ಇಒಎಸ್ -09 (ಭೂಸರ್ವೇಕ್ಷಣಾ) ಉಪಗ್ರಹ ಪಿಎಸ್‌ಎಲ್‌ವಿ -ಸಿ61 ರಾಕೆಟ್ 
ದೇಶ

PSLVC61 EOS-09 satellite: ಯಶಸ್ವಿಯಾಗಿ ಉಡಾವಣೆಗೊಂಡ ಇಸ್ರೋ 101ನೇ ಉಪಗ್ರಹಕ್ಕೆ ತಾಂತ್ರಿಕ ದೋಷ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭಾನುವಾರ ಬೆಳಗ್ಗೆ 5.59ಕ್ಕೆ ಇಒಎಸ್ -09 (ಭೂಸರ್ವೇಕ್ಷಣಾ) ಉಪಗ್ರಹ ಉಡಾವಣೆ ಮಾಡಿ ಸಾಧನೆ ಮಾಡಿತ್ತು.

ಶ್ರೀಹರಿಕೋಟಾ: ಇಸ್ರೋ 101ನೇ ಉಪಗ್ರಹ ಉಡಾವಣೆ ಮಾಡಿ ಇತಿಹಾಸ ಸೃಷ್ಟಿಸಿದೆ. ಆದರೆ, ಯಶಸ್ವಿಯಾಗಿ ಉಡಾವಣೆ ಮಾಡಿದ ಉಪಗ್ರಹದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭಾನುವಾರ ಬೆಳಗ್ಗೆ 5.59ಕ್ಕೆ ಇಒಎಸ್ -09 (ಭೂಸರ್ವೇಕ್ಷಣಾ) ಉಪಗ್ರಹ ಉಡಾವಣೆ ಮಾಡಿ ಸಾಧನೆ ಮಾಡಿತ್ತು. ಈ ಐತಿಹಾಸಿಕ ಮೈಲಿಗಲ್ಲನ್ನು ಇಸ್ರೋ ಯಶಸ್ವಿಯಾಗಿ ನೆರವೇರಿಸಿತ್ತು.

ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಇಸ್ರೋದ ಇಒಎಸ್ -09 (ಭೂಸರ್ವೇಕ್ಷಣಾ) ಉಪಗ್ರಹ ಪಿಎಸ್‌ಎಲ್‌ವಿ -ಸಿ61 ರಾಕೆಟ್ ಹೊತ್ತು ಯಶಸ್ವಿಯಾಗಿ ಉಡಾವಣೆಗೊಂಡಿತು. ಆದರೆ, ಇದೀಗ 3ನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ಇಒಎಸ್-09 ಉಪಗ್ರಹದ ಉಡಾವಣೆಯ 3 ನೇ ಹಂತದಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಕಂಡು ಬಂದಿದ್ದು, ಇದರಿಂದಾಗಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಇಸ್ರೋ ಮುಖ್ಯಸ್ಥ ವಿ ನಾರಾಯಣನ್ ಅವರು ಹೇಳಿದ್ದಾರೆ.

ಮೂರನೇ ಹಂತದ ಕಾರ್ಯನಿರ್ವಹಣೆಯ ಸಮಯದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು, ಕಾರ್ಯಾಚರಣೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಈ ಕುರಿತು ವಿಶ್ಲೇಷಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲೂ ಪೋಸ್ಟ್ ಮಾಡಿರುವ ಇಸ್ರೋ, ಇಂದು 101 ನೇ ಉಡಾವಣೆಯನ್ನು ಪ್ರಯತ್ನಿಸಲಾಯಿತು, ಪಿಎಸ್‌ಎಲ್‌ವಿ-ಸಿ 61 ಕಾರ್ಯಕ್ಷಮತೆ 2 ನೇ ಹಂತದವರೆಗೆ ಸಾಮಾನ್ಯವಾಗಿತ್ತು. 3 ನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗದ್ದು, ಕಾರ್ಯಾಚರಣೆ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದೆ.

PSLV-C-61 ರ ಹಾರಾಟದ ಅನುಕ್ರಮವು ವಿವಿಧ ಹಂತಗಳನ್ನು ಒಳಗೊಂಡಿದೆ, PS1 ಮತ್ತು PSOM ಅನ್ನು ನೆಲದಲ್ಲಿ ಉಡಾಯಿಸುವುದರಿಂದ ಹಿಡಿದು, ವಿವಿಧ ವಿಭಾಗಗಳನ್ನು ಬೇರ್ಪಡಿಸುವ ಹಂತವನ್ನು ಹೊಂದಿಗೆ. ಅಂತಿಮವಾಗಿ ಉಪಗ್ರಹವನ್ನು ರಾಕೆಟ್‌ನಿಂದ ಬೇರ್ಪಡಿಸುತ್ತದೆ. ಇದರಂತೆ ಮೂರನೇ ಹಂತದಲ್ಲಿ ಸಮಸ್ಯೆ ಎದುರಾಗಿದೆ. ಇದು ಘನ ರಾಕೆಟ್ ಮೋಟಾರ್ ಆಗಿದ್ದು, ಇದು ಉಡಾವಣೆಯ ಹಂತದ ನಂತರ ಮೇಲಿನ ಹಂತಕ್ಕೆ ಒತ್ತಡ ಹೆಚ್ಚಾಗುತ್ತದೆ. ಈ ಹಂತವು 240 ಕಿಲೋನ್ಯೂಟನ್‌ಗಳ ಗರಿಷ್ಠ ಒತ್ತಡವನ್ನು ಹೊಂದಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

SCROLL FOR NEXT