ಕಮಲ್ ಹಾಸನ್-ಎಂ ಕೆ ಸ್ಟಾಲಿನ್  
ದೇಶ

Kamal Hassan ರಾಜ್ಯಸಭೆ ಪ್ರವೇಶ ಅಧಿಕೃತ: ಡಿಎಂಕೆ ಸಂಸದೆಯಾಗಿ ಕವಯಿತ್ರಿ ಸಲ್ಮಾ ಕೂಡ ಮೇಲ್ಮನೆಗೆ

2024 ರ ಲೋಕಸಭಾ ಚುನಾವಣೆ ಮೈತ್ರಿಕೂಟದ ಸಮಯದಲ್ಲಿ ಮಾಡಿದ ಬದ್ಧತೆಯನ್ನು ಪೂರೈಸುವ ಮೂಲಕ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀಧಿ ಮೈಯಂಗೆ ಒಂದು ಸ್ಥಾನವನ್ನು ಪಕ್ಷ ನೀಡಿದೆ.

ಚೆನ್ನೈ: ಮೊನ್ನೆ ಚೆನ್ನೈಯಲ್ಲಿ ಥಗ್ ಲೈಫ್ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಬಗ್ಗೆ ಹೇಳಿಕೆ ನೀಡಿ ಕನ್ನಡಿಗರಿಂದ ತೀವ್ರ ಟೀಕೆಗೆ ಗುರಿಯಾಗಿರುವ ಖ್ಯಾತ ನಟ ಕಮಲ್ ಹಾಸನ್ ಅವರ ಮಕ್ಕಳ್ ನೀದಿ ಮೈಯಾಮ್ ಪಕ್ಷಕ್ಕೆ ಒಂದು ರಾಜ್ಯಸಭೆ ಟಿಕೆಟ್ ಸಿಕ್ಕಿದೆ.

ದ್ರಾವಿಡ ಮುನ್ನೇತ್ರ ಕಳಗಂ (DMK) ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಮೇಲ್ಮನೆಯಲ್ಲಿ ತನ್ನ ಹಾಲಿ ಸದಸ್ಯ ಹಿರಿಯ ವಕೀಲ ಪಿ ವಿಲ್ಸನ್ ಅವರನ್ನು ಮರು ನಾಮನಿರ್ದೇಶನ ಮಾಡಿದ್ದು, ಇತರ ಇಬ್ಬರಾದ ಸೇಲಂ ಮೂಲದ ಪಕ್ಷದ ನಾಯಕ ಎಸ್.ಆರ್. ಶಿವಲಿಂಗಂ ಮತ್ತು ಕವಿ, ಬರಹಗಾರ ಮತ್ತು ಪಕ್ಷದ ಪದಾಧಿಕಾರಿ ರುಕಯ್ಯ ಮಲಿಕ್ ಅಲಿಯಾಸ್ ಕವಿಗ್ನರ್ ಸಲ್ಮಾ ಅವರನ್ನು ಹೆಸರಿಸಿದೆ.

2024 ರ ಲೋಕಸಭಾ ಚುನಾವಣೆ ಮೈತ್ರಿಕೂಟದ ಸಮಯದಲ್ಲಿ ಮಾಡಿದ ಬದ್ಧತೆಯನ್ನು ಪೂರೈಸುವ ಮೂಲಕ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀಧಿ ಮೈಯಂಗೆ ಒಂದು ಸ್ಥಾನವನ್ನು ಪಕ್ಷ ನೀಡಿದೆ. ಈ ಮೂಲಕ ನಟ ಹಾಗೂ ರಾಜಕಾರಣಿಯಾಗಿರುವ ಕಮಲ್ ಹಾಸನ್ ಅವರು ರಾಜ್ಯಸಭೆ ಪ್ರವೇಶಿಸುವ ನಿರೀಕ್ಷೆಯಿದೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ, ಕಮಲ್ ಹಾಸನ್ ಅವರು ಲೋಕಸಭೆ ಚುನಾವಣೆಗೆ ಮೊದಲು ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಶೀಲ ಒಕ್ಕೂಟ (SPA)ವನ್ನು ಸೇರಿದ್ದರು, ಚುನಾವಣೆಯಲ್ಲಿ ಸ್ಪರ್ಧಿಸದೆ ಬೆಂಬಲವನ್ನು ಘೋಷಿಸಿದ್ದರು. ಪ್ರತಿಯಾಗಿ, ಡಿಎಂಕೆ ಎಂಎನ್‌ಎಂಗೆ ರಾಜ್ಯಸಭಾ ಸ್ಥಾನವನ್ನು ನೀಡುವ ಭರವಸೆ ನೀಡಿತ್ತು, ಆ ಭರವಸೆಯನ್ನು ಈಗ ಪೂರೈಸಿದೆ.

ತಮಿಳು ನಾಡು ರಾಜ್ಯದ ಆರು ಪ್ರಸ್ತುತ ಸಂಸದರಾದ ಅನ್ಬುಮಣಿ ರಾಮದಾಸ್, ಎಂ ಷಣ್ಮುಗಂ, ಎನ್ ಚಂದ್ರಶೇಖರನ್, ಎಂ ಮೊಹಮ್ಮದ್ ಅಬ್ದುಲ್ಲಾ, ಪಿ ವಿಲ್ಸನ್ ಮತ್ತು ವೈಕೊ ಅವರ ಅವಧಿ ಜುಲೈ 25 ರಂದು ಮುಕ್ತಾಯಗೊಳ್ಳಲಿದ್ದು, ಖಾಲಿ ಹುದ್ದೆಗಳಿಗೆ ಚುನಾವಣೆ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೆನೆಜುವೆಲಾ ಉಕ್ಕಿನ ಮಹಿಳೆ ಮಾರಿಯಾಗೆ ನೊಬೆಲ್ ಶಾಂತಿ ಪ್ರಶಸ್ತಿ; ಸ್ವಘೋಷಿತ ಶಾಂತಿದೂತ ಟ್ರಂಪ್‌ಗೆ ಮುಖಭಂಗ

'ಗಂಡಾಂತರ..ಈ ವರ್ಷವೇ ಕೊನೆ, ಹಾಸನಾಂಬೆ ಸಾನಿಧ್ಯವೇ ಇರಲ್ಲ..': ಬ್ರಹ್ಮಾಂಡ ಗುರೂಜಿ 'ಭಯಾನಕ ಭವಿಷ್ಯ'

ಕಾಂತಾರ: ಅಧ್ಯಾಯ 1 ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ವಾರವೇ 500 ಕೋಟಿ ಕ್ಲಬ್‌ಗೆ ಸೇರ್ಪಡೆ, ಹೊಂಬಾಳೆ ಅಧಿಕೃತ ಮಾಹಿತಿ!

ಪಾಕಿಸ್ತಾನಕ್ಕೆ ಭಾರತ ಠಕ್ಕರ್: ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಜೊತೆ ಹೊಸ ಸಂಬಂಧ, ಕಾಬೂಲ್ ನಲ್ಲಿ ರಾಯಭಾರ ಕಚೇರಿ ಪುನಃಸ್ಥಾಪನೆ!

'ಸೂಪರ್ ಸ್ಟಾರ್ ಗಳು 8 ಗಂಟೆ ಮಾತ್ರ ಕೆಲಸ ಮಾಡ್ತಾರೆ, ಅದರ ಬಗ್ಗೆ ಸುದ್ದಿನೇ ಇಲ್ಲ': Kalki, Spirit ಸಿನಿಮಾಗಳಿಂದ ಕೊಕ್, ಕೊನೆಗೂ ಮೌನ ಮುರಿದ ದೀಪಿಕಾ ಪಡುಕೋಣೆ

SCROLL FOR NEXT