕ ಮಾಹಿತಿಯು ಭಾರತದ ಕಾರ್ಮಿಕರ ಸಂಖ್ಯೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಗಮನಾರ್ಹವಾದ ಮಾಹಿತಿ ನೀಡುತ್ತದೆ ಎಂದು ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್‌ನ ಅಸೋಸಿಯೇಟ್ ಡೈರೆಕ್ಟರ್ ಪರಾಸ್ ಜಸ್ರೈ ಹೇಳಿದ್ದಾರೆ.

"ಒಟ್ಟಾರೆ ನಿರುದ್ಯೋಗ ದರವು 5.1% ರಷ್ಟು ಇದ್ದರೂ, ಗ್ರಾಮೀಣ-ನಗರದ ಅಂತರವು ನಗರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯ ಒತ್ತಡವನ್ನು ಸೂಚಿಸುತ್ತದೆ (ಗ್ರಾಮೀಣ ನಿರುದ್ಯೋಗ ಪ್ರಮಾಣ ಶೇ. 4.5 ,ನಗರ ನಿರುದ್ಯೋಗ ಪ್ರಮಾಣ 6.5%). ವಯಸ್ಸು ಮತ್ತು ಲಿಂಗದ ಆಧಾರದ ಮೇಲೆ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಹಿಳೆಯರಿಗಿಂತ ಯುವಕರ ನಿರುದ್ಯೋಗ ಪ್ರಮಾಣ (ಶೇ.23.7) ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

"ಆದಾಗ್ಯೂ, ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿಯು ವಿರುದ್ಧವಾಗಿದೆ. ಇದರಲ್ಲಿ ಮಹಿಳೆಯರಿಗೆ ಹೋಲಿಸಿದರೆ ಯುವಕರ ನಿರುದ್ಯೋಗ ಪ್ರಮಾಣ (10.7% v 13.0%) ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಗಳು ಮತ್ತು ಮಹಿಳೆಯರಿಗೆ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಕಡಿಮೆ ಉದ್ಯೋಗಾವಕಾಶಗಳು ಇದಕ್ಕೆ ಕಾರಣ ಎಂದು ಅವರು ಹೇಳಿದರು.

CIELHR MD ಮತ್ತು CEO ಆದಿತ್ಯ ನಾರಾಯಣ ಮಿಶ್ರಾ, ಮಾಸಿಕ ಮಾಹಿತಿಯು, ಇನ್ನಷ್ಟು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಹಾಗೂ ಉದ್ದೇಶಿತ ಗುರಿ ಸಾಧಿಸುವಲ್ಲಿ ನೆರವಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT